ಮನವೇ ಮಂತ್ರವಾದಾಗ

ಮನವೇ ಮಂತ್ರವಾದಾಗ

ವಚನಗಳು ನಮ್ಮ ಸಮಾಜದ ಒಡಲಿನಿಂದ ಹುಟ್ಟಿದ ಸೃಜಾತ್ಮಕಗೊಂಡ ಸಾಹಿತ್ಯ.ಹೀಗಾಗಿ ಶರಣ ಧರ್ಮದ ಭಕ್ತಿ ಶಕ್ತಿ ಗಳ ಸಾಮರಸ್ಯವೆ ಅಷ್ಟಾವರಣ ಗಳಾಗಿವೆ. ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ವಿಭೂತಿ ರುದ್ರಾಕ್ಷಿ ಮಂತ್ರ ..ಇವುಗಳು ಲಿಂಗಾಯತ ಧರ್ಮದ ಭಕ್ತಿಯ ವಿಕಾಸದ ಹಂತಗಳು.

ನಮಗೆ ಅನುಭಾವದ ಅನುಭೂತಿಯ ಜೊತೆಗೆ ಆಧ್ಯಾತ್ಮಿಕ ಶಕ್ತಿಯ ಪವಿತ್ರತೆಯನ್ನು ಸ್ಪಷ್ಟ ಪಡಿಸುತ್ತದೆ. ಸಾಧಕನ ದೈವಾನುಭಾವವೇ ದಿವ್ಯಾನುಭಾವಗಳು..ಭಕ್ತಿಯ ಆಂತರಿಕ ಮನಸ್ತಿತಿಯ ಸ್ಪಶ೯… ಅಷ್ಟಾವರಣದ ಸಿದ್ದಾಂತದ ಮೂಲಕ ಎಂಟು ವಿಧದ ಭಕ್ತಿಯನ್ನು ಇಲ್ಲಿ ಉಲ್ಲೇಖಿಸಲಾಗುತ್ತದೆ.

ಅಷ್ಟಾವರಣಗಳಲ್ಲಿ ಭಕ್ತಿಯ ಕೊನೆಯ ಮಾರ್ಗವೆಂದರೆ ಮಂತ್ರವಾಗಿದೆ. ಕೆಲ ಮುಖ್ಯ ವಚನಕಾರರ ವಚನಗಳನ್ನು ಇಟ್ಟುಕೊಂಡು ಮಂತ್ರದ ನಿವೇದನೆಯು ಭಕ್ತನಿಗೆ ಆಗುವ ದೈವಾನುಭೂತಿಯನ್ನು ಇಲ್ಲಿ ನಾನು ಚಚೆ೯ಗೆ ಎತ್ತಿ ಕೊಳ್ಳುತ್ತೇನೆ.

ಅಷ್ಟಾವರಣದಲ್ಲಿ ಮಂತ್ರವು ಶರಣ ಸಂಸ್ಕ್ರತಿಯ ಆತ್ಮೀಯತೆಯನ್ನು ಹೆಚ್ಚು ಮಾಡುತ್ತದೆ. ಈ ಮಾರ್ಗದಲ್ಲಿ ಮಂತ್ರಕ್ಕೆ ‌ಸಾಧಕ ಶರಣು ಹೋದರೂ ವಾಸ್ತವವಾಗಿ ಮೊದಲಿನಿಂದ ಕೊನೆಯವರೆಗೂ ಎಲ್ಲ ಹಂತದ ವ್ಯಾಪಕ ಶಕ್ತಿ ಎಂದರೆ ಮಂತ್ರ.ಲಿಂಗ ಲಭಿಸುವುದು ಗುರುವಿನ ಮೂಲಕವಾದರೂ ಉಪಾಸನಾ ಮಾರ್ಗದ ಅರಿವಿನ ಶಕ್ತಿ ಮಂತ್ರವಾಗಿದೆ. ಹೀಗಾಗಿ ವಿಭೂತಿ ರುದ್ರಾಕ್ಷಿ ಗಳ ಧಾರಣಿಯಲ್ಲಿ ಪಾದೊದಕ ಪ್ರಸಾದ ನಿರ್ವಹಣೆಯಲ್ಲಿ ಷಟ್ ಸ್ಥಲ ಸಾಧನೆಯ ದಶ೯ನದ ಮುನ್ನಡೆಯಲ್ಲಿ ಮಂತ್ರವೆ ತಾರಕ ಶಕ್ತಿಯಾಗಿ ಪರಿಣಮಿಸುತ್ತದೆ. ಶಿವನ ತೇಜಸ್ಸಿನ ಸಂಕೇತವಾದ ವಿಭೂತಿ ..ಶಿವನ ನೇತ್ರ ಸ್ವರೂಪವಾದ ರುದ್ರಾಕ್ಷಿಗಳನ್ನು ಧರಿಸಿದ ಸಾಧಕ ಮಂತ್ರದಿಂದ ಪೂರ್ಣ ನಾಗುತ್ತಾನೆ.

ಮಂ .ಎಂದರೆ ಮನನ “ತ್ರ.. ಎಂದರೆ ತ್ರಾಣ .ಎಂದರೆ ಬಿಡುಗಡೆ . ಮನನ ಮಾಡುವ ಸಾಧಕ ಭಕ್ತನನ್ನು ಮಂತ್ರವು ಅಷ್ಟಾವರಣದ ಮೂಲಕ ರಕ್ಷಣೆ ಮಾಡುತ್ತದೆ. ಸಾಧಕರು ಲೋಕ ಕಲ್ಯಾಣಕ್ಕಾಗಿ ಸಾಕ್ಷಾತ್ಕರಿಸಿ ಕೊಂಡ ಸಂಯೋಜಿತ ವಾದ ಅಕ್ಷರಗಳೇ ಮಂತ್ರಕವಚ ಗಳಾಗಿವೆ. ಇವುಗಳಲ್ಲಿ ಮುಖ್ಯ ಮಂತ್ರಗಳು ಮೂಲ ಮಂತ್ರಗಳು .ಬೀಜಾಕ್ಷರ ಗಳೆನ್ನುವ ಪಾರಮಾರ್ಥಿಕತೆಯ ಸೂಕ್ಷ್ಮಗಳನ್ನು ಆತ್ಮ ವ್ಯಾಖ್ಯೆಯ ಮೂಲಕ ಕಾಣಲಾಗುತ್ತದೆ.

ಅಷ್ಟಾವರಣದ ಸಿದ್ದಾಂತದಲ್ಲಿ ಗುರು ಜಂಗಮ ರೂಪಿಯಾಗಿ ದೀಕ್ಷೆ ಪಡೆದು ಕೊಳ್ಳುತ್ತಾನೆ. ಭಕ್ತನ ಮಾಂಸ ‌ಪಿಂಡವನ್ನು ಮಂತ್ರಪಿಂಡವನಾನ್ನಾಗಿಸುವ ಶಕ್ತಿ ದೀಕ್ಷಾ ಗುರಿವಿಗಿದೆ.

ಹೀಗಾಗಿ ಈ ಆಶಯ ನೆರವೇರ ಬೇಕಾದರೆ ದೀಕ್ಷಾ ಕಾಲದಲ್ಲಿ ದೈವಾನುಭಾವ ಮಂತ್ರ ಸಂಸ್ಕಾರಕ್ಕಿದೆ. ಶರಣರು ತಮ್ಮ ನಿತ್ಯ ಪೂಜೆಯಲ್ಲಿ ..ಆರಾಧನಾ ಮಂತ್ರಗಳನ್ನು ಅಳವಡಿಸಿ ಕೊಂಡದ್ದನು ಕಾಣುತ್ತೇವೆ.

ಬಸವಣ್ಣನ ಈ ವಚನ..

ಪಿಂಡವೆ ಆದಿಯಾಗಿll ಜ್ಞಾನವೆ ಶೂನ್ಯವಾಗಿ ll
ಆದಿ .ಅಂತ್ಯಗಳೆರಡೂll ಮದ್ಯದಲಿ ನಿಲ್ಲಲು llನೂರು ಒಂದರ ಮೇಲೆ ನಿಂದು llಒಂದೆ ನೂರಾಗಿ ನಿಂದ ಮೇಲೆ ನೂರೊಂದುll ಎಂಬುದು ಇಲ್ಲವಾಗಿll ಕೂಡಲ ಸಂಗಮ ದೇವ ಸೋಲುll

ಬಸವಣ್ಣನ ಈ ವಚನದ ಕೇಂದ್ರ ವೆಂದರೆ ಪಿಂಡಾಂಡ ದೇಹ ಮೀಮಾಂಸೆ ಯ ರೂಪಕಗಳ ಮೂಲಕ ಕೊಡುತ್ತಾನೆ .ಮಾಂಸ ಪಿಂಡವನ್ನು ಮಂತ್ರಪಿಂಡವನ್ನಾಗಿಸಿದ ಗುರು ಸಾಕ್ಷಾತ್ ಶಿವ ಎನ್ನುವ ಆರ್ಥತೆ . ಈ ಪಿಂಡಾಡದಲಿ ಙಂ ಕಾರವೆಂಬ ಜ್ಞಾನ ಸದಾ ನನ್ನನ್ನು ತತ್ವದ ಮೂಲಕ ಎಚ್ಚರಿಸುತ್ತದೆ. ಶಿವನನ್ನು ಆತ್ಮೀಯತೆಯ ಸಮರ್ಥನೆ ಮಾಡುತ್ತಾನೆ. ಎನ್ನ ಹೃದಯ ಕಮಲದಲ್ಲಿ ಶಿವಮಯವಾದ ಙಂ ಕಾರವೆಂಬ ನಾದವನ್ನು ಸುಜ್ಞಾನದ ಮೂಲಕ ಕಂಡ.

ಶರಣರು ಅಳವಡಿಸಿಕೊಂಡ ಮಂತ್ರ ಸಿದ್ದಾಂತ ‌ನಮ.:ಶಿವಾಯ ಎಂಬ ಪಂಚಾಕ್ಷರಿ ಮಂತ್ರವಾಗಿದೆ.

ಓಂ ಎನ್ನುವುದು ಒಂದು ಅಕ್ಷರವಲ್ಲ. ಅದು ಅ.ಉ.ಮ. ಎಂಬ ಮೂರು ಅಕ್ಷರಗಳ ಸಂಗಮ ಅ… ಎಂದರೆ ಸೃಷ್ಟಿ… ಉ…ಎಂದರೆ ವಿಕಸನ . ಮ. ಎಂದರೆ ಮೌನ…ಹೀಗಾಗಿ ಈ ಓಂ ಪದವು ಸೃಷ್ಟಿ ಯ ಆದಿ ಮತ್ತು ಅಂತ್ಯವನ್ನು ತಿಳಿಸುತ್ತದೆ. ವೈಜ್ಞಾನಿಕ ವಾಗಿ ಓಂ ಕಾರವನ್ನು ಪಠಿಸಿದರೆ ನಮ್ಮ ಎಲ್ಲಾ ಒತ್ತಡಗಳು ನಿವಾರಣೆಯಾಗಿ ಮನಸ್ದು ಆಹ್ಲಾದಕರ ವಾಗಿರುತ್ತದೆ ಎಂಬ ಹೇಳಿಕೆಯಿದೆ.

ನೂರು ಮಂತ್ರಗಳನ್ನು ಜಪಿಸುವುದಕ್ಕಿಂತ ಓಂ ಕಾರ ಮಂತ್ರ ಹೇಳಿದರೆ ಸಾಧಕನ ಭಕ್ತಿಗೆ.‌ ಪ್ರೌಢತ್ವ ಬರುತ್ತದೆ. ಆ ಶಕ್ತಿ ಈ ಮಂತ್ರಕ್ಕಿದೆ.

ಶರಣರು ಪಂಚಾಕ್ಷರಿ ಮಂತ್ರಕ್ಕಿಂತ ನಮಃ ಶಿವಾಯ ಎಂಬ ಮಂತ್ರಕ್ಕೆ ಮಹತ್ವ ಕೊಟ್ಟರು.. ಅದು ಓಂ ಕಾರ ಸಮನ್ವಿತವಾದಾಗ ಷಡಕ್ಷರ ಮಂತ್ರ ವಾಗುತ್ತದೆ. ದೇವ ನೊಬ್ಬ ಎಂಬಲ್ಲಿ ಶರಣರ ಏಕೈಕ ನಿಷ್ಠೆ ಮತ್ತು ಪ್ರಧಾನತೆ ಈ ಮಂತ್ರದಲ್ಲಿ ಕಾಣಲಾಗುತ್ತದೆ. ಇದನ್ನೇ ಮಂತ್ರದ ದೈವಾನುಭದ ಸೂಕ್ಷ್ಮ ಸ್ಥಿತಿ ಎನ್ನುವುದು.

ಶಿವನನ್ನು ಕಾಣುವ ಆತ್ಮಾನಂದದ ದಶ೯ನದ ತವಕ ಈ ಮಂತ್ರಕ್ಕಿದೆ. ಮಂತ್ರ ಮತ್ತು ಭಕ್ತಿಯ ತೀವ್ರತೆಯ ಮದ್ಯದಲ್ಲಿ ಮಾನಸಿಕವಾಗಿ ನಮ್ಮ ದೇಹದಲ್ಲಿ ಹಾರ್ಮೊನ್ ಗಳು ಸ್ರವಿಸಲು ಪ್ರಾರಂಬಿಸುತ್ತವೆ. ಮಂತ್ರದಿಂದ ಆವೃತವಾದ ಈ ಮನಸ್ಸು ಯಾವ ಮಟ್ಟಕ್ಕೆ ಒಯ್ಯುತ್ತದೆ ಎಂದರೆ ನಮ್ಮ ದೇಹದೊಳಗೆ ರಾಸಾಯನಿಕಗಳು ಏರು ಪೇರಾಗುವುದನ್ನು ಮಂತ್ರಗಳು ತಡೆಯುತ್ತವೆ. ಇದನ್ನು ನರವಿಜ್ಞಾನ ತಜ್ಞರು ಒಪ್ಪುತ್ತಾರೆ.

ಕೆಲ ಮಂತ್ರಗಳ ಪಠಣದಿಂದ ದೇಹದಲ್ಲಿ ಬೆಂಕಿ ಹಚ್ಚಿ ದ ಅನುಭವ ವಾಗುತ್ತದೆ. ಓಂ ಕಾರ ಮಂತ್ರವನ್ನೆ ಮಂತ್ರ ಎಂದು ಹೇಳುವಲ್ಲಿ

ಬಸವಣ್ಣನ ತೀವ್ರತೆ ಹೀಗಿದೆ.

ಪ್ರಣವ ಆರೂಡನು llಪ್ರಣವ ಪ್ರಕೃತಿllಓಂ ನು ಪ್ರಣವ ಸಂಗಮರಸ llನಮ್ಮ ಕೂಡಲ ಸಂಗಮ ದೇವll

ಆದ್ಯಾತ್ಮ ದಲ್ಲಿ ಆರೂಢನೆಂದರೆ ಅತೀಂದ್ರಿಯ ಸಂಗದಿಂದ ಮೇಲೇರಿದವನು. ಅಂದರೆ ಶಿವಯೋಗದಲ್ಲಿ‌ ಜೀವನ್ಮುಕ್ತನಾಗುವುದು. ಪ್ರಕೃತಿಯ ಬಂದನದಿಂದ ಬಿಡುಗಡೆ ಹೊಂದುವುದು. ಬಿಡುಗಡೆ ಬಯಸುವುದು. ಜ್ಞಾನವನ್ನು ಸಮರ್ಥ ವಾಗಿ ಯೋಗದ ಮೂಲಕ ದೇಹ ಮೀಮಾಂಸೆ ಯನ್ನು ಅರಿತವನು ಆರೂಢನು.. ಇಂದ್ರಿಯ ನಿಗ್ರಹ ವಶಪಡಿಸಿ ಕೊಂಡವನು.ಇದು ಬಸವಣ್ಣನ ಆರಾಧನಾ ಪ್ರಜ್ಞೆ ಯು ಹೌದು. …

ಸರ್ವವೂ ಸಂಗಮನಾಥ ತಾನಲ್ಲದೆ ಇನ್ನೊಂದು ಇಲ್ಲ. ಎನ್ನುವ ಭಕ್ತಿಯ ಹಂಬಲದಲ್ಲಿ ನಿರೂಪಕನಾಗಿ ಆರೂಢ ಸಂಗಮ ನಾಥನಜೊತೆಗೆ ಸಂವಾದ ಮಾಡುತ್ತಾನೆ.
ಮಂತ್ರದಲ್ಲಿ ಅಂತರ್ಗತವಾದ ಅಂಶಗಳು ಹೀಗಿವೆ. .

.೧ ಪರಾ

೨ ಕಾಮ್ಯ

೩ ಅಸ್ತ್ರ

ಎಂದು ೩ಭಾಗ ಮಾಡಬಹುದು. ಪರ ದೃಷ್ಟಿಯ ಮಂತ್ರಗಳು ಆದ್ಯಾತ್ಮಿಕ ಔನ್ನತ್ಯವನ್ನು ತಂದು ಕೊಡುತ್ತದೆ.ಇನ್ನು ಬಯಕೆಯನ್ನು ಹುದುಗಿಸಿ ಕೊಂಡು ಜಪಿಸಿದ ಮಂತ್ರಗಳು ಕಾಮ್ಯ ಮಂತ್ರಗಳೆನಿಸುತ್ತವೆ. ಹೆಸರೆ ಹೇಳವಂತೆ ಶಸ್ತ್ರ ಗಳ ಹಿಂದೆ ಮನ ಮಂತ್ರ ಶಕ್ತಿ ಇದ್ದರೆ ಅದು ಅಸ್ತ್ರ ವಾಗುತ್ತದೆ.

ಅಲ್ಲಮಪ್ರಭುವಿನ ಈ ವಚನ

ಆಡುವಾತ ಬಂದ ಕೋಡಗll ಜಪವ ಮಾಡುವ ತಪಸಿಯ ನುಂಗಿತ್ತಲ್ಲ llಬೇಡ ಬೇಡೆಂದಿತ್ತುllಮುಂದಣ ಕೇರಿಯ ಮೊಲನೊಂದುll ಮುಂದಣ ಮೊಲನ ಹಿಂದಣ ಕೋಡಗವ ll ಕಂಬಳಿ ನುಂಗಿತ್ತ ಗುಹೇಶ್ವರ.

ಅಲ್ಲಮ ಪ್ರಭು ಶರಣ ಪರಂಪರೆಯೊಂದಿಗೆ ತನಗಿರುವ ಸಂಬಂದವನ್ನು ಭಿನ್ನ ಆಯಾಮದಲ್ಲಿ ದ್ವನಿ ಎತ್ತುತ್ತಾನೆ.ಮಂತ್ರದ ಜೊತೆಗೆ ಅನುಸಂದಾನ ಸ್ಪಶ೯ದ ಅನುಭೂತಿ ಕೊಡುತ್ತಾನೆ.

ಕೋಡಗ ಎಂಬ ಮನಸ್ಸು ಜಪವ ಮಾಡುವ ಸಾಧಕನಿಗೆ ಚಂಚಲತೆಯ‌ನ್ನುಕೊಟ್ಟಿತ್ತು.ಈ ಶರೀರದ ಸಾಧನೆಗೆ ಜೀವಾತ್ಮ ವೆಂಬ ಮೊಲವು ಬೆನ್ನಟ್ಟಿತ್ತು. ಮಹಾಜ್ಞಾನ ವೆಂಬ ಜಪವು ಕೋಡಗ ವೆಂಬ ಮನಸ್ಸನ್ನು ಕಂಬಳಿ ಎಂಬ ಸುಜ್ಞಾನ ನುಂಗಿತ್ತು.

ಜಪ.. ಎಂಬ ಎರಡು ಅಕ್ಷರ ಗಳಲ್ಲಿ ಅರ್ಥ ಮತ್ತು ಶಕ್ತಿ ಅಡಗಿದೆ. ಸಂಸ್ಕೃತ ದಲ್ಲಿ ಜ..ಕಾರವು ಜನ್ಮ ವಿನಾಶಕವಾದದ್ದೆಂದು ಪ.. ಕಾರವು ಪಾಪಗಳನ್ನು ನಾಶ ಮಾಡುವುದೆಂದು ಮನುಷ್ಯ ಜನ್ಮ ಪವಿತ್ರ ವಾಗಬೇಕಾದರೆ ಜಪವು ಭಕ್ತರಿಗೆ ಅತ್ಯವಶ್ಯಕವಾಗಿ ಬೇಕಾಗುತ್ತದೆ. ಶಿವನನ್ನು ಮಂತ್ರ ರೂಪದಲ್ಲಾಗಲಿ ನಾಮ ರೂಪದಲ್ಲಾಗಲಿ ಮನಸ್ಸಿನಲ್ಲಿ ಧ್ಯಾನಿಸುವುದೆ ಜಪ.

ತಾರಕ ಮಂತ್ರವನ್ನಾಗಲಿ ಅಥಾವಾ ಇಷ್ಟ ದೇವತಾ ಮಂತ್ರವಾಗಲಿ ಗುರುಗಳಿಂದ ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡೆಯಬೇಕೆಂಬ ನಿಯಮವಿದೆ.

ಪ್ರಭುವಿನ ದೃಷ್ಟಿಯಲ್ಲಿ ಜಪ… ಮಂತ್ರಗಳು ಭಕ್ತನ ಅನುಭಾವವೆ ಆಗಿದೆ. ಭಕ್ತಿಯ ಸಿದ್ದಾಂತ ವಾಗಿದೆ.ಒಂದು ಕಡೆ ಪ್ರಭು ಹೇಳುತ್ತಾನೆ.”ಮನವೆ ಲಿಂಗವಾದ ಬಳಿಕ ನೆನೆವುದು ಇನ್ನಾರನ್ನ ಅಯ್ಯಾ. “

ಒಂ ಕಾರ ನಿಶ್ಕಲ ಶಿವನನ್ನು ಬೋದಿಸುತ್ತದೆ. ಪಂಚಾಕ್ಷರಿ ಮಂತ್ರ ಸಕಲ ಪಂಚ ಬ್ರಹ್ಮ ಸ್ವರೂಪ .ಶಿವನನ್ನು ಬೋಧಿಸುತ್ತದೆ. ನಿಷ್ಕಲ ಶಿವ ಸಿದ್ದಾಂತ.ಶುದ್ದ ಜ್ಞಾನ ಸ್ವರೂಪ ..ಸಕಲ ಶಿವ ಪ್ರಪಂಚ ಸ್ವರೂಪ ಉಭಯ ಸ್ವರೂಪ .ಹೀಗೆ ಉಭಯ ನಾದ .ಶಿವ.,ಓಂ ನಮಃ ಶಿವಾಯ ಎಂಬ ಷಡಕ್ಷರಿ ಮಂತ್ರದಲ್ಲಿ ಅಡಕವಾಗಿರುವನು.

ಚೆನ್ನಬಸವಣ್ಣನ ಈ ವಚನ

ಪರಬ್ರಹ್ಮ ಮಂತ್ರವೆ llಶಿವನ ದೇಹವೆಂದರಿಯುವದಯ್ಯ ll
ಶಿರವೆ ಈಶಾನ್ಯ llಮುಖವೆ ತತ್ಪುರುಷ llಹೃದಯವೆ ಅಘೋರ llಗುಹ್ಯವೆ ನಾಮದೇವll ಪಾದವೆ ಸದ್ಯೊಜಾತll ಮಂತ್ರವಯ್ಯ llಇಂತಿ ಪಂಚಮಂತ್ರ ತನು ರೂಪಾದll ಬಳಿಕ ನೀನೇ ಕೂಡಲ ಸಂಗಮ ದೇವಾll

ಪಂಚಾಕ್ಷರಿ ಮಂತ್ರವೆ ಶಿವದೇಹವಾಗಿದೆ. ಚೆನ್ನಬಸವಣ್ಣನಿಗೆ. ಹೀಗಾಗಿ ಶಿವನ ವಣ೯ನೆಯನ್ನು ಈಶಾನ್ಯ ತತ್ಪುರುಷ ವಾಮ ದೇವ ಅಘೋರಿ ಸದ್ಯೋಜಾತ ಎಂಬ ಶಿವನ ನಾಮವನ್ನು‌ ಭಕ್ತಿಯ ಮಾರ್ಗದ ಮೂಲಕ ವ್ಯಾಖ್ಯಾನಿಸುತ್ತಾ ಶಿವನೆ ಪಂಚಾಕ್ಷರಿ …ಆದ್ದರಿಂದ ಕವಿ ಸಂವೇದನೆಗೆ ಶಿವ ಸುಲಭವಾಗಿ ಒಲಿಯುತ್ತಾನೆ.ಪ್ರಣವ ಮಂತ್ರದ ಮೂಲಕ ಅಂತರಂಗದ ಅರಿವು ಬಹಿರಂಗದ ಮೂಲಕ ಮುಖಾಮುಖಿ ಯಾಗುತ್ತಾನೆ.

ಇನ್ನೊಂದು ನೆಲೆಯಲ್ಲಿ ಪಂಚಾಕ್ಷರವೆ ಪಂಚಮುಖವಾಗಿ ಪಂಚೆಂದ್ರಿಯಗಳಾಪು೯ದು ನೊಡಾ ಇದು ಕಾರಣ ಪರತತ್ವ ಜ್ಞಾನ ಮಾಯ ವಾಗಿ ಓಂ ನಮ:ಶಿವಾಯ ..ಎಂಬ ಶಿವ ಷಡಕ್ಷರಿ ಮಂತ್ರವೆ ಜಪಿಸಿ ಭವ ಸಾಗರವನ್ನೆ ದಾಟಿ ಮುಕ್ತರಾಗಿದ್ದರು.

ಸಿದ್ದರಾಮನು ….

ನಿನ್ನ ನೀತಿಳಿದು llನೋಡಿದರೆ ಶಿವಮಯಜಗತ್ತು llನ, ಕಾರವೆ ಪ್ರಣವವೆll ಪೃಥ್ವಿ ನಿಂದಿತ್ತು ಮ,ಕಾರವೆ ಪ್ರಣಮವೆ ll ಉದಕವಾಗಿ ನಿಂತಿತ್ತುllಶಿ,ಕಾರವೆ ಅಗ್ನಿಯಾಗಿ ನಿಂದಿತ್ತುll ವ, ಕಾರ ಪ್ರಣಮವೆll ವಾಯುವಾಗಿ ನಿಂದಿತ್ತುll ಯ,ಕಾರಪ್ರಣವವೆ ಪರ ವಸ್ತುllಆಚರಿಸುವುದಕ್ಕೆ ಆಕಾಶವಾಗಿ ನಿಂದಿತ್ತುll

ಪಂಚಭೂತಗಳಿಗೆ ಒಡೆಯನಾದ ಶಿವನು ಮನೊಮಯನು ಪಿಂಡಾಂಡದ ಜಗತ್ತಿಗೆ ಪ್ರಣವ ಸ್ವರೂಪಿ ಯಾದವನು .ತೋಂಟಸಿದ್ದಲಿಂಗರು ಹೀಗೆ ಹೇಳುವರು.. ಪೂರಕ ಕುಂಬಕವೆಲ್ಲವೂ ಶಿವಮಂತ್ರವಾಗಿ ಸಂಚರಿಸುತ್ತಿವೆ. ಎನ್ನ ಕರಸ್ತಲದ ಲಿಂಗವನ್ನು ಕಣ್ತುಂಬಾ ‌ನೋಡಿದೆ.ನನ್ನ ನೆನಹು ತುಂಬಿತು. ಭಾವ ಬಲಿಯುತು .ಲಿಂಗದಲ್ಲಿ ತನ್ಮಯನಾಗಿ ಶಿವ ಶಿವ ಹರಹರ ಮಂತ್ರಗಳಿಗೆ ಬೇರೆ ಬೇರೆ ಪಾರಿಭಾಷಿಕ ಪದಗಳನ್ನುಶರಣರು ಬಳಸಿದ್ದಾರೆ. ಮಂತ್ರಗಳಿಗೂ ಶರೀರದ ಷಟಚಕ್ರಗಳಿಗೂ ಇರುವ ಸಂಬಂಧ ವಚನಗಳ ಮೂಲಕ ಶರಣರು ಮಾಡಿ ಕೊಟ್ಯಿದ್ದಾರೆ.

ಕರಿಯಂಜುವುದು ಅಂಕುಶಕ್ಕಯ್ಯಾll
.ಗಿರಿ ಅಂಜುವುದು
ವಜ್ರಕ್ಕೆllತಮಂದ ಅಂಜುವುದು ಜ್ಯೊತಿಗೆll ಕಾನನ ಅಂಜುವುದು ಬೇಗೆಗೆ llಪಂಚಮಹಾ ಸೂತಕ ಕ್ಕಂಜುವುದು ll ಕೂಡಲ ಸಂಗನ ನಾಮಕ್ಕೆ.

ಬಸವಣ್ಣನ ಈ ಭಾಷಿಕ ಸಂವಾದಗಳು ಕರಿ, ಅಂಕುಶ,ಗಿರಿ ,ತಮಂದ ಯೋಗ ಭಾಷಿಕ ಪದಗಳಾಗಿವೆ. ಭಕ್ತ ಮತ್ತು ಭಗವಂತನ ನಡುವೆ ಉಂಟಾಗುವ ಶಿವಯೊಗದ ದಶ೯ನ ಇಲ್ಲಿದೆ.ಈ ದೇಹದ ಪಿಂಡಾಂಡದಲ್ಲಿ ಅಹಂಕಾರವೆಂಬ ಆನೆ ಪ್ರವೇಶ ಮಾಡಿತು. ಯೊಗದಲ್ಲಿ ಮೇರು ಪರ್ವತವನ್ನು ಹತ್ತಲು‌ ಪಿಂಡಾಂಡದಲ್ಲಿ ಕತ್ತಲೆಯೆ ತುಂಬಿತ್ತು. ಅಹಂಕಾರ ತುಂಬಿದ ಈ ಮನಸ್ಸು ಪಿಂಡಾಂಡದ ಲ್ಲಿ ಸುಜ್ಞಾನ ವನ್ನು ಕಾಣಲು ತವಕಿಸುತಿತ್ತು. ಈ ಬೆಳಕನ್ನು ಕಾಣುವ ತವಕ ಬಸವಣ್ಣ ನದು.

ಶಿವಯೊಗದ ಕೊನೆಯ ಹಂತ ಮೂಲಾಧಾರದಿಂದ ಸುಷುಮ್ನ ನಾಡಿ ಮಾರ್ಗಕ್ಕೆ ಬ್ರಹ್ಮ ದ್ವಾರ ಇದೆ. ಇಲ್ಲಿ ಕುಂಡಿಲಿನಿ ಶಕ್ತಿಯು ಸರ್ಪದಂತೆ ಸುತ್ತಿಕೊಂಡಿರುತ್ತದೆ.ಇಲ್ಲಿ ಓಂ ಕಾರವೆಂಬ ಪ್ರಣವ ನಾದವು ಸ್ಪುರಿಸುತ್ತಿರುತ್ತದೆ. ಭಕ್ತನ ಚೈತನ್ಯಾವಸ್ಥೆಗೆ ಸುಷುಮ್ನ ನಾಡಿ ಕಾರಣ ದಾಶ೯ನಿಕ ನಾದ ಬಸವಣ್ನ ಪಿಂಡಾಂಡದ ಈ ದೇಹದಲ್ಲಿ ಕುಂಡಿಲಿನಿ ಶಕ್ತಿಯು ಪ್ರಣವ ಮಂತ್ರದಿಂದ ಎಚ್ಚರಿಸಿದ್ದು ಕಂಡುಬರುತ್ತದೆ.

ಮಂತ್ರವು ದ್ಯಾನದ ಇನ್ನೊಂದು ಭಾಗ . ಸುಲಭವಾಗಿ ಹೇಳುವದಾದರೆ ಇಡೀ ವಚನಸಾಹಿತ್ಯ ದಲ್ಲಿ ಸಾಮಾಜಿಕ ಜಾತಿ ಖಂಡನೆ ವಚಗಳನ್ನು ಹೊರತು ಪಡಿಸಿದರೆ ಎಲ್ಲಾ ವಚನಗಳು ಭಕ್ತ ಮತ್ತು ಭಗವಂತನ ದ್ಯಾನ ಮತ್ತು ಮಂತ್ರದ ನಿವೇದನೆ ಯಾಗಿದೆ

ಗುರು ಲಿಂಗ ಜಂಗಮಕ್ಕೆ ತನು ಮನ ಧನ ವನ್ನರ್ಪಿಸ ಬೇಕು. ತ್ರಿವಿದ ದಾಸೊಹದ ಕಲ್ಪನೆ ಈ ಅರ್ಥ ದಲ್ಲಿ ತೆಗೆದು ಕೊಂಡಾಗ ಹೆಚ್ಚು ಶಕ್ತಿಯುತ ವಾಗುತ್ತದೆ. ಜಂಗಮಕ್ಕೆ ಧನವನ್ನು ಅರ್ಪಿಸಬೇಕು. ಕಾಯಕದಿಂದ ಬಂದುದನ್ನು ಜಂಗಮ ರೂಪಿಯಾದ ಜಗದ ಉದ್ದಾರಕ್ಕೆವಿನಿಯೊಗಿಸ ಬೇಕು. ಅಂದರ ಷಟ್ ಸ್ಥಲ ಮಾರ್ಗದಲ್ಲಿ ಮುಂದುವರಿದಂತೆಲ್ಲಾ ಅವುಗಳ ಸ್ವರೂಪದಲ್ಲಿ ವಿಲೀನ ವಾಗಿ ವಿಕಾಸವಾಗುತ್ತಾ ಹೋಗುವುದನ್ನು ಕಾಣಬಹುದು. ಅಂತೆಯೇ ಸಾಧನೆಯ ಸಾಂಕೇತಿಕ ಸ್ವರೂಪಗಳಾದ ಪಾದೊದಕ ಪ್ರಸಾದ ಗಳಿಗೂ ಈ ಮಾತು ಅನ್ವಯಿಸುತ್ತದೆ. ವಿಭೂತಿ ರುದ್ರಾಕ್ಷಿ ಗಳು ಇವೆಲ್ಲವನ್ನೂ ವ್ಯಾಪಿಸಿ ಕೊಂಡಿರುವ ಮಂತ್ರ ಇವುಗಳಲ್ಲಿ ಗೋಚರವಾಗುತ್ತದೆ.ವಿಕಾಸದ ಹಂತ ಭಕ್ತ ಸ್ತಲದ ಶ್ರದ್ದೆ . ಭಕ್ತಿ ಈ ಎಲ್ಲಾ ಹಂತಗಳಲ್ಲಿ ಯೂ ಅಷ್ಟಾವರಣ ಗಳಿರುತ್ತವೆ. ಇದನ್ನು ಶರಣರು ತಮ್ಮ ಭೋಧನೆಯಲ್ಲಿ ಮಾತ್ರವಲ್ಲದೆ ಆಚರಣೆಯ ಲ್ಲಿ ಯೂ ಸಾಧಿಸಿ ತೋರಿಸಿದ್ದಾರೆ.

-ಡಾ.ಸರ್ವಮಂಗಳ ಸಕ್ರಿ.
ಕನ್ನಡ ಉಪನ್ಯಾಸಕರು
ರಾಯಚೂರು.

.

Don`t copy text!