ಶರಣರ ವಚನಗಳಲ್ಲಿ ಸ್ತ್ರೀ

ಶರಣರ ವಚನಗಳಲ್ಲಿ ಸ್ತ್ರೀ

ದಿನಾಂಕ 18/4/2021 ರಂದು ಗೂಗಲ್ ಮೀಟ್ ನಲ್ಲಿ 24 ನೇ ಶರಣ ಚಿಂತನ ಮಾಲಿಕೆಯಲ್ಲಿ *ಶರಣರ ವಚನಗಳಲ್ಲಿ ಸ್ತ್ರೀ* *ಸಂವೇದನೆಗಳು* ಎನ್ನುವ ವಿಷಯವನ್ನು ತೆಗೆದುಕೊಳ್ಳಲಾಗಿತ್ತು..
ವಚನ ಪ್ರಾರ್ಥನೆ ,:- *ಕುಮಾರಿ ಗ್ರೀಷ್ಮ* :- ಒಲ್ಲೆನೆಂಬುದು ವೈರಾಗ್ಯ ಒಲಿದೆನೆಂಬುದು ಕಾರ್ಯಗುಣ ಎನ್ನುವ ಬಸವಣ್ಣನವರ ವಚನವನ್ನು ಹಾಡಿದಳು…

*ರುದ್ರಮೂರ್ತಿ  ಸರ್    ಪ್ರಾಸ್ತಾವಿಕ ನುಡಿದರು 
ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಣ್ಣ ಚೆಲ್ಲಿದನು ತಂದು ಶಿವ ಬೆಳಕು ನಾಡೊಳಗೆ ಸೊಲ್ಲೆತ್ತಿ ಜಗವು ಪಾಡುವುದು ಎನ್ನುವ ಜನಪದರ ನುಡಿಗಳನ್ನು ಸ್ಮರಿಸಿ 24 ನೇ ಗೂಗಲ್ ಮೀಟ್ ಶರಣ ಚಿಂತನೆಯಲ್ಲಿ ಪಾಲ್ಗೊಂಡಿರುವ ಸರ್ವ ಶರಣ ಶರಣೆಯರನ್ನು ಸ್ವಾಗತಿಸಿ, 12 ನೆಯ ಶತಮಾನದಲ್ಲಿ ಧರ್ಮದ ಮೂಲವಾದ ಸರ್ವೋದಯ ಸ್ಥಾಪನೆಯಾಗಿತ್ತು. ಧಾರ್ಮಿಕ ಸಮಾನತೆ, ಆರ್ಥಿಕ ಸಮಾನತೆ, ಹಾಗೂ ಸಾಮಾಜಿಕ ಸಮಾನತೆಗಳು ಅಲ್ಲಿ ಮುಖ್ಯವಾಗಿದ್ದವು,ಅನುಭವ ಮಂಟಪದಲ್ಲಿ ಸಕ್ರೀಯವಾಗಿ ಭಾಗವಹಿಸಿದ ಶರಣೆಯರು ಸ್ತ್ರೀ ಅಭಿವ್ಯಕ್ತಿಗೆ ಮುಂದಾಗಿದ್ದರು. ಇಂದು ಶರಣರ ವಚನಗಳಲ್ಲಿ ಸ್ತ್ರೀ ಸಂವೇದನೆಯ ಬಗ್ಗೆ ವಿಚಾರಗಳನ್ನು ತಿಳಿಸಲು ರಾಯಚೂರಿನ ಎಲ್.ವಿ.ಡಿ. ಕಾಲೇಜಿನ ಉಪನ್ಯಾಸಕಿ ಡಾ.ಸರ್ವಮಂಗಳಾ ಸಕ್ರಿಯವರು ಬಂದಿದ್ದಾರೆ,ಇವರು ಶರಣ ಸಾಹಿತ್ಯ ಮತ್ತು ತತ್ವಪದ ಸಾಹಿತ್ಯದ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ ಎಂದು ತಿಳಿಸಿದರು…

*ಡಾ.ಶಶಿಕಾಂತ್ ಪಟ್ಟಣ ಅವರು ಉಪನ್ಯಸಕರ ಬಗ್ಗೆ ಪರಿಚಯಿಸಿದರು.
ಗೂಗಲ್ ಮೀಟ್ ನಲ್ಲಿ ಪ್ರಸಾರ ವಾಗುವ ವಿಷಯಗಳನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ, ಇಲ್ಲಿ ವಿದ್ವಾಂಸರು ಹಾಗೂ ನುರಿತ ಅನುಭಾವಿಗಳಿಂದ ಚರ್ಚೆ ನಡೆಯುತ್ತದೆ, ಎಲ್ಲರೂ ಶಿಸ್ತನ್ನು ಕಾಪಾಡಿಕೊಳ್ಳಿ, ನಮ್ಮ ನಾಗರಿಕತೆ ಸಂಸ್ಕೃತಿ ಯನ್ನು ಎಲ್ಲರೂ ಗಮನಿಸುತ್ತಾರೆ ಎಂದು ತಿಳಿಸಿದರು….
ವಾರದಿಂದ ವಾರಕ್ಕೆ ಇಲ್ಲಿ ಮಾತನಾಡುವ ಸಂಪನ್ಮೂಲ ವ್ಯಕ್ತಿಗಳ ನಿಕಟ ಸಂಪರ್ಕ ಹೊಂದಿ ಅವರಿಗೆ ವಿಷಯ ಹಾಗೂ ಮಾರ್ಗದರ್ಶನ ನೀಡುತ್ತೇವೆ.ಇಲ್ಲಿ ಭಾಗವಹಿಸುವ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು ಹಾಗೂ ಗೊಂದಲಗಳನ್ನು ನಿವಾರಿಸಿ ಕೊಂಡು ಮುಂದಿನ ವಚನ ಸಾಹಿತ್ಯದ ಅಧ್ಯಯನ ಮಾಡೋಣ ಎಂದು ತಿಳಿಸಿ ಹೇಳಿ ಡಾ.ಸರ್ವಮಂಗಳಾರವರು ಮದುವೆಯಾದ ಮೇಲೆ SSLC,puc ಮಾಡಿದರು.ತಮ್ಮ ಮಗ SSLC ಮಾಡುತ್ತಿದ್ದಾಗ ಇವರು BA ಹಾಗೂ ನಂತರ MA ಮಾಡಿ ಕಾಲೇಜಿನ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ,ವಚನ ಸಾಹಿತ್ಯವನ್ನು ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ಜ್ಞಾನದ ದಾಸೋಹವನ್ನು ಎಲ್ಲರಿಗೂ ಹಂಚುತ್ತಿದ್ದಾರೆ ಎಂದು ತಿಳಿಸಿದರು..
ವಚನ ಚಳುವಳಿಯ ಮೂಲ ಉದ್ದೇಶವೇ ಸ್ತ್ರೀ ಸಮಾನತೆ, ಸ್ತ್ರೀಯೂ ಕೂಡ ಪುರುಷನಂತೆ ಸಶಕ್ತಳು ಎಂದು ತಿಳಿಸಿ, ಶರಣರ ವಚನಗಳಲ್ಲಿ ಸ್ತ್ರೀ ಸಂವೇದನೆಯ ಬಗ್ಗೆ ಇವರು ವಿಷಯವನ್ನು ಮಂಡಿಸುತ್ತಾರೆ ಎಂದು ತಿಳಿಸಿದರು..

*ಡಾ.ಸರ್ವಮಂಗಳಾ ಸಕ್ರಿ*
ಅಕ್ಕನ ಅರಿವಿನ ಸದಸ್ಯರು ಹಾಗೂ ಇಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಶರಣು ಶರಣಾರ್ಥಿಗಳನ್ನು ತಿಳಿಸಿದ ಅವರು ಮಹಿಳಾ ಸಬಲೀಕರಣ ವನ್ನು ಚರ್ಚೆಗೆ ತೆಗೆದುಕೊಂಡಿದ್ದೇವೆ.ಕೆಲವೇ ಕೆಲವು ಧರ್ಮ ಪ್ರವರ್ತಕರಲ್ಲಿ ಬಸವಣ್ಣ ಕೂಡ ಒಬ್ಬರು, ಅಂದಿನ ಶರಣೆಯರಿಗೆ ಅಕ್ಷರ ಜ್ಞಾನವನ್ನು ಹೇಳಿಕೊಟ್ಟವರು ಅವರು ಎಂದು ತಿಳಿಸಿ, ಸಂವೇದನೆ ಎನ್ನುವುದು ಭಾವಾತೀತ,ಜ್ಞಾನದ ವಿಸ್ತೀರ್ಣವನ್ನು ಹಂಚಿಕೊಳ್ಳುವುದೇ ಸಂವೇದನೆ, ಸ್ತ್ರೀ ದೇಹದ ಮೇಲೆ ನಡೆಯುವ ಅತ್ಯಾಚಾರಕ್ಕಿಂತ ಮನಸ್ಸಿನ ಮೇಲೆ ನಡೆಯುವ ಅತ್ಯಾಚಾರ ಅತ್ಯಂತ ಭೀಕರವಾದದ್ದು ಎಂದು ತಿಳಿಸಿದರು…
ಬಸವಣ್ಣನವರ ಅನುಭಾವದ ವಿಚಾರ ಪತ್ನಿ ನೀಲಮ್ಮ ಹೇಳುವ ಮಾತುಗಳು ಮಹಿಳಾ ಸಂವೇದನೆಯನ್ನು ಹೆಚ್ಚಿಸುತ್ತದೆ,ಅರುವನರಿಯಲು ಕುರುಹು ಅರಿಯಲೇಬೇಕು, ತಾನು ಗಂಡಿನ ಅಧೀನ, ತಾನು ದುರ್ಬಲಳು,ತನಗೂ ಕೂಡ ಸ್ವಾವಲಂಬಿಯಾಗಿ ಬದುಕುವ ಹಕ್ಕು ಇದೆ ಎಂದು ನೀಲಮ್ಮ ಹೇಳುತ್ತಾಳೆ ಎಂದು ತಿಳಿಸಿ, ಶತಶತಮಾನಗಳಿಂದ ಶೋಷಣೆಗೆ ಒಳಗಾಗಿ ಪುರುಷನ ಭೋಗ ವಸ್ತುವಾಗಿ ಕಂಡ ಸಮಾಜದಲ್ಲಿ ಸ್ತ್ರೀಯರಿಗೆ ಅನುಭವ ಮಂಟಪವೆಂಬ ವೇದಿಕೆಯನ್ನು ಬಸವಾದಿ ಶರಣರು ನೀಡಿದರು.ಜಗತ್ತು ಕಂಡ ಅಪೂರ್ವ ಸಾಧಕಿ, ಮತ್ತು ಶರಣ ಚಳುವಳಿಯ ಸ್ತ್ರೀ ಸ್ವಾಭೀಮಾನದ ಪ್ರತೀಕಳಾಗಿ, ಅಧಿಕಾರ ಮತ್ತು ಅರಸೊತ್ತಿಗೆಯನ್ನು ದಾಟಿ ಸಾವಿಲ್ಲದ,ಕೇಡಿಲ್ಲದ, ರೂಹಿಲ್ಲದ ಚೆಲುವಂಗೆ ಒಲಿದ ಅಕ್ಕ ಬಂಡಾಯದ ಗಟ್ಟಿ ಧ್ವನಿ ಎತ್ತುತ್ತಾಳೆ.ಸಾವ ಕೊಟ್ಟ ಗಂಡಂದಿರನ್ನು ಒಯ್ದು ಒಲೆಯೊಳಗಿಟ್ಟು ಎನ್ನುವ ಅಕ್ಕನು ಸ್ತ್ರೀ ಪ್ರಧಾನ ನೆಲೆಯಲ್ಲಿ ನಿಷ್ಠುರವಾಗಿ ಅಭಿವ್ಯಕ್ತಿಸಿದ್ದಾಳೆ, ತನ್ನ ಆತ್ಮ ಗೌರವದ ಪ್ರಶ್ನೆ ಬಂದಾಗ ಎಚ್ಚರಿಕೆಯಿಂದ ಮೌನ ಮುರಿದು ಉತ್ತರ ನೀಡಿದ್ದಳು ಎಂದು ತಿಳಿಸಿದರು…
ಕಾಯ ಕರ್ರಗೆ ಇದ್ದಡೇನಯ್ಯಾ,ಕಾಯ ಮಿರ್ರಗೆ ಮಿಂಚಿದಡೇನಯ್ಯಾ,ಅಂತರಂಗ ಶುದ್ಧವಾದ ಬಳಿಕ ಚೆನ್ನಮಲ್ಲಿಕಾರ್ಜುನಯ್ಯ ನೀನೊಲಿದ ಕಾಯ ಹೇಗಿದ್ದಡೇನಯ್ಯಾ ಎಂದು ಅಕ್ಕ ಹೇಳಿದುದನ್ನು ತಿಳಿಸಿ, ಸ್ತ್ರೀ ಶೋಷಿತ ಸಮಾಜದಲ್ಲಿ ಅವಳನ್ನು ಹತ್ತಿಕ್ಕಿದ ಪ್ರಸಂಗಗಳು ಸಾಕಷ್ಟು ಇವೆ, ಕಾಮವನ್ನು ಮತ್ತು ಸ್ತ್ರೀಯರನ್ನು ಅಂದಿನ ಮೇಲ್ವರ್ಗದ ಸಮಾಜವು ಅಪನಂಬಿಕೆಯಿಂದಲೇ ಕಂಡಿತ್ತು, ಹೆಂಗಸರನ್ನು ನೋಡಬೇಡಿ,ಅವರ ಜೊತೆ ಮಾತನಾಡಬೇಡಿ,ಅವರು ಶೀಘ್ರ ಕೋಪಿಗಳು,ಅವರು ರಾಗೋದ್ರೇಕ ತೀವ್ರವಾಗಿರುತ್ತದೆ ಎಂಬ ನಂಬಿಕೆಯನ್ನು ಅವರು ಹುಟ್ಟು ಹಾಕಿದ್ದರು,ಇಂತಹ ಪ್ರಸಂಗಗಳನ್ನು ಸಮಾಜದಲ್ಲಿ ಕಂಡ ಅಕ್ಕ ಕಾಯದೊಳಗಿನ ಕಾಮವನ್ನು ಗೆದ್ದು ಕಾಮಹರನನ್ನು ಆಕೆ ಕೂಡಿದಳು ಹಾಗೆಯೇ ಕಾಮುಕ ಕಣ್ಣುಗಳಿಗೆ ಪ್ರತ್ಯುತ್ತರ ನೀಡಿದ್ದಾರೆ ಸ್ತ್ರೀ ಕುಲಕ್ಕೆ ಅನುಭಾವಿ ಸಾಧಕಿಯಾದಳು ಎಂದು ತಿಳಿಸಿದರು..
ಹೆಣ್ಣು, ಹೊನ್ನು ಮಣ್ಣಿಗಾಗಿ ಕದನಗಳೇ ನಡೆದಿವೆ,ಈ ಮೂರೂ ಕೂಡ ಪರರ ಪಾಲಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿ ಹೇಳಿ 57 ಜನ ಶರಣೆಯರು ಅನುಭವ ಮಂಟಪದಲ್ಲಿ ವಚನಗಳನ್ನು ಬರೆದಿದ್ದಾರೆ,ಆದರೆ ನಾವು ಪ್ರಮುಖ 37 ಜನ ಶರಣೆಯರನ್ನು ಗುರುತಿಸಿದ್ದೇವೆ ಎಂದು ತಿಳಿಸಿದರು..
ಶರಣರು ಮಾತನಾಡುತ್ತಿರಲಿಲ್ಲ ಅವರ ನಡೆಯೇ ಮಾತನಾಡುತ್ತಿತ್ತು ಎಂದು ತಿಳಿಸಿ, ಸಮಾಜದಲ್ಲಿ ಇರುವ ಕೊಳೆಯನ್ನು ನಿರ್ಮೂಲನೆ ಮಾಡುವುದು ಅವರ ಉದ್ದೇಶವಾಗಿತ್ತು,ಲಿಂಗವು ಎಲ್ಲಾ ಅಸ್ಪ್ರಶ್ಯತೆಯನ್ನು ಹೋಗಲಾಡಿಸುವ ವಸ್ತುವಾಗಿತ್ತು, ಜಂಗಮವಿರುವ ಕಡೆ ಜಾತಿಯ ವಿಷವಿರುವುದಿಲ್ಲ ಎಂದು ತಿಳಿಸಿದರು..
ಶರಣರು ಸೂತಕಗಳನ್ನು ನಿರಾಕರಿಸಿದರು ಎಂದು ತಿಳಿಸಿ, ಶರಣರ ಸ್ತ್ರೀ ಸಂವೇದನೆಗಳು ಇಂದು ಜಾಗತಿಕ ಮಟ್ಟದಲ್ಲಿ ವಿಮರ್ಷೆಗಳಾಗುತ್ತಿವೆ ಎಂದು ಇತ್ತೀಚಿನ ದಿನಗಳಲ್ಲಿ ಅಂದರೆ 2010-11 ರಲ್ಲಿ ಸರ್ಕಾರವು % 33 ಮಹಿಳಾ ಮೀಸಲಾತಿಯನ್ನು ಕೊಟ್ಟಿರುವ ಬಗ್ಗೆ ಸ್ಮರಿಸಿ,ಅಲ್ಪ ಶಿಕ್ಷಣ, ಅಸಹಾಯಕರು ಹಾಗೂ ಜಾತಿ ಆಧಾರಿತವಾಗಿ ಕೊಟ್ಟಿದ್ದಾರೆ ಆದರೆ ಅಂದಿನ ಶರಣರು %100 ರಷ್ಟು ಮೀಸಲಾತಿಯನ್ನು ಅಂದೇ ಹೆಣ್ಣು ಮಕ್ಕಳಿಗೆ ಕೊಟ್ಟಿದ್ದರು ಎಂದು ತಿಳಿಸಿ ಹೇಳಿ, ಕೊಟ್ಟಿರುವ ಸ್ವಾತಂತ್ರವನ್ನು ಸ್ವೇಚ್ಛಾಚಾರಕ್ಕೆ ಬಳಸಿಕೊಳ್ಳದೆ, ಆದರ್ಶವಾಗಿ ಇರಬೇಕು ಎಂದು ಹೇಳಿ, ಅನುಭವ ಮಂಟಪದಲ್ಲಿ ಸ್ತ್ರೀ ಯರು ಬರೆದ ವಚನಗಳನ್ನು ನಾವೂ ಕೂಡ ಕಲಿತು ಅವುಗಳನ್ನು ಮುಂದುವರೆಸಬೇಕು ಎಂದು ತಿಳಿಸಿದರು…

ಪಟ್ಟಣ ಸರ್ ಅವರ ಮಾತುಗಳನ್ನು ಮುಕ್ತವಾಗಿ ಶ್ಲಾಘಿಸಿ, ಮಾಯೆಯ ಅರ್ಥವನ್ನು ತಿಳಿಸಿದರು.ಅವರ ಒಂದು ವಚನವನ್ನು ಸ್ಪಷ್ಟಪಡಿಸಿದರು.ಮಾಯೆಯನ್ನು ಹೊರತು ಪಡಿಸಿದರೆ ಎನ್ನಳವಲ್ಲ ಎಂದು ತಿಳಿಸಿದರು..
ಸಮ ಸಮಾಜವನ್ನು ಕಟ್ಟಲು ಮಹಿಳೆಯರು ಶ್ರಮ ಪಟ್ಟಿದ್ದಾರೆ, ಹೆಣ್ಣು ಹಾಗೂ ಗಂಡು ಎಲ್ಲಾ ಒಂದೇ, ಇಲ್ಲಿ ಭೇದವಿಲ್ಲ, ಆಯ್ದಕ್ಕಿ ಲಕ್ಕಮ್ಮ ಮತ್ತು ನೀಲಮ್ಮ ತಮ್ಮ ಗಂಡನಿಗೆ ಬುದ್ಧಿ ಹೇಳುತ್ತಿದ್ದರು, ಅದಕ್ಕೆ ಮೂಲ ಕಾರಣ ಬಸವಣ್ಣನವರು ಎಂದು ತಿಳಿಸಿದರು…

*ವೀರಭದ್ರ ಸ್ವಾಮಿ*:-
ಅಕ್ಕಮಹಾದೇವಿ ಸಣ್ಣ ವಯಸ್ಸಿನಲ್ಲೇ ಕ್ರಾಂತಿಯನ್ನು ಮಾಡಿದ್ದಾರೆ. ಅಲ್ಲಮ ಪ್ರಭು ಮತ್ತು ಅಕ್ಕಳ ಸಂವಾದ ಅನುಭವ ಮಂಟಪದಲ್ಲಿ ಅತ್ಯಂತ ರೋಮಾಂಚನವಾಗವಂತಹ ಸಂವಾದ ವಾಗಿತ್ತು ಎಂದು ತಿಳಿಸಿ, 434 ವಚನಗಳನ್ನು ಅಕ್ಕ ಬರೆದಿರುವುದಾಗಿ ತಿಳಿಸಿ ಹೇಳಿ, ನಿಮ್ಮ ಒಡನಾಟದಿಂದ ನಾನೂ ಕೂಡಾ ಹೆಚ್ಚಿನ ವಚನಗಳನ್ನು ಕಲಿತು ಕರ್ನಾಟಕದಾದ್ಯಾಂತ ಪ್ರಚಾರ ಮಾಡುತ್ತಿದ್ದೇನೆ ಎಂದು ತಿಳಿಸಿದರು…

*ಉಮೇಶ್ ಮಂಟಾಳೆ* :-
ಇತ್ತೀಚಿನ ದಿನಗಳಲ್ಲಿ ಹೆಣ್ಣು ಆಧಾರವಿಲ್ಲದೆ ಕೆಲಸ ಮಾಡುತ್ತಿದ್ದಾಳೆ,ಶರಣ ತತ್ವಗಳನ್ನು ಅವರಿಗೆ ಮುಟ್ಟಿಸಿದರೆ ಅವರೂ ಪ್ರಚಾರ ಮಾಡುತ್ತಾರೆ, ಸಾಕಷ್ಟು ವಚನಗಳು ಬೇರೆಯವರಿಗೆ ಮುಟ್ಟಿಲ್ಲ, ಸ್ತ್ರೀ ಸಮಾನತೆಯನ್ನು ಯಾವ ಧರ್ಮವೂ ಕೊಟ್ಟಿಲ್ಲ, ಇದು ಮಧ್ಯ ಯುಗದಲ್ಲಿ ಸಿಕ್ಕಿದೆ, ಬಸವಣ್ಣನವರು ಹೆಣ್ಣಿನ ಶೂದ್ರತನವನ್ನು ಹೋಗಲಾಡಿಸಿದರು,ಇದರ ಪರಿಣಾಮವಾಗಿ 35 ಜನ ಶರಣೆಯರು ಅಕ್ಷರ ಕ್ರಾಂತಿಯನ್ನು ಮಾಡಿದರು ಎಂದು ತಿಳಿಸಿದರು..

*ಗೀತಾ ಜಿ ಎಸ್*:-
ಇತಿಹಾಸದ ಪುಟಗಳಿಂದಲೂ ನೋಡುತ್ತಾ ಬಂದಾಗ ಹೆಣ್ಣಿನ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ.ಪ್ರಸ್ತುತ ದಿನಮಾನದಲ್ಲೂ ಕೂಡ ಇದು ಮುಂದುವರೆದಿದೆ, ಹೆಣ್ಣು ಮಕ್ಕಳು ಹೊರಗೆ ಹೋಗುವುದೇ ಕಷ್ಟವಾಗಿದೆ.ಇದಕ್ಕೆ ಕೊನೆ ಇಲ್ಲವೇ ಎಂದು ಕೇಳಿದರು..
ಅದಕ್ಕೆ ಪಟ್ಟಣ ಸಾರ್ ರವರು ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು.ನಮ್ಮ ಅಕ್ಕ ತಂಗಿಯರಂತೆ ಎಲ್ಲರನ್ನೂ ಕಾಣಬೇಕು ಎಂದು ಹೇಳಿದರು..
ಅದಕ್ಕೆ ಉಮೇಶ್ ಸರ್ ಮಾತಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದಕ್ಕಿಂತ ಅವರು ತಮ್ಮಷ್ಟಕ್ಕೇ ಬದಲಾವಣೆ ಹೊಂದಬೇಕು ಎಂದು ತಿಳಿಸಿದರು…

*ಡಾ.ಶುಭಾರಾಣಿ ಕಡಪಟ್ಟಿ*
ಹೆಣ್ಣು ಭ್ರೂಣಹತ್ಯೆ ನಿಲ್ಲಬೇಕು, 1995 ರಿಂದ ಹೆಣ್ಣು, ಗಂಡು ಎರಡನ್ನೂ ನಾವು ಹೇಳುತ್ತಿಲ್ಲ, ಹೆಣ್ಣು ಮಕ್ಕಳು ಎಂದು ಬೇಜಾರಾಗಬಾರದು, ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರೆ ಅವರು ಗಂಡಿಗಿಂತ ಕಡಿಮೆ ಇಲ್ಲದಂತೆ ಸಾಧನೆ ಮಾಡುತ್ತಾರೆ, ಎಂದು ತಿಳಿಸಿ, ಮಲಾಲಾ ಪುಸ್ತಕ ಓದಿದೆ, ಅಲ್ಲಿ ಶಿಕ್ಷಣವೇ ಇಲ್ಲ,ಆದರೆ ಭಾರತದಲ್ಲಿ ಆ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು…

*ಚಂದ್ರಶೇಖರ ಗಾಣಿಗೇರ*
ಅಸ್ಸಾಂ ಮತ್ತು ನಾಗಾಲ್ಯಾಂಡ್ ಪ್ರದೇಶದಲ್ಲಿ ಮದುವೆಯಾದ ಮೇಲೆ ಗಂಡೇ ಹೆಣ್ಣಿನ ಮನೆಗೆ ಹೋಗುವ ಪದ್ಧತಿ ಇದೆ.ಇಲ್ಲಿ ಗಂಡು ಹೆಣ್ಣು ಭೇದವಿಲ್ಲ ಎಂದು ತಿಳಿಸಿ,ಗಲ್ಫ್ ದೇಶಗಳಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಶೂಟ್ ಮಾಡುತ್ತಾರೆ ಎಂದು ತಿಳಿಸಿದರು..

*ಮಂಜುಳಾ ಅಂಗಡಿ* :-
ಕಠಿಣ ಶಿಕ್ಷೆಗಳು ಇದ್ದಾರೆ ಅತ್ಯಾಚಾರ ನಡೆಯುವುದಿಲ್ಲ ಎಂದು ಹೇಳಿದರು…

*ಕುಮಾರ್ ರಾಜಣ್ಣ* ,:-
ಸಂವೇದನೆ ಎಂದರೆ ಸ್ಥಿರತೆ, ಜ್ಞಾನ ಎಂದು ತಿಳಿಸಿ, ಗೊಗ್ಗವ್ವೆಯ ಹೊರಗಣ ಗಂಡನಯ್ಯಾ ಒಳಾಂಗಣ ಮಿಂಡನಯ್ಯಾ ಎನ್ನುವ ವಚನದ ಅರ್ಥವನ್ನು ತಿಳಿಸಿದರು ‌..

*ಮಲ್ಲಿಕಾರ್ಜುನ ಅಂಗಡಿ*
ಸಂವೇದನೆ ಎಂದರೆ ತಿಳುವಳಿಕೆ, ಅವರು ಮಾನಸಿಕವಾಗಿ ಸ್ವಾಸ್ಥರಾಗಿರಬೇಕು ಎಂದು ತಿಳಿಸಿ, ನಮ್ಮ ಹೆಂಡತಿಯನ್ನು ಬಿಟ್ಟರೆ ಉಳಿದವರು ತಾಯಿಯ ಸಮಾನ ಎಂದು ತಿಳಿಯಬೇಕು,ದುಷ್ಟರ ಪರಿವರ್ತನೆ ಮಾಡುವುದು ಷರಣರ ಉದ್ದೆ ವಾಗಿತ್ತು ಎಂದು ಹೇಳಿದರು..
19 ನೆಯ ಶತಮಾನದಲ್ಲಿ ಶೃಂಗೇರಿ ಮಠದಲ್ಲಿ ಹೆಣ್ಣು ಮಕ್ಕಳ ಮಾರಾಟವಾಗುತ್ತಿತ್ತು ಎನ್ನುವ ವಿಷಯವನ್ನು ತಿಳಿಸಿದರು…

*ಸೋಮಶೇಖರ್* *ಮುಗ್ದಮ್*
ಚುನಾವಣೆ ಸಂದರ್ಭದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಬೂತ್ ಗಳು ಬಂದಿವೆ ಎಂದು ತಿಳಿಸಿ,ನಾರಿಗೆ ಗುಣವೇ ಶೃಂಗಾರ ಅಂತ ಶರಣರು ಹೇಳಿದ್ದಾರೆ,ಆದರೆ ಇಂದು %33 ರಷ್ಟು ಮಹಿಳೆಯರು ಮದ್ಯ ಸೇವನೆ ಮಾಡಿ ಸಿಕ್ಕಿ ಬಿದ್ದಿದ್ದಾರೆ.
ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು, ಎಂದು ತಿಳಿಸಿದರು..

*ವೀರಭದ್ರ ಗೌಡ* :-
ಸಂವೇದನೆ ಎಂದರೆ ಅರಿವು.ಆ ಬದ್ಧತೆಯನ್ನು ಅಂದಿನ ಸಮಾಜ ಹೊಂದಿತ್ತು.ಎಲ್ಲಿಯೂ ಕೂಡಾ ಹೊಸತನ್ನು ಕಲಿಸುತ್ತಿದ್ದ, ಮಾಧ್ಯಮಗಳು ಕೂಡಾ ತುಂಬಾ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿವೆ , ಸನ್ಯಾಸಿಗಳನ್ನು ನಂಬಬಾರದು, ಸ್ತ್ರೀ ಪುರುಷರನ್ನು ಸಮಾನವಾಗಿ ಕಾಣಬೇಕು,ಆಗ ಮಾತ್ರ ಭಿನ್ನತೆ ದೂರವಾಗುತ್ತದೆ,ವಚನ ಸಾಹಿತ್ಯವು ಈ ಅಂಧಕಾರವನ್ನು ದೂರಮಾಡಬಲ್ಲದು ಎಂದು ತಿಳಿಸಿದರು‌‌….

*ಪ್ರತಿಭಾ ಅಲೆಗಾವಿ*
3 ಶಬ್ಧಗಳಿಂದ ಸಂವೇದನೆಯ ಅರ್ಥ ಕೂಡಿದೆ…
ಭಾವನೆ,ಅನುಭಾವ, ಸಂಕಲ್ಪ ಮತ್ತು ಇಚ್ಛಾಶಕ್ತಿ ಇವೆಲ್ಲರ ಸಂಗಮವೇ ಸಂವೇದನೆ, ಸ್ತ್ರೀ ಪುರುಷ ಅಂಗ ರಚನೆಯ ದೈಹಿಕ ಕಾರಣದಿಂದ ಬೇರೆ ಮಾಡಿದ್ದಾರೆ, ಎಂದು ತಿಳಿಸಿ‌, ಶರಣೆ ಸತ್ಯಕ್ಕ,ಗೊಗ್ಗವ್ವೆ, ಕಾಳವ್ವೆ,ಅಮುಗೆ ರಾಯಮ್ಮ ಇವರ ವಚನಗಳನ್ನು ನಿರ್ಲಕ್ಷ್ಯ ಮಾಡಿದ್ದೇವೆ ಎಂದು ತಿಳಿಸಿದರು.

*ವಚನ ಮಂಗಳ*
ವಿದ್ಯಾ ಮುಗ್ದಮ್ ರವರು ಹಾಲ ತೊರಗೆ ಬೆಲ್ಲದ ಕೆಸರು ಎನ್ನುವ ವಚನವನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮವನ್ನು ಮುಗಿಸಿದರು…

ವರದಿ ಮಂಡನೆ:-
ಜಿ.ಎಸ್.ಗೀತಾ
ಹರಮಘಟ್ಟ-ಶಿವಮೊಗ್ಗ

Don`t copy text!