ಪುಸ್ತಕ ಪರಿಚಯ-ಅಂತರಂಗದ ಅಲೆ
ಕವಯತ್ರಿ-ಪ್ರೋ.ರಾಜನಂದಾ ಘಾರ್ಗಿ
ಹೊಸ ಭರವಸೆ ಮೂಡಿಸುವ -ಹಲವು ಧ್ವನಿಯ ಕವನಗಳು -ಅಂತರಂಗದ ಅಲೆ
ಪ್ರೊ ರಾಜನಂದಾ ಘಾರ್ಗಿ ಅವರ ಮೊದಲ ಚೊಚ್ಚಲ ಕವನ ಸಂಕಲನ ಅಂತರಂಗದ ಅಲೆ ತುಂಬಾ ಚೆನ್ನಾಗಿ ಮೂಡಿಬಂದ ನವ್ಯ ಪ್ರಕಾರದ ಜೊತೆಗೆ ದೇಸಿ ಗತ್ತಿನ ಹೊಸ ಕಾವ್ಯವನ್ನು ಅನಾವರಣಗೊಳಿಸುವ ಸುಂದರ ಕವನ ಸಂಕಲನ . ಮೊದಲನೆಯ ಕವನ ಸಂಕಲನವೆಂದು ಹೇಳಿಕೊಂಡಿದ್ದರೂ ಸಹ ಕವನ ಕಾವ್ಯ ಸೃಷ್ಟಿಯ ಹಿಂದಿನ ಪ್ರಭುದ್ಧತೆ ಕಾವ್ಯ ಭಾವ ತೀವ್ರತೆ
ಕವನ ಸಂಕಲನದಲ್ಲಿ ಒಟ್ಟು 57 ಕವನಗಳು ಮತ್ತು ಒಂದು ಹನಿಗವನಗಳ ಗುಚ್ಛವನ್ನು ಸಮರ್ಪಿಸಿದ್ದಾರೆ .ಬಹುಷ್ಯ ಅವರು ತಮ್ಮ ಕಾಲೇಜು ಜೀವನದಿಂದಲೂ ಬರೆದ ವಿವಿಧ ವಿಷಯಗಳ ಮೇಲೆ ಆಗಾಗ ಬರೆದು ದಾಖಲಿಸಿದ ಕವನಗಳು ಓದುಗರನ್ನು ಮನಸೂರೆಗೊಳಿಸುತ್ತವೆ .
ಕವನಗಳಲ್ಲಿ ಸ್ನೇಹ ಪ್ರೀತಿ ಪ್ರೇಮ ಅಂತರಂಗದ ಅರಿವು ವರ್ತಮಾನ ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಬರೆದಿದ್ದಾರೆ.ಅವರ ಅಂತರ್ಮುಖಿ ಭಾವಗಳು ಹೆಪ್ಪುಗಟ್ಟಿ ಅಲ್ಲಲ್ಲಿ ಗಟ್ಟಿಯಾಗಿ ಅಭಿವ್ಯಕ್ತಗೊಂಡಿವೆ. ಕವಿಯ ಒಂದು ವಿಶೇಷವೆಂದರೆ ಕವನಗಳಲ್ಲಿ ಭಾವವು ಆವಿಯಾಗಿ ಮೇಲೆ ಮೋಡವಾಗಿ ಮಳೆಯಾಗಿ ಕರಗಿ ಹೋಗುವ ಸನ್ನಿವೇಶ ಮೇಲಿಂದ ಮೇಲೆ ಪ್ರಯೋಗಿಸಿದ್ದಾರೆ ಉತ್ತಮ ಪ್ರತಿಮೆ ಪ್ರಮೆಗಳ ಲೆಕ್ಕಾಚಾರದಲ್ಲಿ ನಿಸ್ಸಿಮರದ ಅವರ ಕವನಗಳು ಮಳೆಗಾಲದಲ್ಲಿ ಮಂಡಕ್ಕಿ ಜೊತೆ ಮಿರ್ಚಿ ಭಜಿ ತಿನ್ನುವ ಭಾಸವಾಗುತ್ತದೆ.ನವಿರಾದ ಹಾಸ್ಯ ಮೃದು ವಿಡಂಭನೆ ಗಟ್ಟಿಯಲ್ಲದಿದ್ದರೂ ಮೆಲ್ಲನೆಯ ಪ್ರತಿಭಟನೆ ಎಲ್ಲದ್ದಕ್ಕೂ ಹೆಚ್ಚಿಗೆ ಮನುಷ್ಯ ಸಂಬಂಧಗಳ ಬಗ್ಗೆ ಸೂಕ್ಷ್ಮವಾಗಿ ನವಿರಾಗಿ ಹೇಳಿರುವರು. ಸ್ನೇಹ ಪ್ರೀತಿ ಮಾಣ್ಸುಹ್ಯ ಸಂಬಂಧಗಳಲ್ಲಿ ಬರುವ ರೂಪಕ ಅತ್ಯಂತ ಮನೋಜ್ಞ ಮತ್ತು ಮನುಷ್ಯನ ಅನುಭವಕ್ಕೆ ಒಯ್ಯುತ್ತವೆ.
1 ) ಗೋಡೆಗಳು -ಜಾತಿ ಮತ ಭೇದ ಸಮಾಜದಲ್ಲಿನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಬೆಂದು ಬರೆದ ಆತಂಕದ ಕವನವಿದಾಗಿದೆ.
2 ) ಅನಿವಾರ್ಯತೆ -ಸುಂದರ ಅಸಹಾಯಕತೆ ವ್ಯಕ್ತಗೊಂಡ ಕವನ
3 ) ಆತಂಕತೆ -ಉತ್ತಮ ಕವನ
4 ) ಸಾರ್ಥಕತೆ -ಭಾವ ಸಮ್ಮಿಲನಗೊಂಡ ನವಿರಾದ ಕವನ
5 ) ಭಾರತಿ-ಕವನಗಳಲ್ಲಿ ಹೊಸ ಪ್ರಯೋಗ ಮಡಿದ ಕವಿಯಿತ್ರಿ ಜಾಣ್ಮೆ ಮೆಚ್ಚುವಂತದ್ದು .ತಾಯಿ ಭಾರತಿ ಮತ್ತೆ ವಿಧವೆ ಮಕ್ಕಳನ್ನು ಕಟ್ಟಿಕೊಂಡು ಅಕ್ಕಪಕ್ಕದ ವೈರಿಗಳ ಜೊತೆಗೆ ಸೆಣೆಸಾಡುವ ನೋವು ಸುಂದರ
6 ) ಭ್ರಮ ನಿರಸನ -ವಾಸ್ತವಿಕತೆಯ ಅನಾವರಣ
7 )ಅಂತಃಶಕ್ತಿ- ಮನುಷ್ಯನ ಮನೋಧರ್ಮಕ್ಕೆ ಒರೆಗಲ್ಲಿಗೆ ಹಚ್ಚುವ ಆತ್ಮ ಸ್ಥೈರ್ಯ ತುಂಬುವ ಕವನ ಇದಾಗಿದೆ .
8 ) ಏನು ಬರೆಯಲಿ ಇನಿಯ -ಸುಂದರ ರೊಮ್ಯಾಂಟಿಸಂ ಕವನ ಕೊನೆಯ ಸಾಲುಗಳು ಆಕರ್ಷಿತವಾಗಿವೆ .
9 ) ಏನೆಂದು ಕರೆಯಲಿ – ಅಹಿಲ್ಯೆ ಮತ್ತು ರಾಮನ ಪ್ರತಿಮೆಗಳನ್ನು ಅತ್ಯಂತ ವಿಭಿನ್ನವಾಗಿ ಮತ್ತು ಗಟ್ಟಿಯಾಗಿ ಬಳಸುವಲ್ಲಿ ಯಶವ ಕಂಡಿರುವ ಕವನ
10) ಕಳೆದುದು – ಗಳಸಿದ್ದನ್ನು ಅಲೆಯುತ್ತ ಕಳೆದುಕೊಂಡ ಅಸ್ತಿತ್ವದ ಹುಡುಕಾಟ
ಕೆಟ್ಟವಳು -ಪುರಾಣಿಕ ಪ್ರತಿಮೆಗಳ ಜೊತೆಗೆ ವಾಸ್ತವಿಕ ಜಗತ್ತಿನಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯದ ಸುಂದರ ಅಭಿವ್ಯಕ್ತಿ ಕವನ
11 ) ಶಾಲೆ -ಒಂದು ಕುರಿ ದೊಡ್ಡಿಯ ವ್ಯಂಗ್ಯ ಕವನ
12 ) ತಾಯ್ತನ -ಸದ್ದಿಲ್ಲದೇ ಮೊದಲ ತುಂಬಿದ ಜೀವ -ಉತ್ಕೃಷ್ಟ ಅನುಭವದ ವಾಚ್ಯಗೊಂಡ ಕವನ
13 ) ದೃಷ್ಟಿ ದೋಷ ಮತ್ತು ಮಸೂರ – ಜೀವನದ ಅಂಕು ಡೊಂಕುಗಳನ್ನು ತಿದ್ದಲು ಬೇಕಾದ ಬಗೆ ಬಗೆಯ ಮಸೂರಗಳ ಬಳಕೆಗೆ ಆರ್ತನಾದಗೊಳಿಸುವ ಶಬ್ದಗಳ ಹೇರಿಕೆ ಜಾಸ್ತಿಯಾಗಿ ವಾಚ್ಯಗೊಂಡ ಕವನ
14 ) ಇನಿಯ -ಹೃದಯದಲ್ಲಿ ಉಕ್ಕಿದ ಸುಂದರ ಭಾವಗಳ ತದೇಕ ಚಿತ್ರಿಸಿದ ಮುಕ್ತ ಕವನ
15 ) ದುರಂತ- ಮೊಗ್ಗು ಅರಳಿ ಹೂವಾಗಿ ಎದೆ ಎತ್ತರಕ್ಕೆ ಬೆಳೆದು ನಿಂತ ಬಗೆಯನ್ನು ಹದವಾಗಿ ನಿರೂಪಿಸಲು ಯತ್ನಿಸಿದ ಕವನ
16 ) ಅಭಾಸ – ಭಾವನೆಗಳನ್ನು ಹೇಳಲು ಹೊರಟ ಒಂದು ಸರಳ ಬಹುಷ್ಯ ಇಂತಹ ಕವನವು ಕವಿಯ ಕಾವ್ಯ ರಚನೆಯ ಆರಂಭವೆಂದು ಹೇಳ ಬಹುದು. ಅಂತರ ಮುಖದ ಸೂಕ್ಷ ಪರಿಚಯ ಮತ್ತು ಅಭಾಸಗಳನ್ನು ಮನದಲ್ಲಿಯೇ ನುಂಗಿದ ಅಭಿವ್ಯಕ್ತಿ.
17 ) ಅವಕಾಶಗಳು – ಅಪ್ರತಿಮ ಕವನ ಎಂದೆನ್ನಬಹುದು ಮೆಲ್ಲನೆ ಕೆನ್ನೆ ಸವರಿ ಮುತ್ತಿಡುವ ನಲ್ಲನಂತೆ ಸುಂದರ ಪದ ಪ್ರಯೋಗ ಮತ್ತು ನಿರೂಪಣೆ
18 ) ಇನಿಯನ ಬರವು-ಸೂಕ್ಷ್ಮವಾದ ಬಯಕೆಯ ನಿರೀಕ್ಷೆ ಕೊನೆಯ ಎರಡು ಸಾಲಿನಲ್ಲಿವಿರಹದ ಸೂಚನೆ ಕವನಕ್ಕೆ ಮೆರಗು ನೀಡುತ್ತದೆ
19 ) ರೈತನ ಗೋಳು-ರೈತಾಪಿ ವರ್ಗದ ಭಾವನೆ ಗೋಳನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ .
20 ) ಶ್ರಾವಣ – ಬೇಂದ್ರೆಯವರ ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆ ಎನ್ನುವ ದಾಟಿಯಲ್ಲಿ ರಚಿತಗೊಂಡ ಆರಂಭದ ಕವನವೆನಿಸುವ ಶ್ರಾವಣ ಚಿತ್ರಣ ಸುಂದರವಾಗಿ ಬಂದಿದೆ .
21 ) ನಿಶ್ಚಲ ಮನ – ನಿರಾಳತೆ ನಿಶ್ಚಲತೆ ಕವಿಯ ಉದ್ದೇಶ ಕೊನೆಯ ನಾಲ್ಕು ಸಾಲುಗಳಲ್ಲಿ ಚೆನ್ನಾಗಿ ಮೂಡಿ ಬಂದಿದೆ.
22 ) ಪರಿಕಲ್ಪನೆ -ಅತ್ಯಂತ ವಿನುಆತನ ಶೈಲಿಯ ವ್ಯಾಖ್ಯಾನ -ಎಲ್ಲ ವಯೋಮಾನದವರ ಅಭಿಪ್ರಾಯಗಳ ಕ್ರೋಢೀಕರಣ .
23 ) ವಿಚಾರ ಶಕ್ತಿ-ಅತ್ಯಂತ ಸುಂದರ ಕವನ ಃeಚಿuಣiಜಿuಟ ಪ್ರಶ್ನೆಗಳ ಸುರಿ ಮಳೆ ಸುರಿಸಿ ನಿನ್ನ ಹುಬ್ಬೇರಿಸುವ ಈ ಮಿದುಳನ್ನು ಎಲ್ಲಿ ಇತ್ತು ಬರಲಿ ತುಂಬಾ ಸುಂದರ ಕಾವ್ಯ ಪ್ರಯೋಗ
24 ) ಅಸ್ತಿತ್ವ – ಮನುಷ್ಯ ತನ್ನ ಅಸ್ತಿತ್ವಕ್ಕಾಗಿ ದೊಡ್ಡ ದೊಡ್ಡ ವ್ಯಕ್ತಿಗಳ ಹೋಲಿಕೆ ಮಾಡದೇ ತನ್ನ ಸ್ಮಿತೆಯ ಸಂಭ್ರಮದ ಆಚರಣೆಗೆ ಕವಿಯಿತ್ರಿ ಕರೆ ಕೊಟ್ಟಿರುವುದು ಸುಂದರ .
25 ) ಕಲ್ಲಾದರೇನು -ತುಂಬಾ ವಾಚ್ಯಗೊಂಡ ಸಾಧಾರಣ ಕವನ ಆದರೆ ಮನವು ಜಡವಲ್ಲ ಎಂಬ ಸ್ಪಷ್ಟ ನಿಲುವು ತಾಳಿದೆ
26 ) ಭಯೋತ್ಪಾದನೆ – ಸರಳ ಮತ್ತು ಸಾಮಾಜಿಕ ಹಿಂಸೆಗಳ ಚಿತ್ರಣ
27 ) ಲೇಖನಿ-ಕವಿಯಿತ್ರಿಯ ಆರಂಭದ ಕಾವ್ಯ ಕೃಷಿ ಎಂದು ಹೇಳಬಹುದು
28) ಕವನ – ಕವನ ರಚನೆ ಆಹಾರದಂತೆ ಜೀರ್ಣವಾಗದ ಡೆಜಿಗೆ ಹೋಲಿಸಿ ಕವಿಯ ಕವನಗಳ ಪುನರ ವಿಮರ್ಶೆಯ ಸುಂದರ ಹೆಣೆಯುವಿಕೆ.
29 ) ನಾನು -ಆತ ಎರಚಿದ ಬಣ್ಣದಿಂದ ನನ್ನ ಬಣ್ಣ ಇಳಿದು ಹೋಗಲಿಲ್ಲ ಸುಂದರ ಆರಂಭ ಮತ್ತು ಅಂತ್ಯ ಕಾಣುವ ಕವನ
30 ) ಗೀಜಗನ ಗೂಡು-ಗಂಡು ಹೆಣ್ಣಿನ ಮನೋಧರ್ಮವನ್ನು ಸೊಗಸಾಗಿ ಚಿತ್ರಿಸಲಾಗಿದೆ.
31 ) ಬೋಧನೆ – ಮುಕ್ತ ಕಾವ್ಯದ ಕಾವ್ಯ ಲಹರಿ ಇಂದಿನ ಬೋಧನೆಯನ್ನು ಚಿತ್ರಿಸುವಲ್ಲಿ ಕವಿಯಿತ್ರಿ ಯಶವಾಗಿದ್ದರೆ .
32 ) ತೀರ್ಮಾನ – ಕವನ ತುಂಬಾ ಸರಳ ತುಂಬಾ ಗ್ರಾಂಥಿಕ ಮತ್ತು ವಾಚ್ಯವೆನಿಸಿದರು ಸಹಿತ ಉತ್ತಮ ಸಂದೇಶ ನೀಡುವ ಕವನ
33 ) ಕಾಲದ ನಡೆ – ಸೃಷ್ಟಿಯಲ್ಲಿನ ಕಾಲನಿಗೆ ಮೆಲ್ಲನೆ ನಡೆ ಕಲ್ಯಾಣ ಜೊತೆಗೆ ನಡೆಯಲಾಗದ ಮತ್ತು ಕಾಲದೊಂದಿಗೆ ತನ್ನನ್ನು ಕರೆದೊಯ್ಯುವ ಕೋರಿಕೆಯ ಕವನ
34 ) ಜೀವನ -ಉದರದ ಬೆಚ್ಚನೆಯ ಹೊದಿಕೆ ಸರಿಸಿ ಹೊರ ಬಂದಾಗ -ಉತ್ತಮ ಪ್ರತಿಮೆ ರೂಪಕ ಹೊಂದಿದ ಸುಂದರ ಕವನ
35 ) ಧರೆಯ ಮಳೆ- ಭಾವನೆಯು ಆವಿಯಾಗಿ ಮೋಡವಾಗಿ ಮಳೆಯಾಗಿ ಗಿಡ ಮರಗಳ ತೋಯಿಸುವ ಸುಂದರ ಬಣ್ಣನೆ ತುಂಬಾ ಚೆನ್ನಾಗಿ ಬಂದಿದೆ.
36 ) ಒಲವಿನ ಬಳ್ಳಿ-ಕಿತ್ತೆಸದ ಸಂಬಂಧಗಳ ಬಳ್ಳಿಯ ಹಿಡಿದು ಮತ್ತೆ ನೆಟ್ಟು ಸಂಭ್ರಮಿಸುವ ಬಯಕೆ ಕಾಣುತ್ತೇವೆ.
37 ) ನೀ ಮನೆಯಲ್ಲಿ ಇರ್ತೀಯ – ಅಸಹಾಯಕ ಮಾಧ್ಯಮ ಮಹಿಳೆಯರ ಕಥೆ ವ್ಯಥೆ ಬಿಂಬಿಸುವ ಕವನ -ಗಂಡ ಅತ್ತೆ ಮಕ್ಕಳು ಅವರಿಗೆ ಬೇಕಾಗುವ ಸರಕು ಸಾಗಾಣಿಕೆಯ ವಾಹನ ಈ ಮಹಿಳೆ ವಿಡಂಬನೆ ತಿಳಿ ಹಾಸ್ಯದೊಂದಿಗೆ ಹೆಣ್ಣಿನ ನೋವನ್ನು ವ್ಯಕ್ತಗೊಳಿಸುವ ಕವನ .
38 ) ಮೌನ ಮಾತನಾಡಿದಾಗ -ಮೌನ ಮುರಿದು ವಾಸ್ತವ ದರ್ಶನಗೊಳಿಸುವ ಆರಂಭದಲ್ಲಿ ಬರೆದಿರುವ ಕಾವ್ಯ ಪ್ರಯೋಗ .
39 ) ಅಳಲು-ಆದರ್ಶಗಳ ಕಾವಿನಲ್ಲಿ ಆವಿಯಾಗುವ ಉತ್ತಮ ರೂಪಕ ಆವಿಯಾಗುವ ಪ್ರತಿಮೆ ಹಲವಾರು ಬಂದಿದ್ದರು ಅವುಗಳ ಹಿಂದಿನ ಕ್ರಿಯೆ ಬೇರೆ ಎನಿಸುತ್ತವೆ.
40 ) ವರ್ತಮಾನ -ಹೊಸ ಭರವಸೆಯ ಕವನ ವರ್ತಮಾನದ ಬಗ್ಗೆ ಪ್ರಶ್ನಿಸುವ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಉತ್ತಮ ಕವನ
41 ) ಅರ್ಥವಾಗಿಲ್ಲ-ಒಂದು ವಿಶೇಷವೆಂದರೆ ಕವಯಿತ್ರಿ ತನ್ನ ಕಾವ್ಯ ಪ್ರಯಾಯೋಗವನ್ನು ನಿರಂತರವಾಗಿ ಸೃಷ್ಟಿಯ ವಿಕಾಸದ ಜೊತೆ ಜೊತೆಗೆ ಗುರುತಿಸಿಕೊಳ್ಳುತ್ತಿರುವುದು
42 ) ಭಗ್ನ ಪ್ರೇಮಿ-ಭಗ್ನ ಪ್ರೇಮಿಯ ಚಿತ್ರಣ ಎಚ್ಚರಿಕೆ ಸಮಾಧಾನ ಸುನ್ದರ ನವಿರಾದ ಸಂವಾದದೊಂದಿಗೆ ನೋಡುತ್ತೇವೆ
43 ) ಮತ್ತೆ ಯಾವಾಗ ಭರ್ತಿ-ಜವಾರಿ ದೇಸಿ ಶೈಲಿಯ ಉತ್ತಮ ಕವನ
44 ) ವಧು ಬೇಕು- ಜಾನಪದ ಗತ್ತಿನ ಹಳೆಯ ತೆಲೆಮಾರಿನ ಆರಂಭದ ವಿಡಂನ ಟೀಕೆಯ ಕವನ
45 ) ಶಾಪಗ್ರಸ್ಥರು- ಪೌರಾಣಿಕ ಪ್ರತಿಮೆಯ ಜೊತೆಗೆ ವರ್ತಮಾನದ ಶೋಷಿತ ಸಮಾಜಕ್ಕೆ ಕರೆ ನೀಡುವ ಕವನ
46 ) ಆಸೆ – ಮನವು ದುಂಬಿಯಾಗುವ ಮತ್ತು ನದಿಯ ಇಕ್ಕೆಲದಲ್ಲಿ ನಲಿಯುವ ಆಸೆಯ ಜೊತೆಗೆ ಸಂಭ್ರಮಿಸುವ ಕವನ
47 ) ಕಾಲ ಚಕ್ರ-ತಾಯಿಯ ನೆನೆಯುವ ಸರಳ ಕವನ ಬಾಲ್ಯ ಚಕ್ರ ನೆನಪಿಸುವ ಕವನ
48 ) ನಾನು-ಮಹಿಳಾ ಪರ ಗಡಿಯೊಳಗೆ ಪ್ರಚಲಿತವಾದ ಮಾತನ್ನೇ ಕವನ ರೂಪದಲ್ಲಿ ಹಿಡಿಟ್ಟಿದ್ದಾರೆ ಕವಯಿತ್ರಿ.
49 ) ಏಕಾಂತತೆ -ಮನದ ಗೋರಿಗಳ ಅಗೆದೆಗೆದು ಭೂತಗಳ ಬಡಿದೆಬ್ಬಿಸುವ ಸುಂದರ ರೂಪಕ ಪ್ರಯೋಗವಾಗಿದೆ ಕವನದಲ್ಲಿ ನನಗೆ ಇಷ್ಟವಾದ ಕೆಲವು ಕವನಗಳಲ್ಲಿ ಇದು ಒಂದು
50 ) ಅರಿವು-ನಾನು ಬರೆದಿದ್ದು ನಾನೇ -ಅರಿಯಲಾಗದ ಭಾವ -ಸುನ್ದರ ಆತ್ಮಾವಲೋಕನ
51 ) ಕೆಟ್ಟವರು -ಅರ್ಥವಿಲ್ಲದ ಅಳತೆಮಾನಗಳಿದ್ದಲ್ಲಿ ಅರಳುವ ಒಂದು ವಾಚ್ಯ ಕವನ
52 ) ಕಾರಣ -ಹುಚ್ಚು ಪ್ರೀತಿಯ ಅಭಿವ್ಯಕ್ತಿಯ ವಿಭಿನ್ನ ಪ್ರಯೋಗ -ಪ್ರೀತಿಸಿದೆ ನಿನ್ನ ಬೆಚ್ಚನೆಯ ಎದೆಯ ಮೇಲೆ ಮುಖವಿಟ್ಟು ಅಳುವುದಕ್ಕೆ ಇಂತಹ ಭಾವುಕ ಸಾಲುಗಳು
53 ) ವಾಸ್ತವ -ಜಡಗಟ್ಟಿದ ಬದುಕಿನಲ್ಲಿ ವಾಸ್ತವದ ಅರಿವು ಮೂಡಿಸುವ ಸುಂದರ ನಿರೂಪಣೆ
54 ) ನನ್ನ ಈ ಕವನ-ಭಾವನೆಗಳ ರಭಸದಲ್ಲಿ ಹರಿಯುವ ಪ್ರವಾಹದಲ್ಲಿ ತುಂಡು ಕಟ್ಟಿಗೆಯ ಆಶ್ರಯಕ್ಕೆ ನಿಲುಕುವ ಒಂದು ಅಭಿವ್ಯಕ್ತಿ-ಇಲ್ಲಿ ಕವಿ ಅಗಾದವಾದ ಅನುಭವ ಹೊಂದಿದವರು ಮಹಾಪ್ರವಾಹದ ರಭಸಕ್ಕೆ ಕೊಚ್ಚಿ ಹೋಗದೆ ತುಂಡು ಕಟ್ಟಿಗೆಯಲ್ಲಿ ತೇಲಿ ಬರೆಯುವ ಕವನ
ಕವನದ ಶೀರ್ಷಿಕೆಗೆ ಸಮರ್ಪಕವಾದ ಆಯ್ಕೆ .
55 ) ನೆನಪು -ನೆನಪಿಯೆಂಬ ನೆಪದಲ್ಲಿ ಬುದ್ಧಿಜೀವಿಗಳ ಮಧ್ಯ ನಟಿಸುವ ಭಾವನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ . ನನಗೆ ಅತೀವ ಸಂತಸ ಕೊಟ್ಟ ಕವನ
56 ) ದುಗುಡ -ವಿಗ್ರಹವೆಂದು ದೇವರ ಕದ್ದ ಹೃದಯವೆಂದು ಆತ್ಮವ ಕದ್ದೊಯ್ದ ಗೆಳೆಯನ ನೆನಪು
57 ) ಹನಿಗವನಗಳು– ಕವನ ಸಂಕಲನಕ್ಕೆ ಮೆರಗು ಕೊಡುವ .ಮನೆಗೆ ಭದ್ರ ಬುನಾದಿ ಹಾಕುವಾಗ ಬಳಸುವ ಚಿಪ್ಪು ಕಲ್ಲಿನಂತೆ ಮೊನಚಾಗಿ ಭಾವ ತೀವ್ರತೆ ಕಾಣುವ ಸುಂದರ ಮುತ್ತುಗಳು .ಅದರಲ್ಲಿ -ಆಕೆಗೆ ಯಾವತ್ತೂ ಬೀಳುವ ಹೆದರಿಕೆ ಇರಲಿಲ್ಲ ಏಕೆಂದರೆ ಎದ್ದು ಓದಲು ಕಾಲು ಇರಲಿಲ್ಲ. ಒಮ್ಮೆ ಹೃದಯ ಕಲುಕಿ ಒಂದು ಕ್ಷಣ ಮೂಕನನ್ನಾಗಿ ಮಾಡಿತು .
ಒಟ್ಟಾರೆ ಹಲವು ಧ್ವನಿಗಳ ಹತ್ತು ಮುಖಗಳ ಸುಂದರ ಅಭಿವ್ಯಕ್ತಿ ಅಂತರಂಗದ ಅಲೆಯಲ್ಲಿ ಕಾಣುತ್ತೇವೆ .ಒಂದಂತೂ ನಿಜ ಕವನಗಳು ನಿಜಕ್ಕೂ ಓದಿಸಿಕೊಂಡು ಹೋಗುತ್ತವೆ. ಇನ್ನಷ್ಟು ಪ್ರಯತ್ನ ಪಟ್ಟರೆ ಭಾವ ಭಾಷೆ ಪದ ಜೋಡಣೆ ರೂಪಕ ಪ್ರತಿಮೆಗಳನ್ನು ಸಮರ್ಪಕವಾಗಿ ಬಳಸಿದ್ದೆ ಆದರೆ .ಪ್ರೊ ರಾಜನಂದಾ ಘಾರ್ಗಿ ಒಬ್ಬ ನಾಡಿನ ಉತ್ತಮ ಕವಯಿತ್ರಿ ಆಗಬಲ್ಲರು. ಅಂತಹ ಎಲ್ಲ ಲಕ್ಷಣಗಳು ಪ್ರಥಮ ಸಂಕಲನದಲ್ಲಿಯೇ ಮೂಡಿ ಬಂದಿವೆ .ಪ್ರಥಮ ಟೆಸ್ಟ್ ನಲ್ಲಿ ಸೆಂಚುರಿ ಹೊಡೆದ ಕವಯಿತ್ರಿ.ಅವರು ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕವನ ಸಂಕಲನ ತರಲಿ ಎಂದು ಹಾರೈಸುವೆ.
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ