ಡಾ.ವೀರಣ್ಣ ದಂಡೆ ಅವರಿಂದ ಅನುಭಾವ
ಗೂಗಲ್ ಮೀಟ್ ಶರಣ ಚಿಂತನ ಮಾಲಿಕೆ- 29
ಸಾಮೂಹಿಕ ಸಂವಾದದಲ್ಲಿ ಹರಿಹರನ ಶರಣ ರಗಳೆಗಳು ಮತ್ತು ಪಾಲ್ಕುರಿಕೆ ಸೋಮನಾಥನ ಕಾವ್ಯಗಳಲ್ಲಿ ಶರಣ ಧರ್ಮ ಮತ್ತು ಇತಿಹಾಸ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
*ಅನುಭಾವ*: *ಡಾ.ವೀರಣ್ಣ ದಂಡೆ* ನಿವೃತ್ತ ಪ್ರಾಧ್ಯಾಪಕರು ಗುಲ್ಬರ್ಗ ವಿಶ್ವವಿದ್ಯಾನಿಲಯ..
ವಚನ ಪ್ರಾರ್ಥನೆ: *ಪಾರ್ವತಿ* *ಪಾಟೀಲ್*
ಆರಂಭ ಮಾಡುವೆನು ಗುರು ಪೂಜೆಗೆಂದು
ವ್ಯವಹಾರ ಮಾಡುವೆನು ಲಿಂಗಾರ್ಚನೆಗೆಂದು ಎನ್ನುವ ಬಸವಣ್ಣನವರ ವಚನವನ್ನು ಹಾಡಿದರು…
*ಕುಮಾರಿ ಗ್ರೀಷ್ಮಾ* :-
ಆಡಿದರೇನು, ಹಾಡಿದರೇನು ಪೂಜಿಸಿದರೇನು ತ್ರಿವಿಧ ದಾಸೋಹವಿಲ್ಲದನ್ನಕ್ಕ ಎನ್ನುವ ಬಸವಣ್ಣನವರ ವಚನವನ್ನು ಹಾಡಿದಳು…
ಪ್ರಾಸ್ತಾವಿಕ ಹಾಗೂ ಸ್ವಾಗತ *ರುದ್ರಮೂರ್ತಿ ಪ್ರಭು* :-
ಸರ್ವರಿಗೂ ಶರಣು ಶರಣಾರ್ಥಿ ಗಳನ್ನು ಹೇಳಿದ ಅವರು ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ ,ಹರಿಹರನ ರಗಳೆಗಳು ಮತ್ತು ಪಾಲ್ಕುರಿಕೆ ಸೋಮನಾಥನ ಕಾವ್ಯಗಳಲ್ಲಿ ಶರಣ ಧರ್ಮ ಮತ್ತು ಇತಿಹಾಸದ ಬಗ್ಗೆ ಉಪನ್ಯಾಸ ನೀಡಲು ಪ್ರಾಧ್ಯಾಪಕರಾದ ಡಾ. ವೀರಣ್ಣ ದಂಡೆಯವರು ಆಳವಾದ ಶರಣ ಚಿಂತನೆಯನ್ನು ಮೈಗೂಡಿಸಿಕೊಂಡ ಹಿರಿಯರು, ಅವರು ಬಂದಿರುವುದು ನಮ್ಮ ಪುಣ್ಯ ಹಾಗಾಗಿ ಎಲ್ಲರೂ ಗಮನವಿಟ್ಟು ಅವರ ಉಪನ್ಯಾಸವನ್ನು ಕೇಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು…
*ಡಾ.ವೀರಣ್ಣ ದಂಡೆ* :-
ಡಾ.ಶಶಿಕಾಂತ್ ಪಟ್ಟಣ ಹಾಗೂ ರುದ್ರಮೂರ್ತಿಯವರನ್ನು ಸ್ಮರಿಸಿದ ಅವರು ಈ ಗೋಷ್ಠಿಯಲ್ಲಿ ಭಾಗವಹಿಸಿದ ಸರ್ವರಿಗೂ ವಂದಿಸಿದರು ವಚನ ಸಾಹಿತ್ಯ ನಮ್ಮ ಧರ್ಮಕ್ಕೆ ಪಟ್ಟ, ಶರಣ ಸಂಗತಿಯ ಚಳುವಳಿಗಳಿಂದ ಇತಿಹಾಸ ಸಿಗುತ್ತದೆ. ಧರ್ಮದ ತತ್ವ ಹಾಗೂ ಸಂಸ್ಕೃತಿ ಚಳುವಳಿಗೆ ಹುಟ್ಟಿ ಕೊಟ್ಟಂತಹ ತತ್ವ ಇತಿಹಾಸವನ್ನು ಸೃಷ್ಟಿ ಮಾಡುವ ಜವಾಬ್ದಾರಿ ಕವಿಗಳಿಗೆ ಇರುತ್ತದೆ, ಹಾಗಾಗಿ ಇಬ್ಬರೂ ಕೂಡ ಅಪರೂಪದ ಕವಿಗಳು ಕುತೂಹಲ ಹುಟ್ಟಿದ್ದು ಏಕೆಂದರೆ ನಾನು ಮೂಲತಃ ಜನಪದ ಸಾಹಿತ್ಯವನ್ನು ಅಭ್ಯಾಸ ಮಾಡಿದವನು, ಬಸವ ಪುರಾಣದ ಬಗ್ಗೆ ಹೆಚ್ಚು ಅಧ್ಯಯನ ಮಾಡಿದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರನ್ನು ನೋಡಿಲ್ಲ ಜನಿವಾರ ಇದು ಕೂಡ ಇಷ್ಟಲಿಂಗವನ್ನು ಪೂಜಿಸಿದಾತ,
ಅಪ್ಪಟ ಬಸವ ಭಕ್ತ ಬಸವಣ್ಣನವರು ಕೂಡಲಸಂಗಮದಲ್ಲಿ ಲಿಂಗೈಕ್ಯರಾದ ಸುದ್ದಿ ಕೇಳಿ ಮರುಗುತ್ತಾರೆ ಬಸವಣ್ಣನವರ ಕಾಲದಲ್ಲಿದ್ದ ಶರಣರ ಪಟ್ಟಿಯನ್ನು ಪಾಲ್ಕುರಿಕೆ ಸೋಮನಾಥರು ಕೊಡುತ್ತಾರೆ.ಅವರ ಪ್ರಲಾಪ ದಲ್ಲಿ ಶಿವನನ್ನು ಕುರಿತು ಬಸವಣ್ಣನವರನ್ನು ಏಕೆ ಕರೆದುಕೊಂಡೆ ಎಂದು ಪ್ರಶ್ನಿಸುತ್ತಾರೆ ಎಂದು ಹೇಳಿದರು…
ಬಸವ ಪುರಾಣವನ್ನು ಭೀಮಕವಿಯೂ ಕೂಡ ಬರೆದಿದ್ದಾರೆ ಪಾಲ್ಕುರಿಕೆ ಸೋಮನಾಥನು ಮೂಲತಃ ತೆಲುಗು ಕವಿ,ಅವರ ಎರಡು ಕಾವ್ಯಗಳನ್ನು ಅನುವಾದ ಮಾಡಲು ಬಸವ ಸಮಿತಿಯ ಜತ್ತಿಯವರನ್ನು ಕೇಳಿಕೊಂಡಾಗ ಅವರು ದೊಡ್ಡ ವಿದ್ವಾಂಸರು ಹಾಗೂ ಸಂಸ್ಕೃತ ಕವಿ ಸದಾನಂದ ಶಾಸ್ತ್ರಿಯವರಿಗೆ ಹೇಳಿ ಅನುವಾದಿಸಿ ಕೊಡುತ್ತಾರೆ. ಅದರ ಪುಟಪುಟಗಳನ್ನು ಓದಿ ನಾನು ಮುದ್ರಣಗೊಳಿಸಲು ಬಸವ ಸಮಿತಿಗೆ ತಿಳಿಸಿದ್ದೇನೆ ಎಂದು ಹೇಳಿದರು..
ಪಾಲ್ಕುರಿಕೆ ಸೋಮನಾಥ ರೂ ಬಸವ ಪುರಾಣವನ್ನು ಕನ್ನಡ-ಸಂಸ್ಕೃತ ಹಾಗೂ ತೆಲುಗಿನಲ್ಲಿ ಬರೆದಿದ್ದಾರೆ ಎಂದು ತಿಳಿಸಿ, ಅದರಂತೆ ಬಸವ ಭಕ್ತ ಹಾಗೂ ಪಾಲ್ಕುರಿಕೆ ಸೋಮನಾಥ ಕವಿಯು ಕೂಡ ಬಸವ ಭಕ್ತ, ಇವರು ಬಸವಣ್ಣನವರೇ ನಮ್ಮ ಮನೆತನದ ಗುರು ಎಂದಾಗ ಇವರಿಬ್ಬರ ಕಾವ್ಯಗಳನ್ನು ಓದಿ ನನಗೆ ದಿಗ್ಭ್ರಮೆಯಾಯಿತು. ಎಲ್ಲರೂ ಕೂಡ ಸುಲಲಿತವಾಗಿ ಓದಿಕೊಂಡು ಹೋಗಬಹುದು, ಹಾಗಾಗಿ ಪಾಲ್ಕುರಿಕೆ ಸೋಮನಾಥರೆ ಇಷ್ಟು ಅದ್ಭುತವಾಗಿ ಬರೆದಿರುವಾಗ ಹರಿಹರ ಮಾಡಿರುವುದೇನು? ಎನ್ನುವ ಕುತೂಹಲ ನನಗೆ ಮೂಡಿತು,ಡಾ.ಎಂ,ಎಂ. ಕಲ್ಬುರ್ಗಿಯವರು ಸದಾನಂದ ಪಾಟೀಲರಿಂದ ಅನುವಾದಿಸಿ ಇಟ್ಟಂತ ಸುಮಾರು 108 ರಗಳೆಗಳನ್ನು ಹರಿಹರ ಬರೆದಿದ್ದಾನೆ ಅದರಲ್ಲಿ 60 ಜನ ತಮಿಳು ಶೈವರು ಇದ್ದಾರೆ,%90 ರಷ್ಟು ಬೇರೆ ಇವೆ 20ರಿಂದ 23 ಶರಣ ಶರಣ ಧರ್ಮದ ಬಗ್ಗೆ ಬರೆದದ್ದು ಇದೆ. ಇವರು ಬರೆದಂತಹ ಮೂರು ಕೃತಿಗಳು ಕೂಡ ಸಾಮಾನ್ಯರನ್ನು ತಲುಪಬೇಕು, ಕೊರೋನ ಮುಗಿದ ನಂತರ ಬಿಡುಗಡೆಯಾಗುತ್ತದೆ ಎಂದು ತಿಳಿಸಿದರು…
ಹರಿಹರ ಮೊದಲು ಶೈವ ಪರಂಪರೆಯನ್ನು ಬರೆದಿದ್ದಾನೆ ಅವರ ಮೊದಲ ಕಾವ್ಯ, ಸುಮಾರು 70ರಿಂದ 80 ರಷ್ಟು ಶೈವ ರಗಳೆಗಳನ್ನು ಬರೆದಿದ್ದಾರೆ, ಅವರು 40 ರಿಂದ 60 ವಯಸ್ಸಿನಲ್ಲಿದ್ದಾಗ ಶರಣರ ಬಗ್ಗೆ ಕಾವ್ಯಗಳನ್ನು ಬರೆಯಲು ಆರಂಭಿಸಿದ್ದಾರೆ ಸುಮಾರು 18 ಕಾವ್ಯಗಳನ್ನು ಅವರು ಬರೆದಿದ್ದಾರೆ, ಬಸವರಾಜದೇವರ ರಗಳೆಗಳಲ್ಲಿ ನೇರವಾಗಿ ಇತಿಹಾಸ ತತ್ವಗಳನ್ನು ಹಿಡಿದಿಟ್ಟಿದ್ದಾರೆ. 60 ಜನ ಶಿವಶರಣರ ಹೆಸರುಗಳು ದಾಖಲೆಯಲ್ಲಿವೆ,23 ಶರಣರ ಚರಿತ್ರೆಗಳನ್ನು ಗಳನ್ನು ಬರೆದಿದ್ದಾರೆ, ಎಂದು ತಿಳಿಸಿದರು ಡಾ.ಎಂ.ಎಂ. ಕಲ್ಬುರ್ಗಿಯವರು ರೇವಣಸಿದ್ದರು ಶಾಸನಗಳನ್ನು ಆಧಾರವಾಗಿಟ್ಟುಕೊಂಡು ಅವರ ಕಾಲ 1080 ರಿಂದ 1180 ರವರೆಗೆ ಇರಬಹುದು, ಸಿರಿವಾರದ ಸಮೀಪ ಹೋತ್ಗಲ್ ನಲ್ಲಿ ಸಿದ್ದೇಶ್ವರ ದೇವಸ್ಥಾನ ಇದೆ, ಅವರು ಹುಟ್ಟಿದ್ದು ಬದುಕಿದ್ದಕ್ಕೆ ಆಧಾರ ಇದೆ ಎಂದು ತಿಳಿಸಿ, 1132 ರಲ್ಲಿ ಬಸವಣ್ಣನವರು ಕೂಡಲಸಂಗಮದಲ್ಲಿ ಶಿಕ್ಷಣ ಮುಗಿಸಿ ಮಂಗಳ ವೇಳೆಗೆ ಬಿಜ್ಜಳನನ್ನು ಕಾಣಲು ಬಂದರು ಜೇಡರ ದಾಸಿಮಯ್ಯನವರು ಬಸವಣ್ಣನವರಿಗಿಂತ ಹಿರಿಯರಾದರೂ ಕೂಡ ಅವರ ಸಮಕಾಲಿನರು,ಸುಮಾರು 23 ಚರಿತ್ರೆಗಳಲ್ಲಿ ಬಸವಣ್ಣನವರ ತತ್ವಗಳಿಗೆ ಬೇಕಾದಂತೆ ವಿಷಯಗಳನ್ನು ಹರಿಹರನು ಬರೆದಿದ್ದಾನೆ ಎಂದು ತಿಳಿಸಿದರು.
ಹರಿಹರನು ತನ್ನ ರಗಳೆಗಳಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪದಗಳನ್ನು ಉಲ್ಲೇಖಿಸಿ, ಲಿಂಗವಂತ, ಲಿಂಗಾರ್ಚನೆ ಲಿಂಗಾಯತ ಧರ್ಮದ ಬಗ್ಗೆ ಮಹಾಮನೆಯ ಬಗ್ಗೆ ಹಾಗೂ ಮಿಕ್ಕ ಪ್ರಸಾದದ ಬಗ್ಗೆ ಉಲ್ಲೇಖಿಸಿದ್ದಾನೆ ಎಂದು ತಿಳಿಸಿ, ಶರಣು ಶರಣಾರ್ಥಿಗಳು ಹಾಗೂ ಲಿಂಗದೀಕ್ಷೆ ಎನ್ನುವ ಪದವನ್ನು ಕೂಡ ಬಳಸಿದ್ದಾನೆ, ಇದರಲ್ಲಿ ಅವನು ತಪ್ಪಿಯೂ ಕೂಡ *ವೀರಶೈವ* ಪದವನ್ನು ಬಳಸಿಲ್ಲ. ಅಸಂಖ್ಯಾತರು ಹಾಗೂ 770 ಅಮರಗಣಂಗಳು ಎನ್ನುವ ಪದವನ್ನು ಬಳಸಿದ್ದಾನೆ ಎಂದು ತಿಳಿಸಿ, ಬಸವಣ್ಣನವರು ಸಜ್ಜನ ಶರಣ ಹಾಗೂ ವಿನಯವಂತ ಎಂದು ಹರಿಹರ ಹೇಳಿದ್ದಾನೆ ಅವರು ಮಹಾಮನೆಗೆ ಬಂದವರಿಗೆ ನಮಸ್ಕರಿಸಿ ಕಾಲಿಗೆ ನೀರು ಕೊಟ್ಟು ಲಿಂಗ ಪೂಜೆ ಮಾಡಿಸಿ ನಂತರ ಪ್ರಸಾದ ವ್ಯವಸ್ಥೆಯನ್ನು ಮಾಡಿಸಿದ್ದರು ಎಂದು ತಿಳಿಸಿದ್ದಾನೆ.
*ಮಹಾಮನೆಯಲ್ಲಿ* ಸಂಘಟನೆಯ ಜೊತೆ ಚರ್ಚೆ ಮಾಡ್ತಾ ಇದ್ರು, ಜೊತೆಗೆ ‘ಗೀತ ಗೋಷ್ಠಿ’ ನಡೆಯುತ್ತಿತ್ತು ಬಸವಣ್ಣ ದೊಡ್ಡ ಸಂಗೀತಗಾರ ಎಂದು ಬಸವರಾಜ ಪುರಾಣದಲ್ಲಿ ಹರಿಹರ ಬರೆದಿದ್ದಾನೆ ಎಂದು ತಿಳಿಸಿದರು…
ಪಾಲ್ಕುರಿಕೆ ಸೋಮನಾಥ ರ ದೃಷ್ಟಿ ವಿಶಾಲವಾದದ್ದು ಬಸವಣ್ಣನವರ ಸಂಘಟನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಚರಿತ್ರೆ ಬರೆಯುವುದೇ ನನ್ನ ಮುಖ್ಯ ಉದ್ದೇಶ, ಬಸವಣ್ಣನವರ ಜೊತೆ ಇದ್ದಂತ ಪ್ರತಿಯೊಬ್ಬ ಶರಣರಲ್ಲಿ ಬಸವಣ್ಣ ಇದ್ದಾನೆ ಹಾಗಾಗಿ ಅವರ ಬಗ್ಗೆಯೂ ಕೂಡ ಬರೆಯುವುದು ಮುಖ್ಯ ಎಂದು ತಿಳಿಸಿ 44 ಶರಣ ಚರಿತ್ರೆಗಳನ್ನು ಅವರು ಬರೆದಿದ್ದಾರೆ ಎಂದು ತಿಳಿಸಿ, ಪಾಲ್ಕುರಿಕೆ ಸೋಮನಾಥ ವಾರಂಗಲ್ ಹತ್ತಿರದ ಹಳ್ಳಿಯವರು ಸೋಮನಾಥ ಬಾಲ್ಯದಿಂದಲೇ ಬಸವಣ್ಣನವರ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದರು, ಮಂದಿಗೆ ಮಾದಿರಾಜ ಹಾಗೂ ಸಂಗನ ಮಾತ್ಯರ ಬಗ್ಗೆ ಉಲ್ಲೇಖಿಸಿ,ಮಂಡಿಗೆ ಮಾದಿರಾಜನಿಂದಲೇ ಹರಿಹರನಿಗೆ ಕಾವ್ಯ ಬರೆಯಲು ಸ್ಫೂರ್ತಿ ಸಿಕ್ಕಿದೆ ಎಂದು ತಿಳಿಸಿದರು..
ಹರಿಹರನ ಕಾವ್ಯಗಳು 1220 ರಲ್ಲಿ ರಚಿತವಾದರೆ ಸೋಮನಾಥನ ಕಾವ್ಯಗಳು 1235 ರಿಂದ 40 ರ ವರೆಗೆ ರಚಿತವಾಗಿರುವ ಹುದು ಎಂದು ತಿಳಿಸಿ, ಹರಿಹರನ ರಗಳೆಗಳನ್ನು ಸೋಮನಾಥ ಹೋಗಿರಬಹುದು ಎಂದು ತಿಳಿಸಿದರು..
ಹಾಗಾದರೆ ಬಸವ ಪುರಾಣದ ವಿಶೇಷತೆಗಳೇನು?
ಪುರಾಣ ಎಂದರೆ ಕಾಲ್ಪನಿಕ ಪುರಾಣ ಇಲ್ಲ ಶರಣರ ಸ್ಥಳಗಳನ್ನು ಅಡ್ಡಾಡಿ ಕುಂತಲ್ಲೇ ಕಾವ್ಯ ಬರೆಯುತ್ತಿದ್ದರು, ಹರಿಹರನು 60 ಶರಣರನ್ನು ದಾಖಲೆ ಮಾಡಿದ್ದಾನೆ ಪುರಾಣದಲ್ಲಿ 200 ಶರಣರ ಹೆಸರುಗಳನ್ನು ದಾಖಲಿಸಿದ್ದು,ಕಾಯಕದ ಹೆಸರು ಮೊದಲು ಹೇಳಿ ನಂತರ ಹೆಸರುಗಳನ್ನು ಹೇಳಿದ್ದಾನೆ ಎಂದು ತಿಳಿಸಿ, ಮೌಖಿಕ ಚರಿತ್ರೆಗಳನ್ನು ಕಟ್ಟಿಕೊಟ್ಟಿದ್ದು ಸೋಮನಾಥ, ಹರಿಹರ ಮತ್ತು ಸೋಮನಾಥರು ಜನರಿಂದ ಮಾಹಿತಿ ಪಡೆದು ಕಾವ್ಯ ಮತ್ತು ಸಾಹಿತ್ಯವನ್ನು ಬರೆದಿದ್ದಾರೆ, ಇವನು ಕೂಡ ಎಲ್ಲಿಯೂ ವೀರಶೈವ ಪದವನ್ನು ಬಳಸಿಲ್ಲ ಎಂದು ತಿಳಿಸಿ,ಲಿಂಗಧರ್ಮ ಮಹೇಶ್ವರರು ಪದವನ್ನು ಬಳಸಿದ್ದಾರೆ ಮಹೇಶ್ವರ ಎಂದರೆ ಲಿಂಗವಂತ, ಲಿಂಗಾಯತ ಲಿಂಗ ಧಾರಿ ಎಂದು ಅರ್ಥ,ಬಸವ ಪುರಾಣ ಬರೆದನಂತರ ಬಸವ ಸ್ತೋತ್ರಗಳನ್ನು ಬರೆದು ಮಲ್ಲಿಕಾರ್ಜುನ ಪಂಡಿತಾರಾಧ್ಯರ ಚರಿತೆಯನ್ನು ಬರೆಯುತ್ತಾನೆ. ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರನ್ನು ನೋಡದೆ ಅವರ ಎತ್ತರಕ್ಕೆ ಬೆಳೆದಿದ್ದರು ಎಂದು ತಿಳಿಸಿದರು..
ಅವರು ಭಾರತದ ಎಲ್ಲಾ ತತ್ವಗಳನ್ನು ಅವುಗಳ ಮೂಲಕ ಗಳನ್ನು ಹೇಳಿ ಬಸವಪುರಾಣ ಎಲ್ಲವುಗಳಿಗಿಂತ ಶ್ರೇಷ್ಠವಾದುದು ಎಂದು ತಿಳಿಸಿ ಅನುಭವ ಮಂಟಪದಲ್ಲಿ *ಉದಿತಗೋಷ್ಟಿ* ನಡೆಯುತ್ತಿತ್ತು. ಅಲ್ಲಮಪ್ರಭುಗಳು ಶೂನ್ಯ ಪೀಠವನ್ನು ಸೇರಿದ್ದು ಅದ್ಭುತ, ಆತನ ಅಂಧಕಾಂತಿಯು ದಶದಿಕ್ಕುಗಳಲ್ಲಿ ಪಸರಿಸುತ್ತಿದೆ ಎಂದು ತಿಳಿಸಿ ಮೂರನೇ ಅಧ್ಯಾಯದಲ್ಲಿ ಬಸವಣ್ಣ ಭಂಡಾರದ ಮಂತ್ರಿಯಾಗಿ ವೇತನವನ್ನು ಹಂಚುತ್ತಾನೆ ಮಿಂಡ ಜಂಗಮ ಬಂದು ಕೇಳಿದಾಗ ಎಲ್ಲವನ್ನು ಕೊಡುತ್ತಾರೆ,ವೇಶ್ಯೆಯರ ಸಹವಾಸ ಮಾಡುವವರು ಕೂಡ ಬದಲಾಗಬೇಕು ಶರಣ ತತ್ವಗಳನ್ನು ಒಪ್ಪಿ ಒಳ್ಳೆಯ ಬದುಕನ್ನು ಕಟ್ಟಿ ಕೊಳ್ಳಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು ಎಂದು ತಿಳಿಸಿ, ಮುಗ್ಧ ಸಂಗಯ್ಯ ನವರ ಬಗ್ಗೆ ವಿವರಿಸಿದರು…
ಸೋಮನಾಥರು ಬಸವಣ್ಣ ತುಂಬಾ ಸಮಾಧಾನದ ವ್ಯಕ್ತಿ ಆದರೆ ಅನವಶ್ಯಕವಾಗಿ ಯಾವ ತಪ್ಪು ಇಲ್ಲದಿದ್ದರೂ ಹರಳಯ್ಯ-ಮಧುವಯ್ಯನವರ ಸರಿ ತಪ್ಪು ಗಮನಿಸದೆ ಎಳೆಹೂಟೆ ಶಿಕ್ಷೆ ವಿಧಿಸಿದ್ದು ಅವರಿಗೆ ಅಸಮಾಧಾನ ತಂದಿತ್ತು. ಕೋಟೆ ಹಾಳಾಗುತ್ತದೆ ಎಂದು ಮೂರು ಬಾರಿ ನುಡಿದು ಶಾಪ ಹಾಕಿ ಊರನ್ನು ಬಿಟ್ಟು, ಕೂಡಲಸಂಗಮಕ್ಕೆ ಮಡಿವಾಳ ಮಾಚಿದೇವ ಹಾಗೂ ಶರಣರ ಜೊತೆ ಕೂಡಲ ಸಂಗಮಕ್ಕೆ ಹೋಗಿ ಐಕ್ಯರಾದರು ಎಂದು ತಿಳಿಸಿದರು…
ಡಾ. ವೀರಣ್ಣ ದಂಡೆಯವರು ಎಲ್ಲಾ ಶರಣ ಶರಣೆಯರ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸಿದರು.ಹಾಗೆಯೇ ಡಾ. ಶಶಿಕಾಂತ ಪಟ್ಟಣ ಸರ್ ಕೂಡಾ ಅನೇಕರ ಗೊಂದಲದ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡಿದರು…
*ವಚನ ಪ್ರಾರ್ಥನೆ* :-
*ಎಂಜಲೀನ ಗ್ರೆಗರಿ*
ನೀರ ಕಂಡಲ್ಲಿ ಮುಳುಗುವರಯ್ಯ ಮರವ ಕಂಡಲ್ಲಿ ಸುತ್ತುವರಯ್ಯ ಎನ್ನುವ ಬಸವಣ್ಣನವರ ವಚನವನ್ನು ಹಾಡಿದರು..
*ಸುನಿತಾ ಮೂರ್ಶಿಳ್ಳಿ*
ಹಾಡುವೆನಯ್ಯ ನಿಮ್ಮ ನೋಡುವೆನಯ್ಯಾ ಎನ್ನುವ ವಚನವನ್ನು ಹಾಡಿದರು
*ಸರಸ್ವತಿ ರಾಮಣ್ಣ*
ಪುಣ್ಯದ ಕಂಗಳ ಅರಿಯದ ಮುನ್ನ ಎನ್ನುವ ಸಿದ್ಧರಾಮ ವಚನವನ್ನು ಹಾಡಿದರು..
*ಶರಣಸಮರ್ಪಣೆ* *ರುದ್ರಮೂರ್ತಿ ಪ್ರಭು*
ಪಟ್ಟಣ ಸರ್, ವೀರಣ್ಣ ದಂಡೆ ಅವರಂಥ ಹಿರಿಯರು ಹರಿಹರನ ರಗಳೆಗಳು ಹಾಗೂ ಸೋಮನಾಥರ ಬಗ್ಗೆ ಕೂಲಂಕುಶವಾಗಿ ವಿಷಯವನ್ನು ಹಂಚಿಕೊಂಡು ಹಲವಾರು ಗೊಂದಲಗಳನ್ನು ಪರಿಹರಿಸಿದ್ದಾರೆ ಹಾಗೂ ಎಲ್ಲರ ಪ್ರಶ್ನೆಗಳಿಗೆ ಸಮರ್ಥವಾದ ಉತ್ತರವನ್ನು ಕೊಟ್ಟಿದ್ದಾರೆ ಎಂದು ತಿಳಿಸಿ ಭಾಗವಹಿಸಿದ ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು..
150 ಕ್ಕೂ ಹೆಚ್ಚು ಶರಣ ಶರಣೆಯರು ಭಾಗವಹಿಸಿ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಯಶಸ್ವೀ ಗೊಳಿಸಿದರು…
ವರದಿ ಮಂಡನೆ
ಜಿ.ಎಸ್. ಗೀತಾ
ಹರಮಘಟ್ಟ ಶಿವಮೊಗ್ಗ