ಅಮ್ಮ
ತಾಯಿಯನ್ನು ಜನನಿ , ಜನ್ಮದಾತೆ ಅಮ್ಮ , ಹೀಗೆ ಅನೇಕ ಶಬ್ದಗಳಿಂದ ಕರೆಯುತ್ತೇವೆ , ಮಾನ್ಯತೆ ಪೂಜ್ಯತೆ ಯಾ0ಸಾ ಮಾತಾ ಎಂಬ ಮಾತಿನಲ್ಲಿಯೇ ಗೌರವಿಸಲ್ಪಡುವ ತಾಯಿ ಪೂಜಿಸಲ್ಪಡುತ್ತಾಳೆ . ಅವಳು ನಮಗೆಲ್ಲಾ ಜನ್ಮ ಕೊಟ್ಟ ತಾಯಿ ಮಾತು ಕಲಿಸಿದ ಗುರು, ಸಂಸ್ಕಾರ ಕೊಟ್ಟ ಅಮ್ಮ , ಯಾವತ್ತೂ ತನ್ನ ಸ್ವಾರ್ಥಕ್ಕಾಗಿ ಬದುಕಿದವ ಲಲ್ಲ . ತನ್ನ ಕರುಳಿನ ಕುಡಿ ಗಾಗಿ ಬದುಕಿದವಳು.
ಒಂಬತ್ತು ತಿಂಗಳು ಗರ್ಭದಲ್ಲಿ ಹೊತ್ತು ಹೆತ್ತು ಪಾಲನೆ-ಪೋಷಣೆ ಮಾಡಿದ ತಾಯಿ ತನ್ನ ಮಾತುಗಳಿಂದ ನಡೆ-ನುಡಿಗಳನ್ನು ಕಲಿಸಿದ ಜನನಿ.
ಮಾನವನ ಬದುಕಿನಲ್ಲಿ ಅಷ್ಟೇ ಏಕೆ ಸಮಸ್ತ ಜೀವ ಸಂಕುಲದಲ್ಲಿ ತಾಯಿ ತನ್ನ ಕರಳು ಕುಡಿಗಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಅಪೂರ್ವ ಗುಣವನ್ನು ಕಾಣುತ್ತೇವೆ. ಈ ಕಾರಣಕ್ಕಾಗಿಯೇ ತಾಯಿಯನ್ನು ದೇವರಿಗಿಂತ ಮಿಗಿಲಾದವಳು ಎಂದು ಹೇಳಲಾಗಿದೆ. ತಾಯಿ ಹೃದಯ ಅದೆಷ್ಟು ವಿಶಾಲವೆಂದರೆ ಅಲ್ಲಿ ಇಡೀ ಜಗತ್ತು ನೆರೆ ನಿಲ್ಲುವಷ್ಟು ವಿಶಾಲವಾಗಿದೆ ಎನ್ನಬಹುದು.
ಅಮ್ಮ ಮಕ್ಕಳ ನಡುವೆ ಅವಿನಾಭ ಸಂಬ0ಧವಿರುತ್ತದೆ. ಅಮ್ಮ ನಿಷ್ಕಲ್ಮಶ ಪ್ರೀತಿ, ಮಮತೆಯ ಆರೈಕೆ, ಕರುಣೆ, ತ್ಯಾಗ, ವಾತ್ಸಲ್ಯದ ಧಾರೆಯ ಅಮ್ಮ ಎಂಬ ಎರಡಕ್ಷರದಲ್ಲಿ ಅದೇನು ವಿಸ್ಮಯ ಅಡಗಿದೆ.
ಅಮ್ಮನಿಗೆ ಪರ್ಯಾಯವಾದದ್ದು ಯಾವುದೂ ಕಾಣುತ್ತಿಲ್ಲ. ಅಮ್ಮನ ಪ್ರೀತಿಯ ಸುಳಿ ಎಷ್ಟು ಬಿಗಿಯಾಗಿ ಮಕ್ಕಳನ್ನು ಬಂಧಿಸುತ್ತೆ ಅಂದರೆ ಅದು ಅನುಭವಿಸುವವರಿಗೆ ಮಾತ್ರ ಅರ್ಥವಾಗುತ್ತೆ.
ಅಮ್ಮನ ಇರುವಿಕೆಯೇ ಮಕ್ಕಳಲ್ಲಿ ಅಪಾರ ಆತ್ಮವಿಶ್ವಾಸವನ್ನು ತರುತ್ತದೆ. ದೇವರು ಸದಾ ಎಲ್ಲೆಡೆ ಇರುವುದು ಸಾಧ್ಯವಾಗುವುದಿಲ್ಲ. ಅದಕ್ಕ ಅವರು ಅಮ್ಮನನ್ನು ಸೃಷ್ಟಿಸಿದ್ದಾನೆ ,
ಅಮ್ಮನ ಪ್ರೀತಿಗೆ ಯಾವುದು ಸರಿಸಾಟಿ ಇಲ್ಲ. ಅಮ್ಮನನ್ನು ಜಗನ್ಮಾತೆಯಂತೆ ಆಧರಿಸಿ ಗೌರವಿಸುವ ಮಕ್ಕಳ ಇದ್ದರೆ ಈ ಜಗತ್ತೆ ಒಂದು ಮಂದಿರ ಆಗುತ್ತಿತ್ತು.
ಅಮ್ಮನೊಂದಿಗೆ ಮಕ್ಕಳ ಸಂಬ0ಧ ಜನ್ಮ ಜನ್ಮದ ಬಂಧನ. ಅದು ಬಿಡಿಸಲಾರದ ಕಗ್ಗಂಟು. ಅಮ್ಮನ ಪ್ರೀತಿ ವಾತ್ಸಲ್ಯ ಮರೆಯಲಾಗದ ಕೊಡುಗೆ.
ಅಮ್ಮಾ..! ಎಂದರೆ ಅದೆಂತಹದೋ ಭಾವ ಲೋಕಾನುಭವ. ಮಾತೃದೇವೋ ಭವ ಎಂದು ತಾಯಿಗೆ ದೈವತ್ವದ ಪಟ್ಟ ನೀಡಿ ಗೌರವಿಸಿದ್ದೇವೆ. ಶಂಕರಾಚಾರ್ಯರು ಅಮ್ಮನ ಬಗ್ಗೆ ಹೇಳಿದ ಒಂದು ಸುಂದರ ಮಾತಿದೆ.
*ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಹುಟ್ಟಲಾರಳು ಎಂದು*
ಅಂದು ಇಂದು ಎಂದೆAದಿಗೂ ಮಕ್ಕಳ ಬದುಕಿನ ಧೀ… ಶಕ್ತಿ ಅಮ್ಮ. ಮಕ್ಕಳನ್ನು ದೈಹಿಕವಾಗಿ ಬಲಿಷ್ಠಗೊಳಿಸಿ ಬುದ್ಧಿಯಲ್ಲಿ ಚುರುಕಾಗಿಸಿ ಮಕ್ಕಳ ಪ್ರಗತಿಯನ್ನು ಉನ್ನತಗೊಳಿಸಿ ಕುಟುಂಬ,
ಸಮಾಜಕ್ಕೆ ಹಾಗೂ ದೇಶಕ್ಕೆ ಉಪಯುಕ್ತ ವ್ಯಕ್ತಿಯನ್ನಾಗಿಸುವಲ್ಲಿ ಅತಿ ದೊಡ್ಡ ಜವಾಬ್ದಾರಿ ಹೊರುವ ದಣಿವರಿಯದ ಶ್ರಮಜೀವಿ ಅಮ್ಮ.
ಕೆಲಪದಗಳಿಂದ ಒಂದು ಲೇಖನದಲ್ಲಿ ಹಿಡಿದಿಡಲಾಗದ ಅಮ್ಮನ ನೆನಪುಗಳೊಂದಿಗೆ ಅವರು ನೀಡಿದ ಸಂಸ್ಕಾರ, ಬೆಳೆಸಿದ ರೀತಿ, ಕೊಟ್ಟ ಪೆಟ್ಟುಗಳನ್ನು ನೆನಪಿಸುತ್ತಾ ಹೆಜ್ಜೆ ಇಡಿ.
ಇಂತಹ ಗಟ್ಟಿ ಅಮ್ಮನ ಸ್ಥಾನ ಯಾರಿಗೆ ತಾನೇ ಬೇಡ. ತಾಯ್ತನವನ್ನು ಬಯಸದ ಹೆಣ್ಣೆ ಇಲ್ಲವಂತೆ. ಅಮ್ಮ ತ್ಯಾಗಮಯಿ. ತನ್ನೆಲ್ಲಾ ಆಶೆ, ಬಯಕೆಗಳನ್ನು ಬದಿಗೊತ್ತಿ ತನ್ನ ಮಕ್ಕಳಿಗೋಸ್ಕರ ಜೀವನ ನಡೆಸುವ ಅದೆಷ್ಟೋ ತಾಯಂದಿರು ಇದ್ದಾರೆ. ವಿಶ್ವಮಾತೆ, ಭೂಮಾತೆ, ಭೂಮಾತೆ, ಭಾರತ ಮಾತೆ, ಕನ್ನಡ ಅಮ್ಮ, ಜನ್ಮ ಕೊಟ್ಟ ತಾಯಿ ಹೀಗೆ ಎಲ್ಲಾ ಅಮ್ಮಂದಿರ ಅನುಗ್ರಹದಿಂದ ನಾನು ವರಕವಿಯಾದೆ ಎಂದು ಬೇಂದ್ರೆಯವರು ನುಡಿದಿಲ್ಲವೆ ??
ಬಿದ್ದಾಗ ಮುದ್ದಿಸಿ, ಗೆದ್ದಾಗ ಪ್ರೋತ್ಸಾಹಿಸುವ ಅಮ್ಮ ಎಲ್ಲರಿಗಿಂತ ಭಿನ್ನ ತಾನೇ. ಎಲ್ಲವನ್ನೂ ಇತ್ತ ನೆಮ್ಮದಿಯಿಂದ ಬಾಳಲು ದಾರಿ ಮಾಡಿಕೊಟ್ಟ ಅಮ್ಮನ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ, ಪ್ರೀತಿ, ಗೌರವಾದರಗಳು ಇರಲೇಬೇಕು. ಹೆತ್ತಮ್ಮನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಲಾರದವರು ಅನ್ಯರ ಕಷ್ಟಗಳಿಗೆ ಸ್ಪಂದಿಸಿಯಾರೇ ???
ನಮ್ಮನ್ನ ಸಾಕಿಸಲಹಿದ ಹೆತ್ತವರಿಗೆ ವೃದ್ದಾಪ್ಯಾದಲ್ಲಿ ಆಸರೆಯಾಗಿ ನಿಲ್ಲಬೇಕಾದುದು ಮಕ್ಕಳ ಧರ್ಮ.
ಪ್ರೀತಿಯ ತಾಯಿಯಾಗಿ, ಮಮತೆಯ ಹೊನಲಾಗಿ, ಆಸರೆಯ ಅಮ್ಮನಾಗಿ ಜಗತ್ತು ಎಂದು ಮರೆಯದ ಭವ್ಯ ಮಕ್ಕಳ ತಾಯಿಯಾದಾಗ ಹೆಣ್ಣು ಪರಿಪೂರ್ಣ ಮಹಿಳೆ ಅನ್ನಿಸಿಕೊಳ್ಳುತ್ತಾಳೆ. ಅಮ್ಮಾ… ಎಂಬ ಕರೆಯಲ್ಲಿ ಅದೆಂತಹ ಮಾಯೆ, ಮಮತೆ ತುಂಬಿರುತ್ತದೋ. ಒಂಥರಾ ಜಾದುಗಾರ್ತಿ ಅಮ್ಮ. ಅಲ್ಲವೇ ??
ಎಂತಹ ವೇದನೆ ನೋವು ಬೇಸರದಲ್ಲಿದ್ದಾಗಲೂ ಅಮ್ಮನ ಒಲವು ಪ್ರೀತಿ ತುಂಬಿದ ಎರಡು ಮಾತುಗಳ ಎಲ್ಲಾ ನೋವುಗಳನ್ನು ನಿವಾರಿಸುತ್ತದೆ. ಕಣ್ಣಿಗೆ ಕಾಣುವ ದೇವರು ಅಮ್ಮ ದೇವರು ಅಮ್ಮ ರಹಸ್ಯವನ್ನು ಅಮ್ಮನೊಂದಿಗೆ ಹಂಚಿಕೊಳ್ಳಿ ಎನ್ನುವ ಮಾತಿದೆ. ಅಮ್ಮನನ್ನು ನಂಬಿ ಕೆಟ್ಟವರಿಲ್ಲ. ಅಮ್ಮ ಮಾತಾಡಲು ಕಲಿಸುತ್ತಾಳೆ. ಆದರೆ ವಿಪರ್ಯಾಸ ನೋಡಿ… ಅದೇ ಅಮ್ಮನ ಬಾಯಿ ಮುಚ್ಚಿಸುವ, ಮಾತನಾಡಲು ಬಿಡದ ಮಕ್ಕಳಿದ್ದಾರೆ. ದೀಪದ ಬುಡ ಯಾವಾಗಲೂ ಕ್ತತಲು ಎಂಬ ಮಾತಿದೆ . ರಾಮಕೃಷ್ಣ ಪರಮಹಂಸರ ಮಾತಿನಂತೆ ಹಣತೆ ತನಗಾಗಿ ಉರಿಯುವುದಿಲ್ಲ. ಜಗತ್ತಿಗೆ ಬೆಳಕು ನೀಡಲು ತನ್ನನ್ನು ತಾನು ಸುಟ್ಟುಕೊಳ್ಳುತ್ತದೆ ,ದೀಪದ ಸ್ಥಿತಿಯ ಅಮ್ಮನ ಸ್ಥಿತಿಯಾಗಿರುತ್ತದೆ.
ತಾಳ್ಮೆ, ಸಹನೆಯಲ್ಲಿ ಎಲ್ಲರನ್ನು ಮೀರಿಸುವ ಮಾತೃ ಹೃದಯ ಮನಸಾರೆ ಮಕ್ಕಳ ಏಳಿಗೆಗೆ ಒದ್ದಾಡುತ್ತಿರುತ್ತದೆ. ಆದರೆ ಅಮ್ಮನ ತ್ಯಾಗ, ನಲ್ಮೆ, ಪ್ರೀತಿ, ಮಮತೆ, ಕರುಣೆಯ ಕಥೆ ಅರ್ಥವಾಗಿದ್ದು ನಾನು ತಾಯಿಯಾಗಿ, ಆ ಸ್ಥಾನದಲ್ಲಿ ನಿಂತು ಅನುಭವಿಸಿದಾಗ ಅರಿವಿಗೆ ಬಂದಿದೆ.
*ನನಗೆ ಅಮ್ಮ ಅಂದರೆ ಪ್ರೀತಿ, ಗೌರವ ಯಾಕೆಂದರೇ ಅಪ್ಪನ ಪ್ರೀತಿ ಕಾಣದ ನಾನು ಅಪ್ಪ ಅಮ್ಮ ಪ್ರೀತಿ ಕಂಡಿದ್ದು ಅಮ್ಮನ ಪ್ರಿತಿಯೆಲ್ಲೆ*
ಅಮ್ಮನ ಪ್ರೀತಿ ಅರಿವಿಗೆ ಬಂದಿದ್ದು ನನ್ನ ೨೦ನೇ ವಯಸ್ಸಿನಲ್ಲಿ ನಾನು ಅಮ್ಮನಾದಾಗ. ಯಾವ ಕಾರಣಕ್ಕೂ ನಿದ್ದೆ ಕೆಡಿಸಿಕೊಳ್ಳದ ನನಗೆ ರಾತ್ರಿ ಜಾಗರಣೆಗೆ ಅವಕಾಶ ನೀಡಿದ ನನ್ನ ಮಗಳು, ಎಲ್ಲದಕ್ಕೂ ಹೇಸಿಗೆ ಪಡುವ ನನಗೆ ನನ್ನ ಮೈ ಮೇಲೆ ಮಗಳು ಎಲ್ಲವನ್ನು ಮಾಡುತ್ತಿದ್ದಾಗ ಮೊದಲ ಬಾರಿಗೆ ಅಮ್ಮ ಅಂದರೆ ಬ್ರಹ್ಮಾಂಡ ಎನ್ನುವ ಅರಿವು ಮೂಡಿತು. ಅದಕ್ಕಾಗಿಯೇ ನನ್ನ ಮಗಳಿಗೆ *ಸಹನಾ* ಎಂದು ಹೆಸರು ಇಟ್ಟೆ.
ಹೆಣ್ಣು ಮಗಳೊಬ್ಬಳು ಅಮ್ಮನ ಸ್ಥಾನ ತುಂಬಿದಾಗ ಪ್ರಬುದ್ಧ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಾಳೆ. ಅದ್ಕಕಾಗಿಯೇ ಏನೋ ಜನನಿ ತಾನೆ ಮೊದಲ ಗುರುವು ಎನ್ನುವ ನಾಣ್ಣುಡಿ. ಅಮ್ಮ ನಿಶ್ಚಿತ ಅಪ್ಪ ಊಹಾತ್ಮಕ ಅನ್ನುವವರೆಗೆ ಅಮ್ಮನ ಗಟ್ಟಿಸ್ಥಾನ ಅವಳ ತಾಯ್ತನದ ಅಸ್ಥಿತ್ವದ ಮಹತ್ವ ಹಾಗೂ ಪ್ರಾಧಾನ್ಯ. ಅಮ್ಮ ಎನ್ನುವ ಶಬ್ದ ಎದೆಯೊಳಗೆ ಮಮತೆಯ ಸೆಲೆ ಚುಮುಕಿಸುತ್ತದೆ. ನನ್ನ ಮೇಲೆ ಪ್ರಭಾವ ಬೀರಿದವರ ಸಾಲಿನ ಮೊದಲಿಗರು ನನ್ನ ಅಮ್ಮ.
ಜೈಶ್ರೀ ಅವರ ಹೆಸರು. ಜೈ ಅವರೇ ಅವರೇ ಶ್ರೀ ಅವರೇ. ಬಾಲ್ಯದಿಂದ ಇಂದಿನವರೆಗಿನ ನನ್ನೆಲ್ಲಾ ಒಳ್ಳೆತನಕ್ಕೆ ಅಮ್ಮನೇ ಹೊಣೆ. ಅಮ್ಮ ಕೊಡುತ್ತಿದ್ದ ಪೆಟ್ಟಿನ ರುಚಿ ಇಂದಿಗೂ ಇದೆ. ಅಮ್ಮ ಕಲಿಸಿದ ಜೀವನೋತ್ಸಾಹದ ಪಾಠ ಸತ್ಯವನ್ನೇ ಮಾತಾಡು ಎನ್ನುವ ತತ್ವ ಯಾವ ವಿಶ್ವವಿದ್ಯಾನಿಲಯ ಅಥವಾ ಯಾವುದೇ ತರಬೇತಿ ಕೇಂದ್ರದಲ್ಲೂ ಸಿಗಲಾರದು. ಅಮ್ಮನಿಗೆ ಅಮ್ಮನೇ ಸಾಟಿ.
ಅಮ್ಮನಿಗೆ ನೋವನ್ನು ಮೀರಿಸುವ ಶಕ್ತಿ ಇದೆ. ಮಕ್ಕಳಿಗಾಗಿ ಬದುಕನ್ನು ಮುಡಿಪಾಗಿಡುವ ತಾಯಿ ಹೃದಯದ ತ್ಯಾಗ ಪರಿಶ್ರಮಕ್ಕೆ ಸಾಟಿ ಇಲ್ಲ. ಕರುಳ ಬಳ್ಳಿಯ ಸಂಬ0ಧವದು.
ಹುಟ್ಟಿದ ಮರುಕ್ಷಣವೇ ಕುರುಳ ಬಳ್ಳಿ ಕತ್ತರಿಸಲ್ಪಟ್ಟರು. ಭಾವನಾತ್ಮಕವಾಗಿ ಅಪ್ಪಿಕೊಂಡ ಮಧುರ ಬಂಧ. ಬಿಡಿಸಲಾರದ ಸುಂದರ ಕಗ್ಗಂಟು. ಅಮ್ಮಾ ಎಂಬ ಸುಮಧರ ನುಡಿ ಎಲ್ಲರ ಬಾಳಿನಲ್ಲೂ ಕಂಪನ್ನು ತಂಪನ್ನು ನೀಡಿರುತ್ತದೆ. ಅಮ್ಮನ ಸಲಹೆಗಳು, ನಿರ್ದೇಶನಾತ್ಮಕ ನಿಲುವು, ಅನುಸರಣಾತ್ಮಕ ಬದುಕು ಅಮ್ಮನ ಬಗ್ಗೆ ನಮ್ಮ ಮನಸ್ಸಿನಲ್ಲಿ ಹರಿವ ಭಾವತರಂಗ ಮೈಮನ ವ್ಯಾಪಿಸಿಕೊಳ್ಳ್ಳುತ್ತದೆ.
ಚೈತನ್ಯದಾಯಕ ಮಕ್ಕಳ ಬಾಲ್ಯದಲ್ಲಿ ಆಸರೆಯಾಗಿ ಮಕ್ಕಳ ಬಾಳು ಬಂಗಾರವಾಗಲು ಹಗಲು ಇರುಳು ಶ್ರಮಿಸುವ ಅಮ್ಮ ಯಾವುದೇ ಪರಿಸ್ಥಿತಿಯಲ್ಲೂ ಮಾನಸಿಕವಾಗಿ ಸೀಮಿತ ಕಳೆದುಕೊಳ್ಳಲು ಅಮ್ಮ ಬಿಡುವುದಿಲ್ಲ. ಅಮ್ಮನ ಪ್ರೀತಿಯಲ್ಲಿ ಸಿಗುವಷ್ಟು ಒಲವು, ಆಸರೆ ಬೇರಾವ ಸಂಬ0ಧಗಳಲ್ಲೂ ಸಿಗುವುದಿಲ್ಲ.
ಕಣ್ಣಿಗೆ ಕಾಣುವ ದೇವರು, ತಾಯ್ತನಕ್ಕೆ ಇರುವ ಶಕ್ತಿಯೇ ಅಚ್ಚರಿ ಮೂಡಿಸುವಂಥದ್ದು ಅಮ್ಮನ ಅಂತಃಕರಣದ ಸೆಲೆಯೊಂದು ಮಕ್ಕಳು ಎಲ್ಲೇ ಇದ್ದರೂ ಮಿಡಿಯುತ್ತಿರುತ್ತದೆ.
ಜೀವನವನ್ನೆಲ್ಲ ಮಕ್ಕಳಿಗಾಗಿ ಧಾರೆ ಎರೆದ ಅಮ್ಮ ಜೀವನದ ಉದ್ದಕ್ಕೂ ನಿಮ್ಮೊಂದಿಗಿದ್ದು ಸಾಕಿ ಸಲುಹಿದ ಅಮ್ಮನಿಗೆ ಅನುದಿನವೂ ಅರ್ಪಣೆ, ಸಮರ್ಪಣೆ,
ತಪ್ಪು ಮಾಡದವರು ಯಾರು ಇಲ್ಲ. ಮಾಡಿದ ತಪ್ಪನ್ನು ಪುನಃ ಮಾಡದಂತೆ ಮಾನವತ್ವದ ಮಾರ್ಗದಲ್ಲಿ ಮುನ್ನಡೆಸುವವಳೇ ಅಮ್ಮ. ಮಕ್ಕಳು ಸುಖವಾಗಿರಲೆಂದು ಹಾರೈಸುವ ಮನಸ್ಸು ಸದಾ ಮಕ್ಕಳ ಶ್ರೇಯಸ್ಸನ್ನೇ ಬಯಸುವುದು ಅಮ್ಮನಿಂದಷ್ಟೇ ಸಾಧ್ಯ.
*ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು*
ಜನನಿಯಿಂದ ಪಾಠ ಕಲಿತ ಜನರು ಧನ್ಯರು. ಈ ಮಾತಿನಲ್ಲಿ ಸತ್ಯಾಂಶವಿದೆ. ಮಕ್ಕಳ ಗುಣ ಸ್ವಭಾವ ನಡವಳಿಕೆ ಎಲ್ಲದರಲ್ಲೂ ತಾಯಿಯ ಪಾತ್ರ ಬಲು ದೊಡ್ಡದು.
*ಅದಕ್ಕಾಗಿಯೇ ಏನೋ ನೂಲಿನಂತೆ ಸೀರೆ ತಾಯಿಯಂತೆ ಮಗಳು* ಎಂಬ ಗಾದೆ ಮಾತು ಹಳ್ಳಿ ಹಳ್ಳಿಗಳಲ್ಲಿ ಪ್ರಚಲಿತ.
ಮಕ್ಕಳನ್ನು ದೈಹಿಕವಾಗಿ ಬಲಿಷ್ಟಗೊಳಿಸಿ ಬುದ್ದಿಯಲ್ಲಿ ಚುಕಾಗಿಸಿ ಮಕ್ಕಳ ಪ್ರಗತಿಯನ್ನು ಉನ್ನತಗೊಳಿಸಿ ಕುಟುಂಬ ಸಮಾಜ ದೇಶಕ್ಕೆ ಉಪಯುಕ್ತ ವ್ಯಕ್ತಿಯನ್ನಾಗಿಸುವಲ್ಲಿ ಅತೀ ದೊಡ್ಡ ಜವಾಬ್ದಾರಿ ಹೊರುವ ತಾಯಿಯನ್ನು ಪೃಥ್ವಿ ಅಥವಾ ಭೂಮಿಗೆ ಹೋಲಿಸುತ್ತಾರೆ.
ತಾಳ್ಮೆ, ಸಹನೆಯಲ್ಲಿಯೂ ಎಲ್ಲರನ್ನೂ ಮೀರಿಸುವ ಮಾತೃ ಹೃದಯ ಮನಸಾರೆ ಮಕ್ಕಳ ಏಳಿಗೆಗೆ ಒದ್ದಾಡುತ್ತಿರುತ್ತದೆ. ಆದರೆ, ಅಮ್ಮನ ತ್ಯಾಗ, ನಲ್ಮೆ ಪ್ರೀತಿ ಮಮತೆ, ಕರುಣೆಯ ಕತೆ ಅರ್ಥವಾಗುವುದು ನಾವು ತಾಯಿಗೆ ಆ ಸ್ಥಾನದಲ್ಲಿ ನಿಂತು ಅನುಭವಿಸಿದಾಗ ಮಾತ್ರಾ ಅರಿವಿಗೆ ಬರುತ್ತದೆ.
ತನ್ನ ಜೀವನ್ನು ಮಕ್ಕಳಿಗಾಗಿಯೇ ಮೀಸಲಿಡುವ ಅಮ್ಮನಿಗೂ ಒಂದು ಮನಸ್ಸಿದೆ ಎಂದು ಮಕ್ಕಳು ಯೋಚಿಸುವುದಿಲ್ಲ. ಅಮ್ಮನನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಎಲ್ಲ ಮಕ್ಕಳಿಗೂ ಇದೆ ಆದರೂ, ಮಾತೃದಿನದ ಬದಲಾಗಿ ಇಂದಿನ ಮಕ್ಕಳು ಫ್ರೆಂಡ್ ಶಿಪ್ ಡೇ, ವ್ಯಾಲೆಂಟೈನ್ ಡೇಯ ಆಚರಣೆಯಲ್ಲಿ ತೊಡಗಿರುವುದು ಆಧುನಿತೆಯ ಗುಂಗಿನಲ್ಲಿ ತನ್ನ ತನವನ್ನು ಮರೆತ ಮಕ್ಕಳ ಸ್ವಭಾವವನ್ನು ಬದಲಾಗಿಸಲಾರದ ಅಮ್ಮಂದಿರು ನಿಜವಾಗಿಯೂ ಭಾಗ್ಯಹೀನರು.
ಕೂಡಿದ ಸಂಸಾರದಲ್ಲಿ ಬಾಳುವುದು ನಮ್ಮ ದೇಶದ ಭವ್ಯ ಪರಂಪರೆಯ ಹೆಮ್ಮೆಯ ಸಂಸ್ಕೃತಿ ಆದರೆ, ನಾನು ನನ್ನದು ಎನ್ನು ಆಹಂನಲ್ಲಿ ನಾವು ನಮ್ಮವರು ಎಂಬುದನ್ನು ಮರೆಯುತ್ತಿರುವುದೇ ಈ ಎಲ್ಲಾ ಅವನತಿಗೆ ಕಾರಣ ಪ್ರಪಂಚದ ಎಲ್ಲಾ ಮನೆಯಲ್ಲಿ ಅಮ್ಮನ ಪಾತ್ರ ತುಂಬಾ ದೊಡ್ಡದು. ಅಮ್ಮನಿಲ್ಲದ ಮನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಮ್ಮ ಮಾಡಿದ ಅಡುಗೆಯ ರುಚಿ, ಹಪ್ಪಳ, ಉಪ್ಪಿನಕಾಯಿ ರುಚಿ ಬಲ್ಲವರೇ ಬಲ್ಲರು. ಅಮ್ಮನ ಬೆಲೆಮಕ್ಕಳಿಗೆ ಅರಿವಾಗುವುದು ಅಮ್ಮನ ಗೈರು ಹಾಜರಿಯಲ್ಲೇ ಇತ್ತೀಚೆಗೆ ಅಮ್ಮ ತೀರಿಕೊಂಡ ನನ್ನ ಗೆಳತಿಯೊಬ್ಬರು ಊರಿಗೆ ಹೋದರೆ ನಾವೇ ಮನೆ ಬಾಗಿಲು ತೆಗೆದು ಅಡುಗೆ ಮಾಡಿ ಉಣ್ಣುವ ಪರಿಸ್ಥಿತಿ, ಅಮ್ಮ ಇರುವಾಗ ಎಷ್ಟು ಒಳ್ಳೆದಿತ್ತು ಎಂದು ಹಲುಬುತ್ತಿದ್ದರು.
ಅಮ್ಮ ಪ್ರೀತಿಗೆ ಯಾವುದೂ ಸರಿಸಾಟಿ ಇಲ್ಲ.
ಅಮ್ಮ ಎಂಬ ಪದಕ್ಕೆ ಅರ್ಥ ತುಂಬಿಕೊಡುವಳು ಹೆಣ್ಣು. ಮಕ್ಕಳು ಕೂಡ ಅಮ್ಮ ಎನ್ನುವುದು ಕೇವಲ ಶಬ್ದ ಅಲ್ಲ ಎನ್ನುವ ಅರಿವು ಮೂಡಿಸುತ್ತಿದ್ದರೆ ಮಕ್ಕಳು ಬೆಳೆದಂತೆ ಇದ್ರೂ ಉದ್ಯೋಗ ಅಂತ ಬದುಕು ವಿಸ್ತರಿಸುತ್ತಾ ಹೋಗಿ ಮಕ್ಕಳು ನನ್ನ ಮಡಿಲಲ್ಲೇ ಬೆಳೆಯಲಿ ಎಂದು ಬಯಸಿದರೂ ಸಾಧ್ಯವಾಗದಿರುವಾಗ ತಾಯಿ ಹೃದಯ ಬಯಸುವುದಿಷ್ಟೆ ಎಲ್ಲಾದರೂ ಸುಖವಾಗಿರು ಎಂದು. ಅಮ್ಮ ಎಂಬ ಎರಡಕ್ಷರ ನಮ್ಮೊಳಗೆ ಹೊಸಚೇತನವನ್ನು ತುಂಬುತ್ತಾರೆ.
ಅಮ್ಮ ಅಂದರೆ ಏನೋ ಹುರುಪು. ನೋವನ್ನ ಮೌನವಾಗಿ ಸಹಿಸುವ ಆಕೆಯ ತಾಳ್ಮೆ ಅಚ್ಚರಿ ಮೂಡಿಸುತ್ತದೆ. ಗರ್ಭದೊಳಗೆ ಭ್ರೂಣ ಬೆಳೆಯುವಾಗಲೇ ಅದರೊಂದಿಗೆ ಅವಿನಾಭವ ಅನುಬಂಧ ಬೆಸೆಯುವಾಕೆ. ಸೀಮಂತ ಸಂಸ್ಕಾರದ ಸಂಭ್ರಮದಲ್ಲೇ ಮಗುವನ್ನು ಗರ್ಭದೊಂದಿಗೆ ಕೂರಿಸಿಕೊಂಡು ಸಹಭಾಗಿ ಆದ ಮೊದಲ ಕರುಳ ಬಳ್ಳಿಯ ನೆನಪು ಮೆಲುಕು ಹಾಕುತ್ತಾಳೆ. ಅಮ್ಮನಾಗುವುದು ಎಂದರೆ ಮರುಹುಟ್ಟು ಆದರೂ ಆ ಪ್ರಕ್ರಿಯೆಯೇ ಅದ್ಭುತವಾದುದ್ದು. ಕಾಲ ಎಷ್ಟೇ ಮುಂದುವರಿದರೂ ಹೂವೊಂದು ಬೇಕು ಲತೆಗೆ ಮಗುವೊಂದು ಇರಬೇಕು ಹೆಣ್ಣೆಗೆ,
ನಾನಂತೂ ಅಮ್ಮನ ಪ್ರೀತಿ ಬಿಟ್ಟು ಬೇರೆ ಏನನ್ನೂ ಕಂಡವಳಲ್ಲ , ಅಮ್ಮನ ಪ್ರೀತಿ ಮಮತೆ ವಾತ್ಸಲ್ಯ ಬಿಟ್ಟು ಬೇರೆ ಏನೂ ಗೊತ್ತಿಲ್ಲ, ಕೆಲವೊಂದು ಸನ್ನಿವೇಶಗಳಲ್ಲಿ ಅಮ್ಮನ ಮೇಲೆ ಕೋಪ ಮಾಡಿದ್ದು ಉಂಟು , ಪಚ್ಚಾತಾಪ ಪಟ್ಟಿದ್ದೂ ಉಂಟು, ತಿಳಿದು ತಿಳಿಯಲಾರದೆ ಅಮ್ಮನ ಮನಸ್ಸು ನೋಯಿಸಿದ್ದಕ್ಕೆ ತುಂಬಾ ಸಲ ಕಣ್ಣೀರು ಹಾಕಿದ್ದು ಉಂಟು , ತಾಯಿಯೇ ಸೃಷ್ಟ ಎಂಬ ಅನುಭವ ವಾಣಿಯಂತೆ ತಾಯಿಯ ಸ್ಥಾನ ಯಾರಿಂದಲೂ ತುಂಬಲಾಗದ ಅದೇ ತಾಯಿಯ ಹಿರಿಮೆ ಮಾತೃದೇವೋಭವ ಎಂಬ ಮಾತಿನ ಗರಿಮೆ .
– ಮೇನಕಾ ಪಾಟೀಲ್
ಜನನಿ ಜನ್ಮ ಭೂಮಿಶ್ಚ | ಸ್ವರ್ಗಾದಪಿ ಗರೀಯಸಿ ||
ತಾಯಿ ಅಂದರೇನೆ ಹಾಗೆ. ದೇವರು ಎಲ್ಲಾ ಕಡೆ ಇರೋಕಾಗಲ್ಲಾ ಅಂತೇನೆ ತಾಯಿಯನ್ನ ಸೃಷ್ಟಿ ಮಾಡಿದಾ ಅಂತ ಅನಿಸುತ್ತೆ.
ಉತ್ತಮ ಲೇಖನ ಶ್ರೀಮತಿ ಮೇನಕಾ ಪಾಟೀಲ ಅವರದು. ಶ್ರೀಮಂತಿಕೆಯುಳ್ಳ ಶಬ್ದ ಜೋಡಣೆ, ತಕ್ಕಂತೆ ಪ್ಯಾರಾಗಳ ವಿಂಗಡಣೆ, ತಕ್ಕಂತೆ ಸಂಪಾದನೆ, ಪ್ರತಿಯೊಂದು ಪದವನ್ನೂ ಸಹ ಅನುಭವಿಸಿ ಬರೆದಂತಿದೆ. ಅದ್ಬುತ ಲೇಖನ
ಲೇಖಕಿಗೆ ಅಭಿನಂದನೆಗಳು.
sssss