ಯೋಗಿ ವೇಮನ
ರಾಜಮನೆತನದಲ್ಲಿ ಜನಿಸಿ ವೇಶ್ಯೆಯ ಬಂಧನಕ್ಕೆ ಸಿಲುಕಿ ಭೋಗಾಸಕ್ತನಾಗಿದ್ದ ವೇಮನ ಕನ್ನಡದ ಸರ್ವಜ್ಞನ ಹೋಲಿಕೆಗೆ ಸಮನಾಗಿದ್ದು,ತಮಿಳಿನ ತಿರುವಳ್ಳುವರ್ ಜ್ಞಾನದ ಜೊತೆ ಹೋಲಿಸಿಕೊಂಡಿರುವ ಮಹಾನ್ ಜ್ಞಾನಿ.
ಅತ್ತಿಗೆ ಮಲ್ಲಮ್ಮ ತಾಯಿಯ ಮೂಗಿನ ವಜ್ರದ ಮೂಗುತಿಯನ್ನು ತಂದುಕೊಡಲು ವೇಮನನನ್ನು ಸೂಳೆ ಕೇಳಿದಾಗ ತಾಯಿಯನ್ನು ಮಗ ಕೇಳುವ ಹಾಗೆ ತನ್ನ ಅತ್ತಿಗೆಯನ್ನು ಕೇಳಿ ಮೂಗುತಿಯನ್ನು ಪಡೆದು ವೇಮನ ಹಿಂದಿರುಗುವಾಗ ಮಲ್ಲಮ್ಮ ಒಂದು ಷರತ್ತು ವಿಧಿಸುತ್ತಾ, ಈ ಮೂಗುತಿಯನ್ನು ನಿನ್ನ ಸೂಳೆ ವಿವಸ್ತ್ರಳಾಗಿ ಹಿಂದಕ್ಕೆ ಬಾಗಿ ಇದನ್ನು ಪಡೆಯಬೇಕು ಎಂದಳು.
ಅದರಂತೆ ಬಹಳ ಆತುರವಾಗಿ ಸೂಳೆಯ ಮನೆಗೆ ಬಂದ ವೇಮನ ಮಲ್ಲಮ್ಮ ಅತ್ತಿಗೆ ವಿಧಿಸಿದ ಷರತ್ತಿನಂತೆ ಮೂಗುತಿ ತೆಗೆದುಕೊಳ್ಳಲು ತಿಳಿಸಿದ,ಆಕೆ ವಿವಸ್ತ್ರಳಾಗಿ ಅದನ್ನು ಪಡೆಯುವಾಗಿ ಅವಳ ನಗ್ನ ಶರೀರ ನೋಡಿದ ವೇಮನರಿಗೆ ಅಸಹ್ಯವಾಗಿ ಜೀವನ ಜಿಗುಪ್ಸೆಯಾಗಿ ಓಡೋಡಿ ಮಲ್ಲಮ್ಮಳ ಸನಿಹಕ್ಕೆ ಬಂದು ಪಶ್ಚಾತಾಪ ವ್ಯಕ್ತಪಡಿಸಿ ರಾಜಮನೆತನದಲ್ಲಿ ಅಕ್ಕಸಾಲಿಗ ವಿಭಾಗದ ಕಾರ್ಯದ ಉಸ್ತುವಾರಿ ವಿಭಾಗದ ಜವಾಬ್ದಾರಿ ನೋಡಿಕೊಂಡು ಕಾರ್ಯಮಗ್ನನಾಗಿ ವೇಶ್ಯಾಸಂಗ ತೊರೆದನು.
ಹೀಗಿರುವಾಗ ಬಹಳ ವರುಷಗಳ ಕಾಲ ವಿಶ್ವಕರ್ಮನೋರ್ವ ಅರಮನೆಯಲ್ಲಿ ಬಂಗಾರದ ಕೆಲಸ ಮಾಡುವ ಅನನ್ಯ ಭಾವದ ವ್ಯಕ್ತಿಯ ಬಗ್ಗೆ ತಿಳಿಯುವ ಕುತೂಹಲ ಉಂಟಾಗಿ ಸಾಯಂಕಾಲ ಆತನ ಹಿಂದೆ ಅವನಿಗೆ ತಿಳಿಯದ ಹಾಗೆ ಹೋದನು,ಅವನು ಒಂದು ಗುಹೆಯಲ್ಲಿ ಸಾಗಿ ವಯೋವೃದ್ಧರೊಬ್ಬರ ಸೇವೆಯನ್ನು ಬಹಳ ದಿನಗಳಿಂದ ಭಕ್ತಿಯಿಂದಲೂ ಮಾಡುವ ಬಗ್ಗೆ ತಿಳಿಯಿತು.ಕೊನೆಯಲ್ಲಿ ಅಕ್ಕಸಾಲಿಗನು ಹಿಂದಿರುಗುವಾಗ ನಾಳೆ ನಾನು ಶಿವೈಕ್ಯನಾಗಲಿದ್ದು ನೀನು ಬಂದು ನಿನ್ನ ಸೇವೆಯ ಫಲಕ್ಕೆ ನನ್ನ ತಪದ ಜ್ಞಾನ ಧಾರೆ ಮಾಡುತ್ತೇನೆ ಮರೆಯದೇ ಬಾ ಎಂದು ಯೋಗಿ ಹೇಳುವುದನ್ನು ವೇಮನ ಕೇಳಿಸಿಕೊಳ್ಳುತ್ತಾನೆ,ಪುನಃ ಅವರು ತಮ್ಮ ಪಾಡಿಗೆ ಹಿಂದಿರುಗುತ್ತಾರೆ.
ಮರುದಿನ ಅಕ್ಕಸಾಲಿಗ ರಾಜರ ಅರಮನೆಯಲ್ಲಿ ಕೆಲಸದಲ್ಲಿ ಮಗ್ನನಾಗಿ ಶಿವಯೋಗಿ ಹೇಳಿದ ಸಮಯಕ್ಕೆ ಗವಿಯ ಕಡೆಗೆ ಹೋಗಲು ಮರೆತುಬಿಡುತ್ತಾನೆ,ಆದರೆ ಆಧ್ಯಾತ್ಮದ ಸೆಳೆತಕ್ಕೆ ಸಿಕ್ಕಿದ್ದ ವೇಮನ ಗವಿಯ ಕಡೆಗೆ ತೆರಳಿ ಯೋಗಿಯನ್ನು ಕಾಣುತ್ತಾನೆ ಯೋಗಿ ಶಿವಧ್ಯಾನದಲ್ಲಿದ್ದಾಗ ತನ್ನ ಶಿಷ್ಯನ ಆಗಮನವಾಯಿತೆಂದು ತಿಳಿದು ಜ್ಞಾನ ಧಾರೆ ಮಾಡಿ ಬಿಡುತ್ತಾರೆ.ಅಲ್ಲಿಂದ ಅರಮನೆಗೆ ತೆರಳದೇ ವಿರಾಗಿಯಾಗಿ ವಿವಸ್ತ್ರನಾಗಿ ವೇಮನ ಜಗದ ಸತ್ಯವನ್ನೇ ತನ್ನ ನಾಲ್ಕು ಸಾಲಿನಪದ್ಯದಲ್ಲಿ ಕಟ್ಟಿಕೊಟ್ಟು ಅಪಾರ ಶಿಷ್ಯ ಬಳಗದ ಮೂಲಕ ಆಂಧ್ರಕವಿಪಿತಾಮಹ ಎಂಬ ಅಭಿಧಾಮವನ್ನು ಪಡೆದಿರುವನು ಕೊನೆಗೆ ಪಾಮೂರು ಎಂಬ ಗ್ರಾಮದ ದಟ್ಟಡವಿಯಲ್ಲಿ ಇದ್ದ ಗುಹೆಯೊಳಗೆ ಸಾಗಿ ಕಾಲವಾದನು.
ಮಹಾನ್ ಯೋಗಿ ವೇಮನರ ಜಯಂತಿ ನಿಮಿತ್ತ ಲೇಖನ.
–ಶಂಕರ್.ಜಿ.ಬೆಟಗೇರಿ.
ಉಪನ್ಯಾಸಕರು.
ಜಿ ಪಿ ಜಿ ಕಾಲೇಜ್ ಹೂವಿನಹಡಗಲಿ
ವಿಜಯನಗರ ಜಿಲ್ಲೆ.
೯೮೮೬೫೭೫೪೪೧.