ಬಸವ ತತ್ವ ಒಂದುಜಗತ್ತಿನ ಗಟ್ಟಿ ಮುಟ್ಟಾದ ನೀತಿ ಸ೦ಹಿತೆ
ಬಸವಣ್ಣ ಮತ್ತು ಇತರ ಶರಣರ ಕ್ರಾಂತಿ ಭಾರತದ ಒಂದು ಸುವರ್ಣ ಯುಗವೆನ್ನ ಬಹುದು. ಎಲ್ಲ ಸ್ತರೀಯ ಶ್ರೆಣೀಕ್ರತವನ್ನು ಕಿತ್ತೊಗೆದು ಸರ್ವಕಾಲಿಕ ಸಮಾನತೆ ತಂದ ಭೂಮಿಯ ನಿಜವಾದ ಮಾನವ ಜೀವಿಗಳು ಶರಣರು . ಸಮಾನತೆ ಶಾಂತಿ ಪ್ರೀತಿ ಬೋಧೆ ಮಾಡಿ ಅದಕ್ಕನುಗುಣವಾಗಿ ಬದುಕಿದ ಅಪ್ಪಟ ತತ್ವ ನಿಷ್ಟರು.
ಬಸವಣ್ಣನೂ ಸಹಿತ ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ
ಮಾವಿನ ಕಾಯಿಯೊಳಗೆ ಎಕ್ಕೆ ನಾನಯ್ಯ
ಬೆಳೆಯ ಭೂಮಿಯಲೊಂದು ಪ್ರಳಯಸದ ಕಸ ಹುಟ್ಟಿ………………….
ವಿಷಯ ವೆಂಬ ಹಸುರೆನ್ನ ಮುಂದೆ ಪಸರಿಸದಿರಯ್ಯ ,,,,,,,,,,,,,,,
ನಿಮ್ಮ ನಂಬಿಯು ನಂಬದ ಟಿಂಗರ ನಾನು ,,,,,,,,,,,,,,
ನಿಮ್ಮನ್ನರಿಯದ ಡ೦ಬಿಕ ನಾನು…………..
ಹೀಗೆ ಹೆಜ್ಜೆ ಹೆಜ್ಜೆಗೆ ತನ್ನನ್ನೇ ತಾನು ವಿಮರ್ಶೆಗೆ ಒಳಪಡಿಸಿದ ಜಗವು ಕಂಡ ಶ್ರೇಷ್ಠ ದಾರ್ಶನಿಕ.
ಬಸವ ತತ್ವವೆಂದಾಕ್ಷಣ ಕೇವಲ ಬಸವಣ್ಣ ಒಬ್ಬನೆ ಎನ್ನುವುದು ತೀರಾ ತಪ್ಪು.ಆತನೊಂದಿಗೆ ಎಲ್ಲ ವರ್ಗದ ಶರಣರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಬಸವಣ್ಣನವರು ಮತ್ತು ಶರಣರು ಭೌತಿಕವಾಗಿ ನಮ್ಮೊಂದಿಗಿಲ್ಲ ಅವರು ಬರೆದ ಶರಣರ ವಚನಗಳು ನಮ್ಮ ತತ್ವ ಚಿಂತನೆಗೆ ಉಸಿರು.
ಶರಣ ಸಾಹಿತ್ಯವು ಸರ್ವ ಕಾಲಿಕ ಅತ್ಯಂತ ಪ್ರಸ್ತುತವಾದ ಸಾಹಿತ್ಯವಾಗಿದೆ.
ಆದರೆ ಕಾಲಮಾನಕ್ಕೆ ಬದಲಾಗುವ ಮನುಷ್ಯ ತಾನು ಇಂತಹ ಅಮೂಲ್ಯ ವಚನ ಸಾಹಿತ್ಯ ರತ್ನವನ್ನು ಶರಣರ ಆಶಯವನ್ನು ಮತ್ತೆ ಮತ್ತೆ ಚಿಂತಿಸಿ ಚರ್ಚಿಸಿ ಮನಗಂಡು ವಿಮರ್ಶಿಸಿ ನಮ್ಮ ಬದುಕಿಗೆ ಅಳವಡಿಸಬೇಕೆನ್ನುವ ವಿಚಾರವನ್ನು ನಾವು ಮಾಡಬೇಕಿದೆ. ಇಲ್ಲದಿದ್ದರೆ ಧಾರ್ಮಿಕ ಯಜಮಾನಿಕೆಯನ್ನು ಶೋಷಣೆಯನ್ನು ನಾವು ಮತ್ತೆ ಕಾಣಬೇಕಾಗುತ್ತದೆ.ಲಿಂಗಾಯತ ಬಸವ ಧರ್ಮವು ಜಗತ್ತಿನ ಮೊಟ್ಟ ಮೊದಲೆನೆಯ ಪ್ರಜಾಸತ್ತಾತ್ಮಕವಾದ ಧರ್ಮವಾಗಿದೆ.. ಬಸವಣ್ಣನವರ ಮತ್ತು ಶರಣರ ವಚನಗಳ ಅಧ್ಯಯನದ ಅಗತ್ಯತೆ ಇದೆ.ಬಸವಣ್ಣನ ಕಳಕಳಿ ಮಾನವೀಯ ಪ್ರೇಮ ವಿಶ್ವ ಶಾಂತಿ ಕಾಯಕ ದಾಸೋಹಗಳು ಸಾರ್ವತ್ರಿಕಗೊಳ್ಳಬೇಕು.ಬರುವ ದಿನಗಳಲ್ಲಿ ಬಸವ ತತ್ವವೊಂದೆ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ನಾವು ಬರಿ ಆಡ೦ಭರ ಉತ್ಸವ ಉನ್ಮಾದದಲ್ಲಿ ಬಸವಣ್ಣನ ವಚನ ಓದಿ ಅರ್ಥೈಸುವುದು ಸಮ್ಮತವಲ್ಲ .ಅದು ಜಗದ ಸೊತ್ತು. ಶರಣಾರ್ತಿ
–ಡಾ.ಶಶಿಕಾಂತ.ಪಟ್ಟಣ.ಪೂನಾ