ಗೂಗಲ್ ಮೀಟ್ ಶರಣ ಸಂಗಮ ಬಸವ ಸಮಿತಿ
*ಮೆಲ್ಬೋರ್ನ*
*ವಿಷಯ-ಇಂದಿನ ಕಾಲಮಾನದಲ್ಲಿ ಬಸವ ತತ್ವಗಳ ಆತ್ಮಾವಲೋಕನ*
ಸುನೀತಾ ಬಣಕಾರ್ ವಚನ ಪ್ರಾರ್ಥನೆ ಹಾಡಿದರು.
ಪುಟ್ಟ ಬಾಲಕ ಅಥರ್ವ ವಚನವನ್ನು ತೊದಲು ನುಡಿಯಲ್ಲಿ ಹೇಳಿದನು…
ಆಸ್ತಾ ಲೋಕದ ಡೊಂಕ ನೀವೇಕೆ ತಿದ್ದುವಿರಿ ಎನ್ನುವ ಬಸವಣ್ಣನವರ ವಚನ ಹಾಡಿದಳು…
ಅಮೋಘ ಅವರು
ಬಸವ ಬಸವ ಎಂದು ಎನ್ನುವ ವಚನ ಹಾಡಿದನು…
ಗೀತಾ ಜಿ ಎಸ್ಅ್ ಅವರು
ಬಸವನೆ ಮಾಮರ ಶರಣರೆ ಸಿರಿಬಳ್ಳಿ ಎನ್ನುವ ವಚನವನ್ನು ಹಾಡಿದರು…
ವಿದ್ಯಾ ಮುಗ್ದುಮ್
ಎಲ್ಲಾ ಪುರಾಣದ ಚರಣಕೆ ಎನ್ನುವ ಸುಂದರ ವಚನವನ್ನು ಹಾಡಿದರು…
ಆಸ್ಥಾ ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ ಎನ್ನುವ ಬಸವಣ್ಣನವರ ವಚನವನ್ನು ಹಾಡಿದಳು…
*ಸ್ವಾಾ್ಾ
*ಕೆ.ಬಿ.ಮಠ್ ಅಧ್ಯಕ್ಷರು ಶರಣ ಸಂಗಮ ಬಸವ ಸಮಿತಿ ಮೆಲ್ಬೋಬರ್ನ ಇವರು
ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸರ್ವರನ್ನೂ ಸ್ವಾಗತಿಸಿದರು…
ರವಿಶಂಕರ್ ಸದಸ್ಯರು ಬಸವ ಸಮಿತಿ ಅವರು ಬಸವ ತತ್ವದ ಬಗ್ಗೆ ಅಪಾರವಾಗಿ ಅಧ್ಯಯನ ಮಾಡಿರುವ ಡಾ.ಶಶಿಕಾಂತ್ ಪಟ್ಟಣ ಸರ್ ಅವರ ವ್ಯಕ್ತಿ ಪರಿಚಯ ಹಾಗೂ ಅವರ ಸಾಧನೆ, ಅವರು ನಡೆದು ಬಂದ ದಾರಿಯನ್ನು ಸವಿವರವಾಗಿ ತಿಳಿಸಿದರು.
ಡಾ.ಶಶಿಕಾಂತ್ ಪಟ್ಟಣ ಮಾತನಾಡಿ
ಸರ್ವರಿಗೂ ಶರಣು ಶರಣಾರ್ಥಿಗಳನ್ನು ಹೇಳಿ ಅಲ್ಲಿನ ಮಕ್ಕಳಿಗೆ ಅರ್ಥವಾಗುವ ಸಲುವಾಗಿ ಇಂಗ್ಲೀಷಿನಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿ,ಬಸವಣ್ಣನವರು ಈ ಜಗತ್ತು ಕಂಡ ಏಕಮೇವ ದಾರ್ಶನಿಕ.ದೇವರು ನಮ್ಮ ಒಳಗೇ ಇದ್ದಾನೆ ಎಂದು ತಿಳಿಸುತ್ತಾ, ಬಸವಣ್ಣ ಹಾಗೂ ಆತನ ತತ್ವಗಳು 12 ನೆಯ ಶತಮಾನದಲ್ಲಿ ಜಗತ್ತಿನೊಳಗೆ ವಿಶಿಷ್ಟವಾದ ಕ್ರಾಂತಿಯನ್ನುಂಟು ಮಾಡಿದೆ ಎಂದು ಡಾ.ರಾಧಾ ಕೃಷ್ಣ ಹೇಳುತ್ತಾರೆ, ಎಂದು ತಿಳಿಸಿದರು…
1700 ವರ್ಷಗಳ ನಂತರ ಜಾತಿ, ಸುಲಿಗೆ ವ್ಯವಸ್ಥೆಗಳನ್ನು ಹೊಡೆದು ಹಾಕಿದೆ ಬಸವಣ್ಣನವರು ಬಿಜ್ಜಳ ಮಹಾರಾಜ ಕೊಟ್ಟಿರುವ ಮಂತ್ರಿ ಪದವಿಗೆ ಹಿಗ್ಗದೆ, ಅವಕಾಶ ವಂಚಿತರಿಗೆ, ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಸಮಾನತೆಯನ್ನು ತಂದು ಕೊಟ್ಟಂತ ಮಹಾಪುರುಷ ಎಂದು ತಿಳಿಸಿದರು..
ವರ್ಗ,ವರ್ಣ,ಆಶ್ರಮ ಹಾಗೂ ಸಾಂಸ್ಥೀಕರಣವಲ್ಲದ ಶರಣ ಸಿದ್ಧಾಂತವನ್ನು ಸ್ಥಾಪಿಸಿದರು ಎಂದು ತಿಳಿಸಿ ಹೇಳಿ,
ಲಿಂಗ ಎನ್ನುವುದು ಅರಿವಿನ ಅನುಸಂಧಾನ ಅದು ಒಂದು ಪ್ರಕ್ರಿಯೆ ಮಾತ್ರ, ಬಸವಣ್ಣನವರು ಜಂಗಮ ಪ್ರೇಮಿ,ಈ ಲಿಂಗ ಚೈತನ್ಯವು ಕೆಳವರ್ಗದ ವರನ್ನೂ ತಲುಪಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು, ಹಾಗೇ ಹೆಣ್ಣು ರಕ್ಕಸಿಯಲ್ಲ ಅವಳಿಗೂ ಸಮಾಜದಲ್ಲಿ ಸ್ಥಾನಮಾನ ಬೇಕು ಎಂದು ಎಲ್ಲರನ್ನೂ ಬಸವಣ್ಣನವರು ಅಪ್ಪಿಕೊಂಡರು ಎಂದು ತಿಳಿಸಿದರು…
13 ನೇ ಶತಮಾನದ *ಮ್ಯಾಗ್ನಾಕಾರ್ಟಾ* ಶಾಶನದ ಬಗ್ಗೆತ ತಿಳಿಸಿ, *ಜಾನ್ ಬರ್ಕೋ* ರವರು 12 ನೇ ಶತಮಾನದಲ್ಲಿ ಇಂಗ್ಲಿಷ್ ಕಾಡು ಭಾಷೆಯಾಗಿತ್ತು, ಬಸವಣ್ಣ ನವರು ಚಂಪೂ ಸಾಹಿತ್ಯಕ್ಕೆ ಅಡ್ಡಗೋಡೆ ಕಟ್ಟಿ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ನಂತವರನ್ನು ಅಪ್ಪಿಕೊಂಡರು, ನಿಮ್ಮ ದೇಹವೇ ದೇವಾಲಯ ದೇವಾಲಯಗಳಿಗೆ ಹೋಗಬೇಡಿ ಎಂದು ಬಸವಣ್ಣನವರು ತಿಳಿಸಿದ್ದಾರೆ ಎಂದು ಹೇಳಿದರು..
ಶರಣರು ದಾನ ಮತ್ತು ಭಿಕ್ಷೆಯನ್ನು ನಿರಾಕರಿಸಿ ದಾಸೋಹವನ್ನು ಪುರಸ್ಕರಿಸಿದ್ದಾರೆ, ನಾನು ನಿನ್ನಿಂದ ಎನ್ನುವ ಅಹಂ ಬಿಟ್ಟು,ನಾವೆಲ್ಲರೂ ಸೇರಿ ಮಾಡುವ ಅಡುಗೆಯೇ ಪ್ರಸಾದ ಎಂದು ತಿಳಿಸಿ ಹಸಿವು ಮುಕ್ತ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ.ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಬಸವಕಲ್ಯಾಣದಲ್ಲಿ *ಗಂಜಿಕೇರಿ* ಇದೆ ಎಂದು ತಿಳಿಸಿದರು…
ವೇದ,ಆಗಮ ಶಾಸ್ತ್ರಗಳನ್ನು ಎಂದೂ ನಮ್ಮ ಶರಣರು ಒಪ್ಪಿಲ್ಲ, ಅಂದಿನ ಕಾಲದಲ್ಲಿ ದೇಶದ ಎಲ್ಲಾ ಕಡೆ ಜನರು ಬಸವ ತತ್ವಗಳನ್ನು ಒಪ್ಪಿ ಬಸವ ಧರ್ಮವನ್ನು ಸೇರಿರುವುದಾಗಿ ತಿಳಿಸಿದರು..
ಹಲವಾರು ವಚನಗಳಲ್ಲಿನ ಅರ್ಥಗಳನ್ನು ತಿಳಿಸಿ ಹೇಳಿ, ಒಟ್ಟು 14,000 ವಚನಗಳಲ್ಲಿ ನಾವು 200 ವಚನಗಳು ಹಾಗೂ 10 ಶರಣರನ್ನು ಮಾತ್ರ ನಾವು ಬಳಸಿಕೊಳ್ಳುತ್ತಿದ್ದೇವೆ,ಶರಣ ಸಾಹಿತ್ಯವು ತುಂಬಾ ಗಟ್ಟಿಯಾದ ಸಿದ್ಧಾಂತ, ಕರ್ಮವನ್ನು ತೆಗೆದು ಕಾಯಕವನ್ನು ಕೊಟ್ಟವರು ಬಸವಣ್ಣ.ಆದರೆ ಅವರು ತತ್ವ ಸಿದ್ಧಾಂತಗಳನ್ನು ನಾವು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವ ನೋವು ನನಗೆ ಕಾಡುತ್ತಿದೆ. ಜಗತ್ತಿನಲ್ಲಿ 179 ತತ್ವಜ್ಞಾನಿಗಳು ಬಸವಣ್ಣನವರನ್ನು ಅನುಸರಿಸಿದ್ದಾರೆ ಹಾಗಾಗಿ ಬಸವ ತತ್ವಗಳನ್ನು ನಮ್ಮ ಜೀವನದಲ್ಲಿ ಸರಳವಾಗಿ ಅಳವಡಿಸಿಕೊಂಡು ಎಲ್ಲರೂ ಸಂತೃಪ್ತವಾಗಿ ಬದುಕಬೇಕೆಂದು ತಿಳಿಸಿದರು…
ರವಿಶಂಕರ್ ಮಾತನಾಡಿ ಲಿಂಗ ಧರಿಸಿದವರೆಲ್ಲರೂ ಲಿಂಗಾಯತರೇ ಎಂದು ಕೇಳಿದರು.ಅದಕ್ಕೆ ಉತ್ತರಿಸಿದ ಪಟ್ಟಣ ಸರ್ ರವರು ಖಂಡಿತಾ ಇಲ್ಲ, ಲಿಂಗ ತತ್ವವನ್ನು ಯಾರು ತಿಳಿದಿರುತ್ತಾರೋ ಅವರೇ ನಿಜವಾದ ಲಿಂಗಾಯತರು ಎಂದು ತಿಳಿಸಿದರು…
ಫ್ರೊ.ವಿಜಯಲಕ್ಷ್ಮಿ ಪುಟ್ಟಿ ಮಾತನಾಡಿ
Basava philosophy is a universal principal and philosophy,it is kind of a universal Dharma.ಎಂದು ಹೇಳಿ ಜಾತಿ ಕಾಲಂನಲ್ಲಿ ಲಿಂಗಾಯತ ಧರ್ಮ ಎನ್ನುವುದರ ಬದಲಾಗಿ ಮಾನವ ಧರ್ಮ ಎಂದು ಬರೆಯಬೇಕು ಎಂದು ತಿಳಿಸಿದರು…
ಅದಕ್ಕೆ ಕೆ.ಬಿ.ಮಠ್ ರವರು ಇಲ್ಲಿಯೂ ಕೇಳುತ್ತಿದ್ದಾರೆ ನಾವು ಬರೆದಿಲ್ಲ ಎಂದು ತಿಳಿಸಿದರು.
ಸೋಮಶೇಖರ್ ಮುಗ್ದುಮ್್್ಲ್್ ಮಾತನಾಡಿ
ಎಲ್ಲರೂ ಶರಣ ತತ್ವಗಳನ್ನು ಕೇಳುತ್ತಿದ್ದಾರೇ ವಿನಃ ಯಾರೂ ಪಾಲಿಸುತ್ತಿಲ್ಲ, ಸುಮಾರು 20,000 ವಚನಗಳು ಮುದ್ರಿತ ವಾಗಿವೆ,ಈ ಕರೋನಾ ಬಂದ ಮೇಲೆ ಮತ್ತೆ ಬಸವ ತತ್ವ ಪ್ರಚಾರವಾಗುತ್ತಿದೆ ತುಂಬಾ ಸಂತೋಷ ಎಂದು ತಿಳಿಸಿದರು…
ನಾಗರಾಜ್ ದಂಡಗಿ . ಮಾತನಾಡಿ
ವಚನ ಸಾಹಿತ್ಯದಲ್ಲಿ ನನಗೆ ಮೊದಲಿನಿಂದಲೂ ಆಸಕ್ತಿ ಇದೆ,ಆದರೆ ಈಗ ಆ ಪರಿಸರ ಇಲ್ಲ ಎಂದು ತಿಳಿಸಿದಾಗ, ಸೋಮಶೇಖರ್ ಸರ್ ರವರು ನಾವು ಏನನ್ನು ಮಾಡುತ್ತೇವೋ ಅದನ್ನೇ ಮಕ್ಕಳು ಕಲಿಯುತ್ತಾರೆ, ಅವರು ಆಂಗ್ಲ ಭಾಷೆಯಲ್ಲಿ ಕಲಿತರೆ ಕನ್ನಡದ ಸೊಗಡು ಸಿಗುವುದಿಲ್ಲ ಎಂದು ತಿಳಿಸಿದರು.ಅದಕ್ಕೆ ಪುಟ್ಟಿ ಮೇಡಂ ರವರು ನನ್ನ ಮಕ್ಕಳು ವಚನವನ್ನು ಹಾಡುತ್ತಾರೆ, ಕೇಳಿ ಕಲಿ, ನೋಡಿ ಕಲಿ ಹಾಗೂ ಮಾಡಿ ಕಲಿ ಎನ್ನುವ ಉದಾಹರಣೆ ಕೊಟ್ಟರು….
ಸಂದೀಪ್ ಶಟ್ಟಿ ಮಾತನಾಡಿ
ನಮ್ಮ ಮಕ್ಕಳು ಇಂಗ್ಲೀಷಿನಲ್ಲಿ ಕಲಿಯಲು ಬಯಸುತ್ತಾರೆ. ತರ್ಜುಮೆ ಮಾಡಲು ಸಾಧ್ಯವಿಲ್ಲವೇ ಎಂದಾಗ ಪಟ್ಟಣ ಸರ್ ರವರು ನಾವು ಕನ್ನಡಿಗರು ಕನ್ನಡವನ್ನು ಕಲಿಯಬೇಕು ಎಂದು ತಿಳಿಸಿದರು…
ಲಿಂಗಪ್ಪ ಕಲ್ಬುರ್ಗಿ ಮಾತನಾಡಿ
ಬಸವ ತತ್ತ್ವವನ್ನು ಅನ್ಯರು ಬಂದು ಎಲ್ಲಿಂದಲೋ ಕಲಿತಿದ್ದಾರೆ ಅಂದರೆ ನಾವು ಕನ್ನಡಿಗರು ಧೃಢ ನಿರ್ಧಾರ ಮಾಡಿ ಮೊದಲು ಮನೆಯಲ್ಲಿ ಕುಟುಂಬದವರೆಲ್ಲರೂ ಸೇರಿ ಅಭ್ಯಾಸ ಮಾಡಬೇಕು, ಅದನ್ನು ಮಕ್ಕಳು ಅನುಸರಿಸುತ್ತಾರೆ. ಸ್ವಾಮೀಜಿಗಳನ್ನು ಕರೆಸಿ ಹಣ ಖರ್ಚು ಮಾಡುವುದಕ್ಕಿಂತ ಅದೇ ಹಣವನ್ನು ವಚನ ಸಾಹಿತ್ಯ ಕಲಿಯಲು ಬಳಸಿ, ಆಸಕ್ತಿ ಇರುವವರನ್ನು ‘ವೆಬನಾರ್’ ಗೆ ಕರೆಸಿ ಗೋಷ್ಠಿ ಮಾಡಬೇಕು, ನಿಮ್ಮ ಸಂಪರ್ಕಕ್ಕೆ ನಾವು ಬಂದಮೇಲೆ ನಮಗೆ ಆಸಕ್ತಿ ಬಂದಿದೆ.ಇಬ್ಬರೂ ಸೇರಿ ವಿಶ್ವವ್ಯಾಪಿಯಾಗಿ ಕೆಲಸ ಮಾಡೋಣ ಎಂದು ತಿಳಿಸಿದರು…
ಪ್ರೊ.ಜಯಶ್ರೀ ಪಟ್ಟಣ ಮಾತನಾಡಿ
ಪಟ್ಟಣ ಸರ್ ರವರ ಧರ್ಮಪತ್ನಿಯಾಗಿರುವ ಅವರು ನಮ್ಮ ಮದುವೆ ನಾಸಿಕ್ ನಲ್ಲಿ 1994 ರಲ್ಲಿ ಆಯಿತು.ಮೊದಲು ನನಗೆ ಬಸವ ತತ್ವದ ಬಗ್ಗೆ ಗೊತ್ತಿರಲಿಲ್ಲ.ನಂತರದ ದಿನಗಳಲ್ಲಿ ಎಲ್ಲವನ್ನೂ ಕಲಿತುಕೊಂಡಿದ್ದೇನೆ,ಆದರೆ ಮನೆಯವರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ, ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ,ಮುಂದಿನ ದಿನಗಳಲ್ಲಿ ಖಂಡಿತಾ ಬರುತ್ತೇನೆ ಎಂದು ತಿಳಿಸಿದರು…
ಮಲ್ಲಿಕಾರ್ಜುನ ಮಾಲಿ ಪಾಟೀಲ್ ಮಾತನಾಡಿ
Non Indians ಕೂಡ ವಚನ ಸಾಹಿತ್ಯದ ಬಗ್ಗೆ ಕೇಳುತ್ತಿದ್ದಾರೆ ಎಂದು ತಿಳಿಸಿದರು.ಅದಕ್ಕೆ ಪಟ್ಟಣ ಸರ್ ರವರು ಲಿಂಗಪ್ಪ ಸರ್ ರವರ ಸಲಹೆ ಪಡೆದು ಗುಂಪು ಮಾಡಿ ವಚನ ಮತ್ತು ನಿರ್ವಚನ ಮಾಡುವುದನ್ನು ಕಲಿಯಬೇಕು ಎಂದು ತಿಳಿಸಿದರು
ಪ್ರವೀಣ್ ಕುಮಾರ್
ಕಾರ್ಯಕ್ರಮದ ಕೊನೆಯಲ್ಲಿ ಮತ್ತೊಮ್ಮೆ ಎಲ್ಲವನ್ನೂ ಅವಲೋಕಿಸಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಸುನೀತಾ ಬಣಕಾರ್ ರವರು ವಚನ ಮಂಗಳ ಗೀತೆಯನ್ನು ಹಾಡಿದರು.
ವಿದ್ಯಾ ಮುಗ್ದುಮ್ ರವರು ಸುಖವೊಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆಯುವುದು ಎನ್ನುವ ಮಧುರವಾದ ವಚನವನ್ನು ಹಾಡಿದರು ಮತ್ತೊಮ್ಮೆ ಸರ್ವರೆಲ್ಲರನ್ನೂ ವಂದಿಸಿ ಕಾರ್ಯಕ್ರಮ ಮುಗಿಸಿ ಮತ್ತೊಮ್ಮೆ ಸೇರುವ ಎಂದು ತಿಳಿಸಿದರು……
–ವರದಿ ಮಂಡನೆ
ಜಿಎಸ್ ಗೀತಾ
ಹರಮಘಟ್ಟ ಶಿವಮೊಗ್ಗ