ಸನಾತನಿಗಳ–ಸಂಸ್ಕೃತಿ,ಶರಣರ—ಸಂಸ್ಕಾರ

ಸನಾತನಿಗಳ–ಸಂಸ್ಕೃತಿ,ಶರಣರ—ಸಂಸ್ಕಾರ

ಸನಾತನಿಗಳು ಸಂಸ್ಕೃತಿ ಸನಾತನಿಗಳಿಗೆ
ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ, ವರ್ಣವ್ಯವಸ್ಥೆಯನ್ನು ಹುಟ್ಟು ಹಾಕಿದ ಶ್ರೇಯಸ್ಸು ಬರುತ್ತದೆ. ಅಂದಿನಿಂದ ಇಂದಿನವರೆಗೂ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಲೆ ಬಂದಿದ್ದಾರೆ. ತಮ್ಮ ಧರ್ಮಶಾಸ್ತ್ರಗಳಲ್ಲಿ ಕೂಲಿಕಾರ್ಮಿಕರು ಮತ್ತು ಸ್ತ್ರೀಯರನ್ನು ಶೂದ್ರರೆಂದು ದುರ್ಬೋದಿಸಿದರು.

ಇದು ಋಗ್ವೇದದ ಕಾಲಾನಂತರ ಅಸ್ತಿತ್ವಕ್ಕೆ ಬಂದ ಧರ್ಮವಾಗಿದೆ. ಹಲವಾರು ರೀತಿ ನೀತಿ–ಜಾರಿಗೆ ತಂದರು. ವೈವಾಹಿಕ ಜೀವನ, ಸಾಮಾಜಿಕ-ಆರ್ಥಿಕತೆಗಳ ವಿಷಯಗಳಿಗಾಗಿ ಸಂಸ್ಕೃತ ಭಾಷೆಗಳಲ್ಲಿ ಸಾಮಾಜಿಕ ರೀತಿ-ನೀತಿ, ಧರ್ಮದ ರೀತಿ-ನೀತಿಗಳನ್ನು ಕಾಯ್ದೆ– ಕಾನೂನುಗಳನ್ನು ಜಾರಿಗೆ ತಂದರು. ತಾವೇ ಪ್ರತ್ಯಕ್ಷತಾ ದೇವರೆಂದು ತಾವು ದೇವರಿಗಿಂತ ಶ್ರೇಷ್ಠರೆಂದು ಹೇಳಿಕೊಂಡರು. ಮೂಲನಿವಾಸಿಗಳಿಗೆ, ಜನಸಾಮಾನ್ಯರಿಗೆ ಭಯ, ಭಕ್ತಿಗಳನ್ನು ಮನಸೋಇಚ್ಛೆ ಹೇರಲಾರಂಭಿಸಿದರು. ಅಂದಿನಿಂದ ಸಮಾಜದಲ್ಲಿ 2 ಗುಂಪುಗಳು ನಿರ್ಮಾಣವಾದವು. ಶೋಷಿತ ವರ್ಗ ಇನ್ನೊಂದು ಶೋಷಣೆಗೆ ಒಳಗಾದವರ ವರ್ಗ.

ವಿಪ್ರರು-ಶೋಷಣೆ ಮಾಡುವ ಸನಾತನವಾದಿಗಳು ಯಶಸ್ಸು ಕಂಡರು. ಸಂಸ್ಕೃತ ಭಾಷೆಯನ್ನು ಉಪಯೋಗಿಸಿಕೊಂಡು ಜನಸಾಮಾನ್ಯರನ್ನು ಮೃತ್ಯುಕೂಪಕ್ಕೆ ತಳ್ಳಿದರು.

ಉತ್ಪತ್ತಿ ಏವಪ್ರಸ್ಯ ಮೂರ್ತಿ: ಸ.ಹಿ ಧರ್ಮಸ್ಯ ಶಾಶ್ವತೀ 
ಸ ಹಿಇ ಧರ್ಮಾರ್ಥಂ ಉತ್ಪನ್ನೊ ರಿಂದ ಬ್ರಹ್ಮ ಭೂಯಾಯ ಕಲ್ಪತೇ!!
ಸರ್ವಂ ಸ್ವ ಬ್ರಾಹ್ಮಣಸ್ಯ ಇದಂ ಯತ್ಕಿಂಚಿತ್ ಜಗತೀಗತಂ 
ಶ್ರೇಷ್ಟ್ಯೇನಾಭಿಜನೇನೇದಂ ಸರ್ವಂ ವೈ ಬ್ರಾಹ್ಮಣೋ ರ್ಹತಿ

ಧರ್ಮ ಪರಿಪಾಲನೆಗಾಗಿಯೇ ಬ್ರಾಹ್ಮಣ ಜನ್ಮ ತಾಳಿದ್ದಾನೆ. ಪ್ರಪಂಚದಲ್ಲಿ ಏನೇನಿದೆಯೋ ಅದೆಲ್ಲಾ ಬ್ರಾಹ್ಮಣ ಸ್ವತ್ತು. ಹುಟ್ಟಿನ ಶ್ರೇಷ್ಠತೆಯಿಂದ ಅವನು ಎಲ್ಲರಿಗೂ ಅಧಿಕಾರಿಯಾಗಿದ್ದಾರೆ. ಬ್ರಾಹ್ಮಣ ತನ್ನ ಅನ್ನವನ್ನು ಮಾತ್ರ ತಾನು ಉಣ್ಣುತ್ತಾನೆ. ತನ್ನ ಬಟ್ಟೆಯನ್ನು ಮಾತ್ರ ತಾನು ಧರಿಸುತ್ತಾನೆ. ಬ್ರಾಹ್ಮಣನ ಉಪಕಾರದಿಂದಲೇ ಎಲ್ಲ ಮನುಷ್ಯರು ಬದುಕಿದ್ದಾರೆ.

ಧರ್ಮಸ್ಯ ಬ್ರಾಹ್ಮಣೋ ಮೂಲಂ ಬ್ರಾಹ್ಮಣ ಸಂಭವೇನೈವ ದೇವಾನಾನಾಮಾಪಿ ದೈವತಂ ಪ್ರಮಾಣಂ ಚೈವ ಲೋಕಸ್ಯ ಬ್ರಹ್ಮಾತ್ರೈವ ಹಿ ಕಾರಣಂ

ಬ್ರಾಹ್ಮಣ ಧರ್ಮದ ಮೂಲ ತನ್ನ ಹುಟ್ಟಿನಿಂದಲೇ ಅವನು ದೇವತೆಗಳಿಗೂ ದೇವರನಾಗಿದ್ದಾನೆ ಅವನ ಮಾತು ಜನರಿಗೆ ಪ್ರಮಾಣಭೂತವಾದ.

ಇಷ್ಟೇ ಸಾಲದಂತೆ ಬ್ರಾಹ್ಮಣನಾದವನು ಮದುವೆಯ ವಿಚಾರದಲ್ಲಿ ಬ್ರಾಹ್ಮಣರ ನಾಲ್ವರು, ಕ್ಷತ್ರಿಯರ ಮೂವರನ್ನು, ವೈಶ್ಯರ ಇಬ್ಬರನ್ನು, ಶೂದ್ರ ಜಾತಿಯ ಒಬ್ಬರು ಹೆಣ್ಣುಮಕ್ಕಳ ಮದುವೆಯಾಗಲು ಮನುಸ್ಮೃತಿಯಲ್ಲಿ ಉಲ್ಲೇಖಿಸಿದ್ದಾನೆ.

ಅವಿದ್ವಾಂಶ್ಚೈವ ವಿದ್ವಾಂಶ್ವ ಬ್ರಾಹ್ಮಣೋ ದೈವತಂ ಮಹತ್ ! ಯಾನುಪಾಶ್ರಿತ್ಯ ತಿಷ್ಠಂತಿ ಲೋಕಾ: ದೇವಾ: ಚ ಸರ್ವದಾ !!
ಬ್ರಾಹ್ಮಣ ಜ್ಞಾನಿ ಯಾಗಿರಲಿ ಅಜ್ಞಾನಿಯಾಗಿರಲಿ ಅವನು ಪ್ರತ್ಯಕ್ಷ ದೇವರು ಮೂರು ಲೋಕಗಳು ದೇವಾನುದೇವತೆಗಳು ತಮ್ಮ ಅಸ್ತಿತ್ವಕ್ಕಾಗಿ ಬ್ರಾಹ್ಮಣನಿಗೆ ಋಣಿಯಾಗಿವೆ. ಇದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾಡಿಕೊಂಡ ಉಪಾಯ.
ನಾವಿಂದು ಇಸ್ಲಾಂ ಧರ್ಮದಲ್ಲಿ ಹೆಣ್ಣುಮಕ್ಕಳಿಗೆ ವಿಧಿಸಿದ ಕಟ್ಟುಪಾಡುಗಳನ್ನು ಅಂದಿನ ವಿಪ್ರರು ಇದಕ್ಕಿಂತಲೂ ಕ್ರೂರವಾದ ನಿಯಮಾವಳಿಗಳನ್ನು ಮಾಡಿದ್ದರು. ಶಿಶು ವಿವಾಹ, ಬಾಲ್ಯ ವಿವಾಹ, ಗಂಡ ಸತ್ತ ಮೇಲೆ ತಲೆಬೋಳಿಸಿ ಕತ್ತಲೆ ಕೋಣೆಯಲ್ಲಿ ಕುಳ್ಳರಿಸುವುದು. ದೇವರನ್ನು ಪೂಜಿಸಲು ಅಧಿಕಾರವಿಲ್ಲ. ತಿಂಗಳದಲ್ಲಿ ಐದು ದಿನ ಯಾರನ್ನು, ಯಾವ ವಸ್ತುವನ್ನು ಮುಟ್ಟದೆ ಅಮಾಯಕರಂತೆ ಬದುಕು ಸಾಗಿಸಬೇಕು. ಹೆಣ್ಣು, ನಾಲ್ಕು ಗೋಡೆಗಳ ಮಧ್ಯದಲ್ಲಿ ಬದುಕುವ ಭೋಗದ ವಸ್ತುವಾಗಿ ಕಂಡುಕೊಂಡಿದ್ದರು.
ಪ್ರೊ: ಮ್ಯಾಕ್ಸ್ ಮುಲ್ಲರ್ ಅವರು ಹೇಳಿದಂತೆ “ಯಾವುದಕ್ಕೂ ಹೇಸದ ಪುರೋಹಿತ ವರ್ಗ ಏನು ಬೇಕಾದರೂ ಮಾಡಬಲ್ಲುದು.”

ಇಮಾ ನಾರೀ: ಅವಿಧವಾ: ಸುಪತ್ನೀ ರಾಂಜನೇನ ಸರ್ಪಿಷಾ ಸಂ ವಿಶಂತು|ಅನಶ್ರವೋ ಅನಮೀಮಾ: ಸರತ್ನಾ ಆರೋಹಂ ತು ಜನಯೋ ಯೋನಿಮಗ್ರೇ
ಯುದ್ದ ಭೂಮಿಯಲ್ಲಿ ಹೋರಾಡಿ ಮಡಿದ ವೀರನ ಪತ್ನಿಯು ಗಂಡನ ಚಿತೆಯೊಂದಿಗೆ ಸಹಗಮನ ಮಾಡುವಂತೆ ಮೂಲ ಋಗ್ವೇದವನ್ನು ತಿದ್ದಿ (ಋಗ್ವೇದದಲ್ಲಿ ವಿಧವಾ ವಿವಾಹಕ್ಕೆ ಅವಕಾಶವಿತ್ತು) ಅಗ್ರೆ—-ಮೊದಲು ಇದನ್ನು ಬದಲಾಯಿಸಿ ಅಗ್ನಿ—ಬೆಂಕಿ ಎಂದು ಹೇಳಿದರು.
ಒಟ್ಟಿನಲ್ಲಿ ಹೇಳುವುದಾದರೆ ಸ್ವೇಚ್ಛಾಚಾರದ ಆಡಳಿತ ಪುರೋಹಿತ ವರ್ಗದವರಲ್ಲಿತ್ತು

 

ಶರಣರು——-ಸಂಸ್ಕಾರ
೧೨ನೆಯ ಶತಮಾನದಲ್ಲಿ ಜಗತ್ತು ಕಂಡು ಕೇಳರಿಯದ ಅಪರೂಪದ ಕ್ರಾಂತಿ ಅಪ್ಪ ಬಸವಣ್ಣನವರು ಸ್ಥಾಪಿಸಿದರು. ಅದುವೇ ಜಾತಿ–ಧರ್ಮ,ಮೇಲು–ಕೀಳು,ವರ್ಗ–ವರ್ಣ ರಹಿತ ಸಮಾಜ. ಲಿಂಗಾಯತ ಸಮಾಜದಲ್ಲಿ ಹುಟ್ಟಿನಿಂದ ಯಾರೂ ದೊಡ್ಡವರಲ್ಲ–ಚಿಕ್ಕವರಲ್ಲ.

ಶೆಟ್ಟಿ ಎಂಬೆನೆ ಸಿರಿಯಾಳನ ಡೋಹಾರನೆಂಬೆನೆ ಕಕ್ಕಯ್ಯನ ಮಾದಾರನೆಂಬೆನೆ ಚೆನ್ನಯ್ಯನ ಆನು ಹಾರುವನೆಂದರೆ ಕೂಡಲಸಂಗಮದೇವ ನಗುವನಯ್ಯಾ

ಇಲ್ಲಿ ಅವರವರ ಕಾಯಕದಿಂದ ಅವರನ್ನು ಗುರುತಿಸಲಾಗಿದೆ. ಆದರೆ ವಿಪ್ರನಾದ ಅಥವಾ ಪುರೋಹಿತನಾದ ನನ್ನ ಕಾಯಕ ಏನು?ಏನೂ ಇಲ್ಲ ಎಂದಾಗ ಕೂಡಲಸಂಗಮದೇವ ನಗುವನೆಂದು ಸ್ಪಷ್ಟಪಡಿಸಿದ್ದಾರೆ.

ಲಕ್ಷಾಂತರ ಶರಣ ಶರಣ ಯರಿಗೆ ಅಕ್ಷರ ಅನ್ನ ಕಾಯಕ ದಾಸೋಹ ತತ್ವವನ್ನು ಹೇಳಿಕೊಟ್ಟ ಅದರಂತೆ ನಡೆದ ನಡೆದು ನೋಡಿದ ಜಗತ್ತಿನ ಏಕೈಕ ವ್ಯಕ್ತಿಯೆಂದರೆ ಅದು ಬಸವಣ್ಣನು ಮಾತ್ರ

ಸ್ತ್ರೀ ಸಮಾನತೆಗಾಗಿ ಲಿಂಗಭೇದ ತೊಡೆದುಹಾಕಿದನು.ಸೂಳೆ ಸಂಕವ್ವೆಯನ್ನು ತಾಯಿಯೆಂದು ಕರೆದವರು ಶರಣರು. ಕಾಳವ್ವೆ, ಗೊಗ್ಗವ್ವೆ, ಸತ್ಯಕ್ಕ, ಮುಕ್ತಾಯಕ್ಕ, ಅಕ್ಕಮ್ಮ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ, ಲಕ್ಕಮ್ಮ, ನಾಗಲಾಂಬಿಕೆ, ದುಗ್ಗಳೆ, ರೆಮ್ಮವ್ವೆ, ಬೋಂತಾದೇವಿ, ಲಿಂಗಮ್ಮ, ಗುಡ್ಡವ್ವೆ, ರಾಯಮ್ಮ, ಕೇತಲದೇವಿ ಸಾವಿರಾರು ಸಂಖ್ಯೆಯ ಶಿವಶರಣೆಯರು ಅನುಭವ ಮಂಟಪದಲ್ಲಿ ಮುಕ್ತ ಅವಕಾಶವನ್ನು ಹೊಂದಿದವರಾಗಿದ್ದರು. ಜಗತ್ತಿನ ಪ್ರಪ್ರಥಮ ಪಾರ್ಲಿಮೆಂಟ್ ಎಂದು ಗುರುತಿಸಿಕೊಳ್ಳುವ ಅನುಭವ ಮಂಟಪವು ಸರ್ವ ಸಮಾನತೆಯಿಂದ ಕೂಡಿತ್ತು.—ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ

ದಾಸಿಯ ಪುತ್ರನಾಗಲಿ ವೇಷ ಪುತ್ರನಾಗಲಿ ಶಿವದೀಕ್ಷೆಯ ಆದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ ಹೀಗಲ್ಲದೆ ಉದಾಸೀನವ ಮಾಡುವವರಿಗೆ ಪಂಚಮಹಾಪಾತಕ ನರಕ ಕಾಣಾ ಕೂಡಲಸಂಗಮದೇವ

ವೇದಗಳ ಕಾಲದಲ್ಲಿ ನಿಮ್ನ ವರ್ಗದ ಜನರು ಹಾದಿಬೀದಿಯಲ್ಲಿ ಅಲೆದಾಡುವಂತೆ ಇರಲಿಲ್ಲ. *ಸಂಬೋಳಿ ಸಂಬೋಳಿ* ಎಂದು ಕೂಗಿ, ಗಂಟೆಯನ್ನು ಬಾರಿಸುತ್ತಾ ಊರೊಳಗೆ ಬರಬೇಕು. ಅವರ ನೆರಳು ಕೂಡ ಪುರೋಹಿತ ವರ್ಗದ ಮೇಲೆ ಬೀಳಬಾರದು ಎನ್ನುವ ಕಟ್ಟುನಿಟ್ಟು ನಿಯಮಗಳಿದ್ದವು. ಆದರೆ ಬಸವಾದಿ ಶರಣರು ಇಂತಹ ಅನಿಷ್ಟ ಪದ್ಧತಿಗಳನ್ನು ತೆಗೆದುಹಾಕಿ ದಲಿತ, ಶೂದ್ರರನ್ನು ತಂದೆ– ತಾಯಿ ಎಂದು ಒಪ್ಪಿಕೊಂಡರು.

ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು ಇಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ ಸಂಗವ ಮಾಡಿದರು ಅವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವನ ಸಾಕ್ಷಿಯಾಗಿ

ಶರಣರು ಮಾಟ- ಮಂತ್ರ, ತಂತ್ರ– ಯಂತ್ರ, ಮೂಢನಂಬಿಕೆ ,ಕಂದಾಚಾರ, ಕರ್ಮಸಿದ್ಧಾಂತ ಇಂತಹವುಗಳನ್ನು ವಿರೋಧಸಿ ಹೋರಾಟವನ್ನು ಮಾಡಿದರು.
ಸಮಗಾರ ಹರಳಯ್ಯನ ಮಗ ಶೀಲವಂತ, ಬ್ರಾಹ್ಮಣ ಮದುವರಸನ ಮಗಳು ಕಲ್ಯಾಣಮ್ಮ ಜೊತೆ ಮಾಡಿದ ವಿವಾಹವೇ ರಕ್ತಕ್ರಾಂತಿಗೆ ಕಾರಣವಾಯಿತು. ಪಟ್ಟಭದ್ರ ಹಿತಾಸಕ್ತಿಗಳು ಶರಣರ ಕಗ್ಗೊಲೆಯನ್ನು ಮಾಡಿದರು. ವಚನಗಳ ತಾಡೋಲಿಕೆಗಳ ಕಟ್ಟುಗಳನ್ನು ರಾಶಿ ರಾಶಿಯಾಗಿ ಸುಟ್ಟುಹಾಕಿದರು.

ಒಟ್ಟಿನಲ್ಲಿ ಹೇಳುವುದಾದರೆ, ಜಗತ್ತಿನ ಎಲ್ಲಾ ಧರ್ಮಗಲ್ಲಿರುವ ಅತ್ಯುತ್ತಮವಾದ ಅಂಶಗಳು ಶರಣ ಶರಣೆಯರ ವಚನಗಳಲ್ಲಿ ಕಾಣುತ್ತೇವೆ ಆದರೆ ವಚನಗಳಲ್ಲಿರುವ ಅತ್ಯಮೂಲ್ಯವಾದ ಅಂಶಗಳನ್ನು ಜಗತ್ತಿನ ಇನ್ಯಾವುದೇ ಧರ್ಮದಲ್ಲಿ ನಾವು ಕಾಣಲು ಸಾಧ್ಯವಿಲ್ಲ

ಪುರೋಹಿತರು, ವಿಪ್ರರು ತಮ್ಮದೇ ಆದಂತಹ ಕೆಟ್ಟ ಸಂಸ್ಕೃತಿಯನ್ನು ಶತ ಶತಮಾನಗಳಿಂದ ಭಯ ಮೂಡಿಸಿ, ದಬ್ಬಾಳಿಕೆ, ಒತ್ತಾಯದಿಂದ ಅನುಸರಿಸುವಂತೆ ಮಾಡಿದ್ದರು.

ಆದರೆ 12ನೇ ಶತಮಾನದ ಬಸವಾದಿ ಪ್ರಮಥರು ಏನನ್ನು ಪ್ರಚೋದಿಸಿದೆ, ಒತ್ತಾಯಿಸದೆ, ಆಸೆ ಆಮಿಷಗಳನ್ನು ತೋರಿಸದೆ ಲಿಂಗ ಭೇದ ಮರೆತು, ಜಾತಿಭೇದ ಮರೆತು ಸರ್ವಸಮಾನತೆಯ ಧರ್ಮವನ್ನು ಸ್ಥಾಪಿಸಿದರು.ವೃತ್ತಿ,ಜಾತಿಯಿಂದ ತುಳಿತಕ್ಕೆ ಒಳಪಟ್ಟಿದ್ದರೂ ಅವರಿಗೆ ಅತ್ಯುತ್ತಮವಾದ ಸಂಸ್ಕಾರವನ್ನು ನೀಡಿ ಮಾನವರನ್ನು ದೇವರನ್ನಾಗಿ ಮಾಡಿದವರು ಶರಣರು

ರವೀಂದ್ರ. ಆರ್. ಪಟ್ಟಣ.
ಮುಳಗುಂದ——ರಾಮದುರ್ಗ.

Don`t copy text!