ನಡುವಯಸ್ಸಿನ ತುಮುಲಗಳು

ನಡುವಯಸ್ಸಿನ ತುಮುಲಗಳು

ಮನುಷ್ಯನ ಬೆಳವಣಿಗೆ 4 ಹಂತಗಳಿರುತ್ತವೆ. ಬಾಲ್ಯ, ಯೌವನ, ನಡುವಯಸ್ಸು ಮತ್ತು ವೃದ್ಧಾಪ್ಯ. ಬಾಲ್ಯದಲ್ಲಿ ಆಟ ಪಾಠಗಳಲ್ಲಿ ಕಳೆಯುತ್ತೇವೆ. ಯೌವನದಲ್ಲಿ ಕೆಲಸ, ಪ್ರೀತಿ, ಮದುವೆ, ಸಂಸಾರ ಮಕ್ಕಳು ಎಂದೆಲ್ಲ ಮುಳುಗಿರುತ್ತೇವೆ.

ನಡುವಯಸ್ಸು ಒಂದು ರೀತಿ ತಳಮಳದ ಕಾಲಘಟ್ಟ. ಅರ್ಧ ಮನಸ್ಸು, ಅನುಮಾನದ ಸಮಯ, ಆತ್ಮ ವಿಶ್ವಾಸ ಕಡಿಮೆಯಾದ ಸಮಯವಾಗಿರುತ್ತದೆ. ಯಾರೂ ಜೊತೆಗಿಲ್ಲ, ನಮ್ಮನ್ನು ಗಮನಿಸೋಲ್ಲ, ನಮ್ಮ ಬಗ್ಗೆ ಗೌರವ ಇಲ್ಲ ಏನೋ ಇಂತಹ ತುಮುಲಗಳು ಹೆಚ್ಚು.

ಯೌವನದಲ್ಲಿ ನಾವು ಸಂಪೂರ್ಣ ಚಟುವಟಿಕೆಯ ಕೇಂದ್ರವಾಗಿರುತ್ತೇವೆ. ಆಗ ನಮ್ಮನ್ನು ಯಾರು ನೋಡಲಿ ಬಿಡಲಿ ಗಮನಿಸದಿದ್ದರೂ ಮಾತನಾಡಿಸದಿದ್ದರೂ ವ್ಯತ್ಯಾಸ ಬೀಳುವುಡುದಿಲ್ಲ. ಆದರೆ ನಡುವಯಸ್ಸು ಬರುತ್ತಾ ನಮ್ಮ ಚೈತನ್ಯ ಕುಗ್ಗುತ್ತ ಬರುತ್ತದೆ. ನಮ್ಮ ಜೊತೆಗೆ ಇರಬಯಸುತ್ತಿದ್ದವರು ಸ್ವಲ್ಪ ದೂರ ಸರಿದರೆ ಎಲ್ಲವೂ ಖಾಲಿ ಖಾಲಿ ಎಂಬ ಭಾವನೆ ಮನೆ ಮಾಡುತ್ತದೆ. ಗಂಡ /ಹೆಂಡತಿ, ಮನೆ, ಮಕ್ಕಳು ಎಲ್ಲರೂ ಅವರ ಪ್ರಪಂಚದಲ್ಲಿದ್ದಾರೇನೋ ಎಂಬ ಭಾವನೆ ಮೂಡುತ್ತದೆ. ಈ ರೀತಿಯ ಒಂಟಿತನ 40-55ರ ನಡು ವಯಸ್ಸಿನ ಸಮಯ ಮಾನಸಿಕ ಸಾಂಗತ್ಯದ ಅವಶ್ಯಕತೆ ಮತ್ತು ಬೌದ್ಧಿಕ ಸಾಂಗತ್ಯದ ಸಾಮೀಪ್ಯ ಬೇಕು ಎನಿಸುವ ಕಾಲವಾಗಿರುತ್ತದೆ. ಆದರೆ ಈ ವಯಸ್ಸಿನ ಪರಿಣಾಮವೋ, ಹಾರ್ಮೋನ್ ವ್ಯತ್ಯಾಸದ ಪರಿಣಾಮವೋ ಆತ್ಮ ವಿಶ್ವಾಸ ಕುಗ್ಗಿರುತ್ತದೆ.

ನಮ್ಮಲ್ಲಿ ಜೀವನ ಚೈತನ್ಯ ತುಂಬುವ ಒಂದು ಆತ್ಮೀಯ ವ್ಯಕ್ತಿ ಬೇಕೆನ್ನುವ ಭಾವನೆ ಬಂದಿರುತ್ತದೆ. ಒಬ್ಬ ಆತ್ಮೀಯ ವ್ಯಕ್ತಿಯ ಹುಡುಕಾಟ ನಡೆದಿರುತ್ತದೆ. ಈ ಆತ್ಮೀಯ ವ್ಯಕ್ತಿ ಮನೆ ಜನರು, ಸ್ನೇಹಿತರು, ಪರಿಚಿತರಾದರೆ ಒಳ್ಳೆಯದು ಎನಿಸುತ್ತದೆ.

ಈಗೀಗ ಅಂತರ್ಜಾಲದ ಫೇಸ್ಬುಕ್, ವಾಟ್ಸಪ್ಪ್, ಇನ್ಸ್ಟಾಗ್ರಾಮ್ ಹಾವಳಿಯಿಂದ ಗೊತ್ತಿದ್ದೋ ಗೊತ್ತಿಲ್ಲದೆಯೋ ಹೊಸ ಹೊಸ ಗೆಳೆತನ ಆರಂಭವಾಗುತ್ತಿದೆ. ಒಂದು ರೀತಿಯಲ್ಲಿ ಒಳ್ಳೆಯದು ಅದು ನಿಜವಾದ ಗೆಳೆತನವಿದ್ದರೆ ಒಳ್ಳೆಯದು. ಕೆಲವೊಮ್ಮೆ ತಪ್ಪು ವ್ಯಕ್ತಿಗಳನ್ನು ನಂಬಿ ಮೋಸ ಹೋಗಿರುವ ಉದಾಹರಣೆಗಳು ಇವೆ.

ಸ್ನೇಹ, ಪ್ರೀತಿ ಕಾಳಜಿ ಯಾವುದೇ ಕಾಲಕ್ಕೂ ಬೇಕೇ ಬೇಕು. ಆದರೆ ನಡುವಯಸ್ಸಿನ ತುಮುಲಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಎದುರಿಸಬೇಕು.

ನಡುವಯಸ್ಸಿನ ಸ್ನೇಹಿತರಲ್ಲಿ ವಿನಂತಿ ಪ್ರೀತಿ ಕಾಳಜಿ ತೋರುಸುವವರೆಲ್ಲ ನಮ್ಮವರಲ್ಲ. ಹಾಗೆಂದು ಎಲ್ಲರೂ ಕೆಟ್ಟವರಲ್ಲ. ಭಾವನೆಗಳಿಗೆ ಬೆಲೆ ಕೊಡುವವರೊಂದಿಗೆ ಸ್ಪಂದಿಸಿ ಪ್ರೀತಿ ವಿಶ್ವಾಸದೊಂದಿಗೆ ಜೀವನ ನಡೆಸಿ. ನಮ್ಮವರೊಂದಿಗೆ ಬಾಳೋಣ

ಶುಭ ದಿನ

ಮಾಧುರಿ ಬೆಂಗಳೂರು

Don`t copy text!