ಪುಸ್ತಕ ಪರಿಚಯ

ಲಹರಿ

ಲೇಖಕರು.-. ಸಿದ್ಧರಾಮ ಹಿರೇಮಠ ಕೂಡ್ಲಿಗಿ

ಸಿದ್ಧರಾಮ ಹಿರೇಮಠ ಇವರು ಮೂಲತಃ ರಾಯಚೂರು ದವರು,ಸದ್ಯ ಸಂಯುಕ್ತ ಪದವಿ ಪೂರ್ವ ಕಾಲೇಜ ಕೂಡ್ಲಿಗಿ ಜಿಲ್ಲಾ ಬಳ್ಳಾರಿ ಯಲ್ಲಿ ಕನ್ನಡ ಉಪನ್ಯಾಸ ಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕವಿತೆಗಳು ಅನೇಕ ಪತ್ರಿಕೆ ಗಳಲ್ಸಿ ಪ್ರಕಟವಾಗಿದ್ದು,ಇವರು ಒಳ್ಳೆಯ ಅನುವಾದಕರು ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ಅನೇಕ ಕವಿತೆ ಗಳನ್ನು ಅನುವಾದಿಸಿದ್ದಾರೆ. ಇವರು ಒಳ್ಳೆಯ ಛಾಯಾಚಿತ್ರ ಗ್ರಾಹಕ ರಾಗಿದ್ದು, ಇವರು ತೆಗೆದ ಅನೇಕ ಛಾಯಾಚಿತ್ರಗಳು ಪತ್ರಿಕೆ ಗಳಲ್ಲಿ ಪ್ರಕಟವಾಗಿವೆ.ಸಾಹಿತ್ಯ ಕ್ಷೇತ್ರದಲ್ಲಿ ಕವನ ಸಂಕಲನ,ವಚನಗಳು,ಗಜಲ್ ಸಂಕಲನ ಮತ್ತು ಹೈಕುಗಳ ಸಂಕಲನ ಪ್ರಕಟವಾಗಿವೆ ಹಾಗೂ ಅನೇಕರ ಗಜಲ್ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ರಾಗಿದ್ದಾರೆ.


ಇವರ ಪರಿಭಾಷೆಯಲ್ಲಿ ಗಜಲ್ ಎಂದರೆ ಪ್ರೀತಿ ,ಪ್ರೇಮ,ಪ್ರಣಯ, ವಿರಹ,ಇವಷ್ಟೇ ಗಜಲ್ಗಳ ವಸ್ತುಗಳಾಗದೆ ಇದರಾಚೆಗೂ ನಿರಾಕಾರ ರೂಪ ನೊಂದಿಗೆ ಮಾತಾಡುವ ಸತ್ವ ,ಆಧ್ಯಾತ್ಮ,ದೇವರೊಂದಿಗೆ ಸಂವಾದ ಬಯಲನ್ನು ಅಕ್ಷರಗಳಲ್ಲಿ ಹಿಡಿಯುವಿಕೆ ,ಕಾಣದ ಚೇತನವನ್ನು ಹೊಂದುವ ಹಂಬಲ ಎಲ್ಲವೂ ಗಜಲ್ ದ ಒಳತಿರುವಾಗಿರಬೇಕು.ಗಜಲ್ ಎಂದರೆ ಧ್ಯಾನ,ಗಜಲ್ ಎಂದರೆ ಆತ್ಮಸಂಧಾನ ,ಗಜಲ್ ಎಂದರೆ ನಮ್ಮೊಳಗಿನ ನಮ್ಮೊಂದಿಗೆ ಮಾತಾಡುವುದು,ಗಜಲ್ ಎಂದರೆ ನಾನು ಮತ್ತು ಅವನ(ದೇವರು)ನಡುವಿನ ಸೇತುವೆ..ಹೀಗೆ ಗಜಲ್ ಗೆ ತನ್ನದೇ ಆದ ಶಕ್ತಿ ಇದೆ.ಸಮಾಜಿಕ ಕಳಕಳಿಯ ಗಜಲ್ಗಳು ಆಗಿನ ಮಟ್ಟಿಕೆ ಮಾತ್ರ ಸರಿಯನಿಸುತ್ತವೆಯೇ ಹೊರತು ಅದು ಗಜಲ್ದ ಜಾಯಮಾನವಲ್ಲ,ಹೇಗೆ ಪ್ರೀತಿ ಎಂದರೆ ಪ್ರೀತಿ ಅಷ್ಟೇ,ಹಾಗೆ ಗಜಲ್ ಎಂದರೆ ಗಜಲ್ ಅಷ್ಟೇ,ಗಜಲ್ ಎಂದರೆ ಆತ್ಮ ಸಂದಾನ,ಧ್ಯಾನ ಎಂದು ಸಿದ್ಧರಾಮ ಹಿರೇಮಠ ಅವರು ಗಜಲ್ ಬಗ್ಗೆ ವ್ಯಾಖ್ಯಾನಿಸುತ್ತಾರೆ.
ಇವರ “ಲಹರಿ” ಸಂಕಲನದಲ್ಲಿ ೭೭ ಗಜಲ್ಗಳು,೬೦ ದ್ವಿಪದಿಗಳು, ೪೫ ಹಾಯ್ಕುಗಳಿವೆ.ಅವುಗಳ ಭಾವಕ್ಕೆಹೊಂದುವಂತಹ ಸುಂದರವಾದ ರೇಖಾಚಿತ್ರಗಳಿವೆ.
ಸಂಕಲನದಲ್ಲಿ ಇವರ ಗಜಲ್ ಗಳು ಮತ್ತು ದ್ವಿಪದಿಗಳಲ್ಲಿ ಅವರ ಪರಿ ಕಲ್ಪನೆಯಂತೆ ಆಧ್ಯಾತ್ಮಿಕ ಸ್ಪರ್ಶ ವಿದ್ದು,ಆತ್ಮದೊಂದಿಗೆ ಅನುಸಂದಾನಕ್ಕೆ ಇಳಿಸಿ ಓದುಗನಿಗೆ ಆಳವಾದ ಅನುಭವವಾಗುತ್ದೆ.ಜೊತೆಗೆ ಗಜಲ್ ದ ಸ್ಥಾಯಿ ಗುಣವಾದ ಪ್ರೇಮ ವಿರಹ ಇಲ್ಲಿಯ ಗಜಲ್ಗಳಲ್ಲಿ ಕಾಣುತ್ತೇವೆ..ಲೌಕಿಕ ಪ್ರೀತಿ ಯಿಂದ ಆಧ್ಯಾತ್ಮದ ಹೊಳಪನ್ನುಗಜಲ್ ಗಳು ಕೊಡುತ್ತವೆ.ಸಾಮಾಜಿಕ ಕಳಕಳಿ,ಬಂಡಾಯ ,ಪ್ರತಿಭಟನೆಯಲ್ಲಿಯೂ ಪ್ರೀತಿಯ ತುಡಿತ ಇರುವ ಗಜಲ್ ಗಳನ್ನು ಈ ಸಂಕಲನದಲ್ಲಿ ನಾವು ಬಹಳ ಕಾಣಬಹುದು,ದ್ವಿಪದಿ ಮತ್ತು ಹಾಯ್ಕು ಗಳಲ್ಲಿಯೂ ನಾವು ಆಧ್ಯಾತ್ಮಿಕ ಹೊಳಪನ್ನು ಕಾಣುತ್ತೇವೆ.
ಈ ಸಂಕಲನದಲ್ಲಿ ನನಗೆ ಇಷ್ಟ ವಾದ ಕೆಲವು ಗಜಲ್ ಗಳ ಮಿಸ್ರಾ ಗಳು.
ಬಣ್ಣ ವಿಲ್ಲದ ಬದುಕ ಕುಂಚದಿಂದ ಬರೆದು ಹೊಸ ಲೋಕವನೇ ತೋರಿಸಿದೆ”
“ಯಾವ ರೀತಿಯಲ್ಲಿದ್ದರೇನು ಪಂಚ ಭೂತಗಳ ಲೊಂದಾಗಿ ಬಳಿ ಬರುವೆ”

” ಮದಿರೆಯಲ್ಲಿ ಮುಳುಗಿದವನೆಂದು ಜಗವೆಂದರೂ”
ಅದು ನಿನಗಾಗಿ ಎಂದು ಸಾರಿದೆ ನೀ ನಡೆದೆ ದೂರ”

“ಬದುಕು ಕತ್ತಲಲ್ಲಿ ನಿನ್ನ ಕಣ್ಣ ಬೆಳಕನ್ನಾದರೂ ನೀಡಬಾರದೆ”
ಒಡಲ ತುಮಬ ನೋವಿದೆ ನಿನ್ನ ತುಟೆಯ ಬಿಸುಪನಾನದರೂ ನೀಡಬಾರದೆ”

“ಆಸೆ,ದುಃಖ, ದುಮ್ಮಾನಗಳೆಲ್ಲಾ ತುಂಬವೆ ತಿರೆಯಲ್ಲಿ”
“ಸಿದ್ಧನ ಬಾಳು ಅದರೊಳಗಿದೆಯೆಂದು ತಿಳಿಯದೆ ಹೋದೆ”

“ನೀನಿಲ್ಲದೇ ಕಾಲ್ಗೆಜ್ಜೆಗಳೆಲ್ಲ ಮೌನವಾಗಿವೆ”
ವಾದ್ಯಗಳೆಲ್ಲ ಮುಸುಕೆಳೆದು ಮಲಗಿವೆ ನಾದವಿಲ್ಲದೆ”

ಹೀಗೆ ಅನೇಕ ಗಜಲ್ ಗಳು ಓದುಗರ ಮನ ಗೆದ್ದು ಚಿಂತೆಗೆ ಹಚ್ಚುತ್ತವೆ,ಕೆಲವು ಹಗಲು ರಾತ್ರಿ ಕಾಡುತ್ತವೆ.
ಪುಸ್ತಕ ಓದ ಬಯಸುವವರು ಸಿದ್ಧರಾಮ ಹಿರೇಮಠ ಸರ್ ಅವರನ್ನು ಸಂಪಕಿ೯ಸಿ.
ಮೊ,೯೪೪೮೬ ೩೨೪೫೧

ē

ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ
ವಿಜಯಪುರ
ಮೊ.೮೪೦೮೮ ೫೪೧೦೮

Don`t copy text!