ಮಹಾನ್ ಸ್ವತಂತ್ರ ಹೋರಾಟಗಾರ ಶ್ರೀ ಮೈಲಾರ ಮಹದೇವಪ್ಪ..

ಹುತಾತ್ಮ ದಿವಸ ಏಪ್ರಿಲ್ ೧

ಮಹಾನ್ ಸ್ವತಂತ್ರ ಹೋರಾಟಗಾರ ಶ್ರೀ ಮೈಲಾರ ಮಹದೇವಪ್ಪ..

 

 

 

 

 

 

 

 

 

 

– ಮಹೇಶ ನೀಲಕಂಠ ಚನ್ನಂಗಿ, ಚೆನ್ನಮ್ಮನ ಕಿತ್ತೂರು..

(ಮೈಲಾರ ಮಹಾದೇವಪ್ಪ ಮತ್ತು ಅವರ ಸಹಚರರ ಸ್ಮರಣಾರ್ಥ ವಿಶೇಷ ಲೇಖನ).

೧೯೪೩ ಏಪ್ರಿಲ್ ೧, ಬ್ರಿಟಿಷರ ವಿರುದ್ದ ಹೋರಾಡುತ್ತ ಬ್ರಿಟಿಷರ ಗುಂಡಿಗೆ ಬಲಿಯಾದದ್ದು.. ಆಗ ಆ ಅಪ್ರತಿಮ ದೇಶ ಭಕ್ತನ ವಯಸ್ಸು ಕೇವಲ ೩೨..
ಕರ್ನಾಟಕದ ಚಂದ್ರಶೇಖರ ಆಜಾದ ಎಂದೆ ಖ್ಯಾತಿಯಾದ ಮತ್ತು ಅವರ ಮಾದರಿಯಲ್ಲಿ ಹೋರಾಡಿದ ಅಪ್ರತಿಮ ವೀರ ಹೋರಾಟಗಾರ – ಮೈಲಾರ ಮಹಾದೇವಪ್ಪ…

೧೯೩೦ ಪೆಬ್ರವರಿ ೧೩ ರಂದು ಸಬರಮತಿ ಆಶ್ರಮದಿಂದ ದಂಡಿವರೆಗೆ ನಡೆಸುವ ಪಾದಯಾತ್ರೆಗೆ ಕನ್ನಡಿಗನೂರ್ವನನ್ನು ಕಳುಹಿಸಲು ಗಾಂಧಿಜೀಯವರು ತಿಳಿಸಿದಾಗ ಆಯ್ಕೆಯಾದದ್ದು ಹಾವೇರಿಯ ಇದೇ ಮೈಲಾರ ಮಹಾದೇವಪ್ಪ..
ಐದು ಅಡಿ ಹತ್ತು ಇಂಚು ಎತ್ತರದ ಗಂಬೀರ ನಿಲುವಿನ ವ್ಯಕ್ತಿತ್ವ…. ಗಾಂದೀಜೀಯವರು ಆಯ್ಕೆ ಮಾಡಿದ ೭೯ ಜನರಲ್ಲಿ, ಆಯ್ಕೆಯಾದ ಎಕಮೇವ ಕನ್ನಡಿಗ…
೩೦೦ ಕಿಮೀ ದಂಡಿ ಪಾದಯಾತ್ರೆಯಲ್ಲಿ ಗಾಂಧಿಜಿಯವರ ಬಲಗಡೆ ಮುಂದಿನ ಸರತಿಯಲ್ಲಿ ನಿಂತು ದಂಡಿಯಾತ್ರೆ ಯಶಸ್ವಿಗೂಳಿಸಿದರು..
ಇದನ್ನು ಅಂದಿನ ಭಾವಚಿತ್ರಗಳಲ್ಲಿ ಕಾಣಬಹುದು.. ದಂಡಯಾತ್ರೆಯಲ್ಲಿ ಭಾಗವಹಿಸಿದ ಅತಿ ಕಿರಿಯ ವ್ಯಕ್ತಿ ಮೈಲಾರ ಮಹಾದೇವಪ್ಪ..
ಆ ಕಾರಣಕ್ಕಾಗಿ ಮೈಲಾರ ಮಹದೇವಪ್ಪನವರ ಜೀವನವನ್ನು ಮಹಾರಾಷ್ಟ್ರ ಸರಕಾರದ ಪಠ್ಯಪುಸ್ತಕದ ನಾಲ್ಕನೆಯ ತರಗತಿಯಲ್ಲಿ ವಿಷಯ ವಸ್ತುವಾಗಿದೆ.. ಆದರೆ, ನಮ್ಮ ಕರ್ನಾಟಕದ ಯುವಕರಿಗೆ ಸದಾ ಪ್ರೇರಣೆಯಾಗಬಲ್ಲ ಇವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ..

ದಂಡಿ ಸಮುದ್ರದ ದಡ ಅಂದು ಮಹಾರಾಷ್ಟ್ರ ರಾಜ್ಯದಲ್ಲಿತ್ತು. ೧೯೬೬ ರಲ್ಲಿ ಗುಜರಾತ್ ಮತ್ತು ಮಹರಾಷ್ಟ್ರ ಪ್ರಸಕ್ತ ರಾಜ್ಯಗಳಾದವು. ಮುಂಚೆ ಗುಜರಾತ್ ಮಹಾರಾಷ್ಟ್ರದ ಭಾಗವಾಗಿತ್ತು.
ದಂಡಿಯಾತ್ರೆಯಲ್ಲಿ ಭಾಗವಹಿಸಿದಕ್ಕೆ ಆರು ತಿಂಗಳ ಕಾಲ ಅಹಮದಾಬಾದಿನಲ್ಲಿ ಜೈಲು ಶಿಕ್ಷೆ ಅನುಭವಿಸಿದರು..

ಸ್ವಾತಂತ್ರ ಪಡೆಯಬೇಕೆಂದರೆ ಸುಭಾಷ್ ಚಂದ್ರ ಬೋಸರ ಏದೆಗಾರಿಕೆ ಬೇಕು ಎಂಬುವುದನ್ನು ಅರಿತು ಅವರೂಂದಿಗೆ ಪತ್ರ ವ್ಯವಹಾರ ಹೊಂದಿದ್ದವರು ದಿ ಗ್ರೇಟ್ ಮೈಲಾರ ಮಹದೇವಪ್ಪ..

ಬ್ರಿಟಿಷರ ವಿರುದ್ದ ೭೪ ಲೂಟಿಗಳನ್ನು ಯಶಸ್ವಿಯಾಗಿ ಮುಗಿಸಿದರು. ಅದರಲ್ಲಿ ಪ್ರಮುಖವಾದುದು “೧೯೪೨ ಡಿಸೇಂಬರ ೨೮ ರಂದು ಹಾವೇರಿಯ ರೇಲ್ವೆ ಸ್ಟೇಷನನಲ್ಲಿ” ಬಾಂಬ್ ಸ್ಪೋಟ ಮಾಡಿ ಅಂಚೆ ಕಚೇರಿ ಲೂಟಿ ಪ್ರಕರಣ… ಹೀಗೆಯೇ ಮುಂದುವರೆಸಿ ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿದ್ದವರು ಮೈಲಾರ ಮಹಾದೇವಪ್ಪ..

ಮೈಲಾರ ಮಹಾದೇವಪ್ಪ ೦೮ ಜೂನ್ ೧೯೧೨ ರಲ್ಲಿ ಬ್ಯಾಡಗಿ ತಾಲೂಕಿನ ಮೂಟೆಬೆನ್ನೂರು ಗ್ರಾಮದಲ್ಲಿ ತಂದೆ ಮಾರ್ತಂಡಪ್ಪ, ಮಾತೆ ಬಸಮ್ಮನವರ ಪುತ್ರನಾಗಿ ಜನಿಸಿದರು.. ಮಹಾದೇವರ ತಾಯಿ ಬಸಮ್ಮರು ಸಹ ದೇಶಪ್ರೇಮಿಗಳು. ಆ ಹೊತ್ತಿಗೆ ಬ್ರಿಟಿಷರ ವಿರುದ್ಧ ಹೋರಾಡಿದ್ದ ಆ ತಾಯಿ, ಜೈಲುವಾಸವನ್ನು ಅನುಭವಿಸಿದವರು. ಆ ತಾಯಿಗೆ ತಕ್ಕ ಮಗ ಮಹಾದೇವರು.

ತನ್ನ ಹದಿಮೂರನೇ ವಯಸ್ಸಿನಲ್ಲಿ ಸಿದ್ದಮ್ಮರೂಡನೆ ವಿವಾಹ ನೆರೆವೇರಿತು.

ಸ್ವದೇಶೀ ಬಟ್ಟೆಗಳ ವಿಚಾರ ಯಾವಾಗಲೂ ಮನಸ್ಸಿನಲ್ಲಿ ಗುನುಗುಡುತ್ತಿತ್ತು. ಮಹಾತ್ಮಾ ಗಾಂಧೀಜಿ ಖಾದಿ ಬಟ್ಟೆಯ ಬಗೆಗೆ ಒಲವು ಹೊಂದಿದ್ದು, ಎಲ್ಲ ಕಡೆಯಲ್ಲೂ ಆ ವಿಚಾರ ಪ್ರಚಾರ ಮಾಡುತ್ತಿದ್ದರು. ಬಾಲಕ ಮಹಾದೇವನಿಗೆ ಖಾದಿ ಬಟ್ಟೆಯನ್ನು ಕುರಿತು ಪ್ರಚಾರಮಾಡಬೇಕೆಂಬ ಆಸೆ ಹೆಚ್ಚಾಯಿತು.
ಮಹಾದೇವ ಹನ್ನೆರಡು-ಹದಿಮೂರರ ಹರೆಯ. ವಿಜಯಪುರ ಜಿಲ್ಲೆಯಲ್ಲಿ ಕಲಾದಗಿ ಎಂಬ ಒಂದು ಗ್ರಾಮವಿದೆ. ಅಲ್ಲಿ ಆ ಕಾಲದಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು. ಮಹಾದೇವ ಅಲ್ಲಿಗೆ ಹೋದ. ಅಲ್ಲಿ ಖಾದಿಯನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಂಡ. ಖಾದಿಯನ್ನು ಹೊತ್ತು ಊರೂರು ತಿರುಗಿ ಮಾರಾಟ ಮಾಡಿದ. ಖಾದಿ ಬಳಕೆಯನ್ನು ಕುರಿತು ಪ್ರಚಾರವನ್ನೂ ನಡೆಸಿದ.

ದಂಡಿಯಾತ್ರೆ ಮುಗಿದು ಮಹಾದೇವ ಹುಟ್ಟೂರಿಗೆ ವಾಪಸ್ಸು ಬಂದರು. ಆ ಹೊತ್ತಿಗಾಗಲೇ ದಂಡಿಯಾತ್ರೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಸ್ವಾತಂತ್ರ್ಯ ಸೇನಾನಿ ಎಂಬುದಾಗಿ ಅವರಿಗೆ ಹೆಸರು ಬಂದಿತ್ತು. ಊರಿನಲ್ಲಿ ಮಹಾದೇವ ಅವರಿಗೆ ಅದ್ದೂರಿಯ ಸ್ವಾಗತ ಸಿಕ್ಕಿತು.

ಮಹಾದೇವ ತಮ್ಮ ಹೆಂಡತಿ ಸಿದ್ದಮ್ಮ ಅವರನ್ನು ಸಿದ್ಧಮತಿ ಎಂದು ಕರೆಯುತ್ತಿದ್ದರು. ಸಬರಮತಿಯ ಸುಖವಾಸ ತನಗಷ್ಟೇ ಅಲ್ಲದೆ ಹೆಂಡತಿಗೂ ಆಗಬೇಕೆಂದು ಅವರನ್ನೂ ಸಬರಮತಿಗೆ ಕರೆದುಕೊಂಡು ಹೋದರು. ಅಲ್ಲಿ ಸಿದ್ದಮ್ಮ ಬ್ರಿಟಿಷ್ ಸರಕಾರಕ್ಕೆ ಅಸಹಕಾರ ನೀಡುವ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು. ಊರಿಗೆ ಬಂದಿದ್ದ ಮಹಾದೇವ ಇಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು. ಹಿಂಡಲಗಾ ಜೈಲಿನಲ್ಲಿದ್ದಾಗ ಗಾಂಧೀಜಿಯವರು ಅಲ್ಲಿಗೆ ಭೇಟಿ ನೀಡಿ ಮಹಾದೇವರನ್ನು ಕಂಡು ಅವರನ್ನು ಪ್ರೋತ್ಸಾಹಿಸಿದರು.

ಮಹಾದೇವರಿಗೆ ಜೈಲಿನಿಂದ ಬಿಡುಗಡೆಯಾಯಿತು. ಹಲವಾರು ಬಾರಿ ಜೈಲಿಗೆ ಹೋಗಿದ್ದರಿಂದ ದೇಹದ ಆರೋಗ್ಯದ ಬಗೆಗೆ ಅವರಿಗೆ ಕಾಳಜಿ ಉಂಟಾಯಿತು. ಶಿಸ್ತುಬದ್ಧವಾದ ವ್ಯಾಯಾಮವನ್ನು ಕಲಿಯಬೇಕೆನಿಸಿತು. ವ್ಯಾಯಾಮವನ್ನು ಕಲಿತರು. ವ್ಯಾಯಾಮ ಕಲಿಯುವಾಗಲೇ ಔಷಧಗಳ ಶಾಸ್ತ್ರವನ್ನು ಅಭ್ಯಾಸ ಮಾಡಿದರು. ಹಳ್ಳಿಗರ ಸೇವೆ ಮಾಡುವ ಉದ್ದೇಶದಿಂದ ಒಂದು ಸೇವಾಶ್ರಮವನ್ನು ಪ್ರಾರಂಭಿಸಿದರು. ಗಂಡ-ಹೆಂಡತಿ ಇಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಚರಕದಿಂದ ನೂಲು ತೆಗೆಯುವುದು, ಪ್ರಕೃತಿ ಚಿಕಿತ್ಸೆ, ವ್ಯಾಯಾಮ ಮುಂತಾದವುಗಳನ್ನು ಹಳ್ಳಿಯ ಜನರಿಗೆ ಅಭ್ಯಾಸ ಮಾಡಿಸಿದರು. ಸೇವಾಶ್ರಮದಲ್ಲಿ ತಯಾರಿಯಾಗುತ್ತಿದ್ದ ಖಾದಿಯನ್ನು ಊರೂರಿಗೆ ಕೊಂಡು ಹೋಗಿ ಮಾರಾಟ ಮಾಡಿದರು. ‘ಮಹಾದೇವನ ಖಾದಿ’ ಎಂದೇ ಇದು ಪ್ರಸಿದ್ಧಿಯಾಯಿತು. ಇದರ ಜೊತೆಯಲ್ಲಿ ಪತಿ-ಪತ್ನಿಯರ ಸ್ವಾತಂತ್ರ್ಯದ ತುಡಿತ, ಹೋರಾಟ ಜನಪ್ರಿಯವಾಯಿತು. ಊರಿನ ಜನರು ಇವರ ಗುಣಗಾನ ಮಾಡಿದರು.

ಚಿಕ್ಕವಯಸಿದ್ರು ಒಳ್ಳೇ ಚೊಕ್ಕ ಮಾತನಾಡತಾನಾ|

ಹಕ್ಕಿ ತನ್ನ ಮರಿಗೆ ಮುದ್ದುಕೊಟ್ಟಾಂಗ|

ನಕ್ಕರೊಂದು ಚಂದ ಅವನು|

ನುಡಿದರೊಂದು ಚಂದ ನಮಗೆ|

ಸಿಕ್ಕೊದಿಲ್ಲೊ ಇಂಥಾ ಚೊಕ್ಕಬಂಗಾರದಂಥವಾ||

ಸ್ವಾತಂತ್ರ್ಯ ಹೋರಾಟ ದಿನ ದಿನ ಬೆಳೆಯುತ್ತ ಹೋಯಿತು. 1942ರಲ್ಲಿ ಗಾಂಧೀಜಿಯವರು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆ ಮಾಡಿದರು. ದೇಶದೆಲ್ಲೆಡೆ ಗಾಂಧೀಜಿಯವರ ಘೋಷಣೆಗೆ ಭಾರತೀಯರ ಬೆಂಬಲ ದೊರೆಯಿತು. ದಕ್ಷಿಣ ಭಾಗದ ಈ ಚಳುವಳಿಗೆ ಮೈಲಾರ ಮಹಾದೇವ ನೇತೃತ್ವ ವಹಿಸಿದರು. ಹಳ್ಳಿ ಹಳ್ಳಿಗಳಲ್ಲಿ ತಿರುಗಿ ಗಾಂಧೀಜಿಯವರ ಘೋಷಣೆಯನ್ನು ಪ್ರಚಾರ ಮಾಡಿದರು. ಅವರ ಮಾತುಗಳು ದೇಶಭಕ್ತಿಯನ್ನು ಬಡಿದೆಬ್ಬಿಸಿದವು.

ಬ್ರಿಟಿಷರ ವಿರುದ್ದ ೭೪ ಲೂಟಿ ಮಾಡಿ ಯಶಸ್ವಿಯಾಗಿದ್ದ ಮೈಲಾರ ಮಹಾದೇವಪ್ಪ ೭೫ ನೆಯ ಲೂಟಿಯನ್ನು ಬ್ರಿಟಿಷರ ಕಂದಾಯ ಇಲಾಖೆಯನ್ನೆ ಹಗಲಿನಲ್ಲಿ ದರೋಡೆ ಮಾಡುವುದಾಗಿ ಘೋಷಿಸಿದರು..

ಹಾವೇರಿ ಹೊಸರಿತ್ತಿಯ
ವೀರಭದ್ರೇಶ್ವರ ದೇವಸ್ಥಾನವೇ ಕಂದಾಯ ವಸೂಲಿ ಕೇಂದ್ರವಾಗಿತ್ತು… ಕಾವಲಿಗೆ ಸರಕಾರ ಪೋಲಿಸರನ್ನು ನೇಮಕ ಮಾಡಿತ್ತು. ೧೯೪೩ ಎಪ್ರಿಲ್ ೧ ರಂದು ಜೈ ಭಾರತ ಮಾತೆ ಘೋಷಣೆ ಕೂಗುತ್ತ ವೀರಭದ್ರೇಶ್ವರ ದೇವಸ್ಥಾನಕ್ಕೆ ನುಗ್ಗಿದ, ಈತನ ಜೊತೆಗೆ “ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹೀರೆಮಠ” ಸಹ ಸೇರಿಕೂಂಡಿದ್ದರು..
ಮೈಲಾರ ಮಹಾದೇವಪ್ಪನ ಕೈಯಲ್ಲಿ ಪಿಸ್ತೂಲು ಇರುವುದನ್ನು ಕಂಡು ಹೆದರಿದ ಬ್ರಿಟಿಷರ ಕೈಯಲ್ಲಿ ಇದ್ದ ಬಂದೂಕುಗಳನ್ನು ಮೈಲಾರ ಮಹಾದೇವಪ್ಪ ಕಸಿದುಕೂಂಡನು ಮತ್ತು ಒಳಗಡೆ ಇದ್ದ ಕಾಗದ ಪತ್ರಗಳನ್ನು ಸುಟ್ಟು ಹಾಕಿದನು ಮತ್ತು ಖಜಾನೆ ಪೆಟ್ಟಿಗೆ ಅಪಹರಿಸಲು ಸಿದ್ದತೆ ಮಾಡಿಕೂಂಡರು… ಇದರ ಮಾಹಿತಿ ಪಡೆದು ಬ್ರಿಟಿಷರಿಗೆ ದೇಶದ್ರೋಹಿಗಳು ಮೊದಲೆ ಮಾಹಿತಿ ನೀಡಿದ್ದರು ಹೀಗಾಗಿ ದೇವಸ್ಥಾನದ ಒಳಗೆ ಪೋಲಿಸರು ಅವಿತು ಕಳಿತು ಮಹಾದೇವಪ್ಪ ಗುಂಡಿಗೆ ಸಿಳುವ ಹಾಗೆ ಗುರಿ ಇಟ್ಟರು.

ಮಹಾದೇವಪ್ಪ ಕುಸಿದು ಬಿದ್ದರು. ಮೈಲಾರ ಮಹಾದೇವಪ್ಪ ಗೋಡೆಗೆ ಒರಗಿದಾಗ ಬ್ರಿಟಿಷರು ತಿವಿದು, ತಿವಿದು ಕೂಂದರು. ಇವರ ಜೂತೆಗೆ “ವೀರಯ್ಯ ಹೀರೆಮಠ ಮತ್ತು ತೀರಕಪ್ಪ ಮಡಿವಾಳರ” ಪ್ರಾಣಪಕ್ಷಿ ಹಾರಿಹೋದವು..
ನಮ್ಮದು ಅಹಿಂಸಾತ್ಮಕ ಹೋರಾಟ, ಪೊಲೀಸರನ್ನು ಕೊಲ್ಲದಿರಿ, ಹಿಂಸೆ ಮಾಡದಿರಿ ಎಂದು ಮಹಾದೇವರು ಸಂಗಡಿಗರನ್ನು ತಡೆದರು. ಮಹಾದೇವರ ಉಸಿರಾಟ ನಿಂತಿತು. ದೇಶದೆಲ್ಲೆಡೆ ಈ ಸುದ್ದಿ ಹರಡಿತು. ಪತ್ನಿ ಸಿದ್ಧಮ್ಮ ಗಂಡನ ಬಲಿದಾನದ ತ್ಯಾಗವನ್ನು ಧೈರ್ಯವಾಗಿ ಎದುರಿಸಿದರು. ಮಹಾದೇವರಿಗಾಗಿ ದೇಶ ಮರುಗಿತು. ಈ ಮರುಕ ಹಾಡಾಗಿ ಹರಿಯಿತು…

ಭಾರತ ದೇಶದ ಬಂಧ ವಿಮೋಚನೆಗೆ ಭಾರೀ ಕಷ್ಟವ ಸೋಸಿದರು|

ತಾರುಣ್ಯವೆಲ್ಲವ ತುರಂಗದಲಿ ಕಳೆದು ಮಡಿದ ಮಹಾಶೂರ ಮೈಲಾರರು|

ತುಂಟರ ತುಂಟನು, ಭಂಟರ ಭಂಟನು, ಸಾತ್ವಿಕರೊಳಗೆ ಸರದಾರ|

ದಿಟ್ಟನ ಹೆಸರನು ಹುಟ್ಟಿದ ಕೂಸಿಗೆ ಇಟ್ಟರೂ ತೀರದು ಉಪಕಾರ|

ಚಂದ್ರಶೇಖರ ಆಜಾದ ಮತ್ತು ಮೈಲಾರ ಮಹಾದೇವಪ್ಪನವರ ಹೋರಾಟದ ರೂಪುರೇಷೆ ಒಂದೇ ಇದೆ… ಅವರು ಸಾವಿನಲ್ಲಿ ಬ್ರಿಟಿಷರು ವಿರುದ್ದ ರೂಪಿಸಿದ ರಣತಂತ್ರವು ಸಹ ಒಂದೇ..
ಚಂದ್ರಶೇಖರ ಆಜಾದರು ತನ್ನ ಬಂದೂಕಿನಿಂದ ತಾವೇ ಗುಂಡು ಹಾರಿಸಿಕೂಂಡು ಬ್ರಿಟಿಷರಿಗೆ ಸಿಗದೇ ಹುತಾತ್ಮರಾದರೇ, “ಮೈಲಾರ ಮಹಾದೇವಪ್ಪನವರು ಬ್ರಿಟಿಷರ ಗುಂಡಿಗೆ ಬಲಿಯಾಗಿ ಹುತಾತ್ಮರಾಗುತ್ತಾರೆ..”
ಆದರೆ ಚಂದ್ರಶೇಖರ್ ಆಜಾದರಿಗೆ ಇತಿಹಾಸಲ್ಲಿ ಸಿಕ್ಕ ಸ್ಥಾನ, ಮೈಲಾರ ಮಹದೇವಪ್ಪನವರಿಗೂ ಸಹ ಸಿಗಬೇಕಾಗಿತ್ತು ಆದರೆ, ಸಿಗದೇ ಇರುವುದು ಖಂಡನೀಯ..
ಕಾರಣ ಇಷ್ಟೇ, ಸ್ವತಂತ್ರ ಹೋರಾಟಕ್ಕೆ ದೇಶದ ಎಲ್ಲಾ ಭಾಗಗಳಿಂದ ಸ್ಪಂದನೆ ಸಿಕ್ಕಿದೆ.., ಅದರೆ ಉತ್ತರ ಬಾರತದ ಹೋರಾಟಗರಿಗೆ ಸಿಕ್ಕ ಸ್ಥಾನ ದಕ್ಷಿಣ ಭಾರತದವರಿಗೆ ಅದರಲ್ಲೂ ವಿಶೇಷವಾಗಿ ಕರ್ನಾಟಕದವರಿಗೆ ಸಿಗದೇ ಇರುವುದು ಬಹಳ ಖೇದಕರ..

ಮೈಲಾರ ಮಹಾದೇವಪ್ಪನವರ ಹೋರಾಟ, ಬದುಕು ನಮಗೆ ಮಾದರಿಯಾಗಲಿ….

Don`t copy text!