ಕಸ್ತೂರಿ ಕನ್ನಡ
ನಮ್ಮ ಭಾಷೆ ಕನ್ನಡ
ನಮ್ಮ ನಾಡು ಕನ್ನಡ
ನಮ್ಮನಡೆ ನುಡಿ ಕನ್ನಡ
ನಮ್ಮ ಉಸಿರು ಕನ್ನಡ
ನಮ್ಮಜೀವ ಕನ್ನಡ. ||
ಪಂಪ ರನ್ನ ಕುಮಾರ ವ್ಯಾಸರು
ಕಾವ್ಯಗಳ ರಚಿಸಿದ ಭಾಷೆ ಕನ್ನಡ
ಕುವೆಂಪು ಬೇಂದ್ರೆ ಪುತಿನ ಮೊದಲಾದ
ಕವಿ ಪುಂಗವರು ಬರೆದ ಭಾಷೆ ಕನ್ನಡ
ಕನ್ನಡ ಮಾತೆಗೆ ಜ್ಞಾನ ಕಿರೀಟ ವ
ತೊಡಿಸಿದ ಭಾಷೆ ಕನ್ನಡ ||
ಬಸವಾದಿ ಶರಣರು ಸರ್ವಜ್ಞಕವಿ
ವಚನಗಳ ರಚಿಸಿದ ಭಾಷೆ ಗೌರವ
ಸಂತರು ದಾಸರು ಭಕ್ತಿ ಕೀರ್ತನೆಗಳ
ಹಾಡಿದ ಭಾಷೆ ಕನ್ನಡ. ||
ಜೇನಿನ ಮ ಧುರತೆಯ ಹಾಲಿನ ಸಿಹಿಯ
ಹೊಂದಿಹ ಭಾಷೆ ಕನ್ನಡ
ವಿಶ್ವ ಕ್ಕೆಲ್ಲ ವಿನೂತನ ವಾಗಿರುವ
ಭಾಷೆ ಕಸ್ತೂರಿ ಕನ್ನಡ. ||
ಏಳಿ ಎದ್ದೇಳಿ ಎಚ್ಚರಗೊಳ್ಳಿ ಕನ್ನಡಮ್ಮನ ಮಕ್ಕಳೇ
ಕನ್ನಡವ ಕಲಿತು ಕಲಿಸು ವಂತವರಾಗಿ
ಅನ್ಯ ಭಾಷೆ ಗೆ ಗೌರವ ನೀಡುವಂತವರಾಗಿ
ಕನ್ನಡ ಭಾಷೆಗೆ ಹಿರಿಮೆಯ ಕೊಡುವಂತವರಾಗಿ |
ಕನ್ನಡಕ್ಕಾಗಿ ದುಡಿಯೋಣ
ಕನ್ನಡಕ್ಕಾಗಿ ಮಡಿಯೋಣ
ಕನ್ನಡವ ಉಳಿಸಿ ಬೆಳೆಸೋಣ
ಕನ್ನಡಮ್ಮನಿಗೆ ಭಕ್ತಿ ತಿಲಕವ ನಿಟ್ಟು
ಜ್ಞಾನದಾರತಿಯ ಬೆಳಗೋಣ
ಸಿರಿಗನ್ನಡಂ ಗೆಲ್ಗೆ ಎಂದು
ಜಯಘೋಷ ಮಾಡೋಣ. ||
-ಮೀನಾಕ್ಷಿ. ವಿ. ಥಳಂಗೆ, ಸೋಲಾಪುರ