ಅಪ್ಪ

ಅಪ್ಪ

ಅಪಾರವಾದ ಸದ್ಗುಣಗಳಾಗರ
ಅಪ್ಪನೆಂಬ ವಿಶಾಲ ಸಾಗರ//ಪ//

ಅಂದದ ಬದುಕಿಗೆ ಜೀವವಾದೆ
ಬೆಂದು ಬೆಂದು ಎಲ್ಲರ ಬಾಳಾದೆ/
ಕುಂದದೆ ಕನಲದೆ ಮುಂದಾದೆ
ಕಂದರ ಬಾಳಿಗೆ ಭವಿಷ್ಯವಾದೆ||1||

ಕರುಳ ಕುಡಿಯ ಬೆಳೆಸಲೆಂದು
ಸುಖವ ತೊರೆದೆ ಗಳಿಸಲೆಂದು|
ಕಿರು ಬೆರಳ ನೀಡಿ ಕರದಿ
ನಡೆಯ ಗಲಿಸಿದೆ ಬದುಕಲೆಂದು||2|

ನಿನ್ನ ಹಸಿವ ಮರೆಮಾಚಿ
ಹೊಟ್ಟೆ ತುಂಬಿಸಿದೆ ಮನೆಯವರ|
ಹಲವು ರಾತ್ರಿ ಕಂಡು,
ಸುಖ ನಿದ್ರೆಯಾದೆ ಎಲ್ಲರ||3||

ಮಕ್ಕಳ ಇಚ್ಛೆಯದಾಸೆಯನು
ಪೂರೈಸಿದೆ ಕೊರತೆ ಎನ್ನದೆ|
ಅವರ ಅಜ್ಞಾನದ ನುಡಿಗೆ
ಬೇಸರಿಸದೆ ಮೌನದುತ್ತರವಾದೆ||4||


~ಡಾ.ಚೆನ್ನಮಲ್ಲಸ್ವಾಮೀಜಿ,ಕನಕಗಿರಿ.

Don`t copy text!