ಮಸ್ಕಿ ತಾಲೂಕು ಗ್ರಾ.ಪಂ.ಚುನಾವಣೆಗೆ ತಾಲೂಕು ಆಡಳಿತ ಸಜ್ಜು, ಮತಗಟ್ಟೆಗೆ ತೆರಳಿದ ಅಧಿಕಾರಿಗಳು

e-ಸುದ್ದಿ, ಮಸ್ಕಿ
ತಾಲೂಕಿನ 17 ಗ್ರಾಮ ಪಂಚಾಯತಿಗಳ 327 ಸ್ಥಾನಗಳಿಗೆ ಎರಡನೇ ಹಂತದ ಗ್ರಾ.ಪಂ. ಚುನಾವಣೆ ಡಿ.27ರಂದು ಭಾನುವಾರ ಮತದಾನ ನಡೆಯಲಿದೆ. ಮಸ್ಕಿ ತಾಲೂಕಿನಲ್ಲಿ 64,220 ಪುರುಷ 65,667 ಮಹಿಳಾ ಇತರೆ 6 ಸೇರಿದಂತೆ ಒಟ್ಟು1,29,882 ಮತದಾರರು ಇದ್ದಾರೆ.
ತಾಲೂಕು ಆಡಳಿತ ಚುನಾವಣಾ ಸಿದ್ಧತೆಗಳನ್ನು ಮಾಡಿಕೊಂಡು ಸಿಬ್ಬಂದಿಗಳನ್ನು ಶನಿವಾರ ಮತಗಟ್ಟೆ ಕೇಂದ್ರಗಳಿಗೆ ಕಳಿಸಿದರು.


ಪಟ್ಟಣದ ಮುದಗಲ್ ರಸ್ತೆಯಲ್ಲಿರುವ ದೇವಾನಾಂಪ್ರೀಯ ಅಶೋಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಸ್ಥಾಪಿಸಿರುವ ಮಸ್ಟ್‍ರಿಂಗ್, ಡಿಮಸ್ಟ್‍ರಿಂಗ್ ಹಾಗೂ ಮತ ಎಣಿಕೆ ಕೇಂದ್ರದಿಂದ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು ತಮಗೆ ವಹಿಸಿಲಾದ ಮತಗಟ್ಟೆ ಕೇಂದ್ರಗಳಿಗೆ ತೆರಳಲು ಚುನಾವಣಾ ಮತದಾರರ ಪಟ್ಟಿ, ಶಾಯಿ ಇತರೇ ಪರಿಕರಗಳನ್ನು ಸಂಗ್ರಹಿಸಿಕೊಂಡು ನಿಗದಿತ ಮಾರ್ಗದ ವಾಹನಗಳಲ್ಲಿ ಸೂಚಿಸಿದ ಮತಗಟ್ಟೆಗಳಿಗೆ ಶನಿವಾರ ಬೆಳಿಗ್ಗೆಯಿಂದಲೇ ತಾಲೂಕಿನ ಚುನಾವಣಾ ಮತಗಟ್ಟೆಗಳ ಕ್ಷೇತ್ರಗಳಿಗೆ ಪ್ರಯಾಣ ಬೆಳಿಸಿದರು.
ಭಾನುವಾರ 27ರಂದು ಜರುಗಲಿರುವ 17 ಗ್ರಾಮ ಪಂಚಾಯತಿಗಳ 294 ಸ್ಥಾನಗಳಿಗಳಿಗೆ 137 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 17 ಗ್ರಾಮ ಪಂಚಾಯತಿಗಳಲ್ಲಿ 45 ಸೂಕ್ಷ್ಮ, 19 ಅತಿ ಸೂಕ್ಷ್ಮ ಹಾಗೂ 73 ಸಾಮಾನ್ಯ ಮತಗಟ್ಟೆಗಳೆಂದು ಗುರಿತಿಸಲಾಗಿದೆ.
ಚುನಾವಣಾ ಕಾರ್ಯಕ್ಕಾಗಿ ಪಿಆರ್‍ಒ, ಎಪಿಆರ್‍ಒ, ಪಿಒ ಸೇರಿದಂತೆ ಒಟ್ಟು 790 ಸಿಬ್ಬಂದಿ, 1 ಡಿವೈಎಸ್‍ಪಿ, 3 ಸಿಪಿಐ, 7 ಪಿಎಸ್‍ಐ, 25 ಎಎಸ್‍ಐ, 120 ಪೊಲೀಸ್ ಸಿಬ್ಬಂದಿ, 20 ಹೋಮ್‍ಗಾರ್ಡ, 1 ಡಿಆರ್, 1 ಐಆರ್‍ಬಿಯನ್ನು ನಿಯೋಜಿಸಲಾಗಿದೆ.
ತಾಲೂಕಿನಲ್ಲಿ ಎರಡನೇ ಹಂತದಲ್ಲಿ 17 ಗ್ರಾಪಂಗಳಲ್ಲಿ 27ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ತಾಲೂಕು ಆಡಳಿತದಿಂದ ಈಗಾಗಲೇ ಎಲ್ಲಾ ಸಿಬ್ಬಂದಿಗಳಿಗೆ ಚುನಾವಣೆ ಬೇಕಾದ ತರಬೇತಿ ಹಾಗೂ ಎಲ್ಲಾ ರೀತಿಯ ಪರಿಕರಗಳನ್ನು ನೀಡಿ ಕರೊನಾ ನಿಯಮಗಳನ್ನು ಪಾಲಿಸಿ ಯಾವುದೇ ರೀತಿಯ ತೊಂದರೆ ಆಗದಂತೆ ಅಚ್ಚುಕಟ್ಟಾಗಿ ಚುನಾವಣೆಯನ್ನು ನಡೆಸಲಾಗುವುದು ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ತಿಳಿಸಿದರು. ಸಿಪಿಐ ದೀಪಕ್ ಬೂಸರಡ್ಡಿ, ಪಿಎಸ್‍ಐ ಸಣ್ಣ ಈರೇಶ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಿರುವ ಮತಗಟ್ಟೆಗಳಿಗೆ ತೆರಳಲು ಸೂಚಿಸಿದರು.

Don`t copy text!