ಅನಿಕೇತನ
ಅನಿಕೇತನ ಎಂದರೆ ವಾಸಕ್ಕೆ ಮನೆ ಇಲ್ಲದಿರುವುದು ಎಂಬುದಾಗಿದೆ. ಮನೆ ಇಲ್ಲದಿರುವುದು ಎಂಬ ವಿಷಯವೇ ದೊಡ್ಡ ಅಪರಾಧ ಎಂಬಂತೆ ನಮ್ಮ ಸಮಾಜದಲ್ಲಿ ವಿಪರೀತ ಮನಸ್ಥಿತಿ ಉಂಟಾಗಿದೆ.
ಬಣ್ಣ,ಅಂತಸ್ತುಗಳಿಗೆ ಬಂಧಿಯಾಗದೇ ಚೇತನಕ್ಕಾಗಿ ಚಿಕ್ಕ ಗೂಡು ಕಟ್ಟಿ ಅದರಲ್ಲಿಯೇ ತೃಪ್ತಿ ಪಡು ಎಂದು ಕವಿ ತಿಳಿಸಿರುತ್ತಾರೆ.
ಅಕ್ಕಿ ಇದ್ದಾಗಲೇ ಅಲ್ಲಿ ಹೊಟ್ಟು ಇರುವ ಹಾಗೆ,ವಿವಿಧ ಮತಗಳಲ್ಲಿ ಸತ್ವಗಳು ಇದ್ದರೂ ಅರೆಬೆಂದ ತತ್ವಗಳಿಗೆ ಶರಣಾಗಿ ಬದುಕು ಸಾಗಿಸುತ್ತಿರುವಾಗ ಅಲ್ಲೊಂದು ಮನೆಯ ಚೇತನಕ್ಕೆ ಮುಂದೆ ಸಾಗು ಇಲ್ಲವೇ ಮುಂದೆ ಹಾರು ಎಂದು ಕವಿ ಹೇಳುತ್ತಾರೆ.
ಮಾನವ ನೀನು ಎಲ್ಲಿಯೂ ನಿಲ್ಲದೆ ಮನೆಯನ್ನು ಕಟ್ಟದೆ ನೀನಂದುಕೊಂಡ ಗುರಿಯನ್ನು ಮುಟ್ಟದೇ ಅಂತಿಮ ಸತ್ಯದ ಗುರಿಗಾಗಿ ಚೇತನ ಪಡೆಯುವ ಆಧ್ಯಾತ್ಮಕ್ಕಾಗಿ ಬದುಕು ಸಾರ್ಥಕಪಡಿಸಿಕೊಳ್ಳುವ ಆಲೋಚನೆ ನಿಮಗಿರಲಿ ಎನ್ನುತ್ತಾರೆ
ರಸರುಷಿ ಕುವೆಂಪು.
ಪ್ರಪಂಚ ಒಂದು ಚಿತ್ರಪಟ ಆ ಚಿತ್ರಪಟದ ಚಿತ್ತಾರಕ್ಕೆ ಬಳಸಿರುವ ವಿವಿಧ ರೀತಿಯ ಬಣ್ಣಗಳಂತೆ ನಮ್ಮನ್ನು ಭಗವಂತ ಬಳಸಿ ಚಿತ್ತಾರ ಬಿಡಿಸಿದ್ದಾನೆ.
ಅನಂತದೊಳಗೆ ಆತನೇ ಅನಂತವಾಗಿರುವಾಗ ನಾವು ನರ ಮಾನವರು ಯಾವ ಲೆಖ್ಖ.?
ನಮ್ಮೊಳಗಿನ ವಿವಿಧ ಜಾತಿ ಮತ ಪಂಥಗಳನ್ನು ಮೀರಿ ವಿಶ್ವಮಾನವ ಸಂಬಂಧಕ್ಕೆ ಕೈಚಾಚಿ ಕರೆ ಕೊಡೋಣ ಬಾಚಿ ತಬ್ಬಿಕೊಳ್ಳೋಣ ಎಂಬ ವಿಶ್ವಬಂಧುತ್ವದ ಕರೆಯನ್ನು ಕವಿ ನೀಡಿದ್ದಾರೆ.
ಚೇತನವು ನಮ್ಮ ಜೀವನಕ್ಕೆ ಅಂತಿಮ ಎಂದು ತಿಳಿಯೋಣ ಆಗ ಮನುಜ ನಿತ್ಯಯೋಗಿ ಆಗಲು ಸಾಧ್ಯ.
ಆ ಅಸತ್ಯದ ಅಗೋಚರ ಭ್ರಮರಾ ಲೋಕದಲ್ಲಿ ನಾವು ವಿಹರಿಸದೇ,ಬೇಡದ ಭಾವನೆಗಳ ಬೇಗುದಿಯಲ್ಲಿ ಕುದಿಯದೇ ಮುಂದೆ ಸಾಗು ಎಂಬ ಮಹಾನ್ ಸತ್ಯವನ್ನು ಅಜ್ಜ ತನ್ನ ಮೊಮ್ಮಗ ಚಿಂಟುವಿಗೆ ಹೇಳುತ್ತಾ ಪರೋಕ್ಷವಾಗಿ ಸಮಾಜದ ಜನತೆಗೆ ಒತ್ತಿ ಹೇಳಿಎಚ್ಚರಿಸಿದ್ದಾರೆ.
–ಶಂಕರ. ಜಿ.ಬೆಟಗೇರಿ