ತಪ್ತ ಮುದ್ರಾ ಧಾರಣೆ

ತಪ್ತ ಮುದ್ರಾ ಧಾರಣೆ

 

 

 

 

 

 

 

 

 

 

ತಪ್ತ ಮುದ್ರಾಧಾರಣೆಯನ್ನು ವಿಶೇಷವಾಗಿ ಆಷಾಢ ಶುದ್ಧ ಏಕಾದಶಿಯಂದು ಮಾಡಬೇಕು. ಈ ವಿಷಯವು ವರಾಹ ಪುರಾಣದಲ್ಲಿ ಉಲ್ಲೇಖಿತವಾಗಿದೆ. ವರಾಹದೇವರಲ್ಲಿ ಧರಣಿ ದೇವಿಯು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ವರಾಹದೇವರು ” ಬ್ರಾಹ್ಮಣರಿಗೆ ವಿಶೇಷವಾಗಿ ನನ್ನ ಮುದ್ರೆಗಳಾದ ತಪ್ತ ಮುದ್ರೆಗಳು ಅಂದರೆ ಬಿಸಿಯಾದ (ಬೆಂದ) ಮುದ್ರೆಗಳನ್ನು ಧರಿಸಬೇಕು. ಎಂದು ಹೇಳುತ್ತಾನೆ. ಸಂಧ್ಯಾವಂದನೆಯ ಸಮಯದಲ್ಲಿ ಶಂಖ ಚಕ್ರ ಗದಾ ಪದ್ಮಗಳು ಇರುತ್ತವೆ. ಆದರೆ ತಪ್ತ ಮುದ್ರಾಧಾರಣೆಯ ಸಮಯದಲ್ಲಿ 2 ಶಂಖಗಳು ಮತ್ತು 3 ಚಕ್ರವನ್ನು ಧರಿಸುತ್ತಾರೆ. ಮುದ್ರೆಯನ್ನು ಯಾವುದೇ ಸಾಮಾನ್ಯ ಬೆಂಕಿಯಲ್ಲಿ ಕಾಯಿಸಿರುವುದ್ದಾಗಿರುವುದಿಲ್ಲ. ನಮ್ಮ ಗುರುಗಳ ಮುಖೇನ ಸುದರ್ಶನ ಹೋಮವನ್ನು ಆಚರಿಸಿ ಆ ಹೋಮದ ಕೆಂಡದಲ್ಲಿ ಭಗವಂತನ ಚಿಹ್ನೆಗಳಾದ ಶಂಖ ಚಕ್ರದ ಅಚ್ಚನ್ನು ಕಾಯಿಸಿ ಅದನ್ನು ನಮ್ಮ ದೇಹದ ಮೇಲೆ ಧರಿಸಬೇಕು. ನಮಗಿಂತ ಹಿರಿಯರು ಹಾಗೂ ಗುರುಗಳ ಮೂಲಕವೇ ಮುದ್ರಾಧಾರಣೆಯನ್ನು ಮಾಡಬೇಕು ಎಂದು ವರಾಹ ಪುರಾಣದಲ್ಲಿ ಉಲ್ಲೇಖವಿದೆ. ಪುರುಷರು ಬಲಭಾಗ ಭುಜ, ಬಲ ಭಾಗದ ಎದೆಯ ಮೇಲೆ ಶಂಖವನ್ನು ಎಡ ಭಾಗದ ಭುಜ ಎಡ ಭಾಗದ ಎದೆ ಹಾಗೂ ಹೊಟ್ಟೆಯ ಮೇಲೆ ಶಂಖವನ್ನು ಧರಿಸಬೇಕು. ಮಹಿಳೆಯರು ಬಲ ಗೈಯಲ್ಲಿ ಚಕ್ರ ಎಡ ಗೈಯಲ್ಲಿ ಶಂಖವನ್ನು ಧರಿಸಬೇಕೆಂದು ಉಲ್ಲೇಖವಿದೆ. ಕೇವಲ ಬ್ರಾಹ್ಮಣರು ಮಾತ್ರವಲ್ಲ ನಾಲ್ಕು ವರ್ಣದವರು ಅಂದರೆ ಭ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರರು ಮುದ್ರೆಗಳನ್ನು ಧರಿಸಬೇಕು. ತಿಲಕ ಮತ್ತು ಮುದ್ರಾ ಧಾರಣೆ ಚಾತುರ್ವಣದವರಿಗೂ ಕಡ್ಡಾಯವೆಂದು ವರಾಹ ಪುರಾಣ ಹೇಳುತ್ತದೆ.

ದಿನ ನಿತ್ಯವೂ ಸಂಧ್ಯಾವಂದನೆಯಲ್ಲಿ ಧರಿಸುವ ತಿಲಕ ನಾಮ ಮುದ್ರೆಗಳು ದಿನ ನಿತ್ಯದ ಉಪಾಸನೆಗೆ ಹಾಗೂ ಚಾತುರ್ಮಾಸದ ವ್ರತ ಸಂಕಲ್ಪಗೊಳ್ಳುವ ವಿಶೇಷ ಸಂದರ್ಭದಲ್ಲಿ ತಪ್ತ ಮುದ್ರಾಧಾರಣೆ ಅತೀ ಅವಶ್ಯಕವೆಂಬುದು ಪುರಾಣದ ಮಾತಾಗಿದೆ. ಪ್ರತಿಯೊಬ್ಬ ವಿಷ್ಣು ಭಕ್ತನು ಈ ತಪ್ತ ಮುದ್ರಾಧಾರಣೆಯಣೆಯನ್ನು ಮಾಡಿಸಿಕೊಳ್ಳುತ್ತಾನೆ. ಹುಟ್ಟಿದ ಸಮಯದಲ್ಲಿ ನಾಮಕರಣ ಸಂಸ್ಕಾರ ಮತ್ತು ದಹನ ಕಾರ್ಯದಸಮಯದಲ್ಲಿಯೂ ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳಬೇಕು ಎಂಬುದು ವರಾಹ ಪುರಾಣದಲ್ಲಿ ಉಲ್ಲೇಖಿತವಾಗಿದೆ.

ಈ ವಿಚಾರವು ಪದ್ಮ ಪುರಾಣದಲ್ಲಿಯೂ ಉಲ್ಲೇಖಿತವಾಗಿದೆ, ಮತ್ಸ್ಯ ಪುರಾಣ, ಸ್ಕಂದ ಪುರಾಣ ಮೊದಲಾದ ಪುರಾಣಗಳಲ್ಲಿ ಕೂಡ ತಪ್ತ ಮುದ್ರಾಧಾರಣೆಯ ಉಲ್ಲೇಖವಿದೆ.

 

 

 

 

 

 

 

 

 

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!