ಕಲ್ಯಾಣಮ್ಮನ ಕಾಲಜ್ಞಾನ ವಚನಗಳು
ಮಹಾಮಹೇಶ್ವರ ಸಮಗಾರ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮ ಶರಣಿ ಕಲ್ಯಾಣಮ್ಮನವರು ತ್ರಿಕಾಲ ಇಷ್ಟಲಿಂಗ ಪೂಜಾನಿರತರು, ಕಲ್ಯಾಣಮ್ಮನವರು ಕಾಲಜ್ಞಾನವನ್ನೂ ಬಲ್ಲವರಾಗಿದ್ದರು. ಅವರ ಕಾಲಜ್ಞಾನ ಪ್ರಸಿದ್ಧವಿದೆ, ಕಲ್ಯಾಣದಲ್ಲಿ ಕ್ರಾಂತಿಯಾಗುವ ಸೂಚನೆಯನ್ನು ಮೊದಲೇ ಅನುಭವ ಮಂಟಪದಲ್ಲಿ ಶೀಲವಂತ ಹಾಗೂ ಲಾವಣ್ಯವತಿಯರ ವಿವಾಹವಾಗುವ ಪೂರ್ವದಲ್ಲಿಯೇ ನುಡಿದಿದ್ದರು.
ಅವರ ಕಾಲಜ್ಞಾನ ಸತ್ಯವಾಯಿತು. ಕಲ್ಯಾಣದಲ್ಲಿ ಕ್ರಾಂತಿಯಾಯಿತು, ರಾಜ ಬಿಜ್ಜಳನ ವಧೆಯೂ ನಡೆದು ಹೋಯಿತು. ಶರಣರೆಲ್ಲ ದಿಕ್ಕು ದಿಕ್ಕಿಗೆ ಅಲೆಯತೊಡಗಿದರು. ಅಂಥ ಸೂಚನೆಯನ್ನು ನೀಡಿದಂಥ ಕಲ್ಯಾಣಮ್ಮನವರು ಜ್ಞಾನನಿಧಿಯಾಗಿದ್ದರು. ಶರಣ ಶರಣೆಯರ ಕಣ್ಮಣಿಯಾಗಿದ್ದರು.
ಪತಿಗೆ ತಕ್ಕ ಸತಿ ಕಲ್ಯಾಣಮ್ಮ, ‘ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ’ ಎಂಬಂತೆ ಶರಣ ಶರಣೆಯರಾದ ಈ ದಂಪತಿಗಳೇರ್ವರಿಗೆ ಸ್ಪುರದ್ರೂಪಿಯಾದ ಶೀಲವಂತನೆಂಬ ಸುಪುತ್ರ, ಈ ತ್ರಿಮೂರ್ತಿಗಳು ಹೊರ ಹೊರಟರೆಂದರೆ ಆದೊಂದು ರಮನೀಯ ದೃಶ್ಯ,ಪಾತಿವ್ರತ್ಯವೇ ರೂಪ, ವಿದ್ಯೆಯೇ ಕುರೂಪಿಗಳಿಗೆ ಸುಂದರ ರೂಪ, ಪತಿವ್ರತೆಯಾಗಿ, ಭಾನಿಯಾಗಿ ಶೋಭಿಸಿದಳು ಕಲ್ಯಾಣಮ್ಮ. ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನ ಕಾಲಜ್ಜಾನದ ಎರಡು
ವಚನಗಳನ್ನು ನೋಡಲಾಗಿ
ಆ ಕೈಲಾಸ ಹಾಳಾಗಿ 1 ಭೂ ಕೈಲಾಸವೆ ತುಂಬಿ ಶಿಲೆಯ ಪೂಜೆಗಳು ಅಳಿದು | ಶಿವನು ಪ್ರತ್ಯಕ್ಷವಾಗಿ ಕರೆದರೆ ಅಲ್ಲಲ್ಲಿ ಓಯೆಂದು ನಿಜ ಭಕ್ತರಲ್ಲಿ ಪೂಜೆಗೊಳ್ಳುತ್ತ ಬಸವನ ಉತ್ಸವ ಪಸರಿಸಿ ಮನೆ ಮನೆಗೆ ಲೀಲೆ
ತೀರ್ಥ ಪ್ರಸಾದಗಳು ಬಸವನೊಬ್ಬನೇ ಗುರುವು | ಶಿವ ತಾನೋರ್ವನೇ ದೇವ ಪ್ರಭು ಒಬ್ಬನೇ ಜಂಗಮ 1 ಇಂತು ಗುರು-ಲಿಂಗ-ಜಂಗಮದ ಹೊರತು ಮಿಕ್ಕ ಉಳಿದವರೆಲ್ಲ ಭಕ್ತರಾಗಿರ್ಪರು.
ಹರನ ಭಕ್ತರು ಪರಮನ ನೋಡಲು ಪರಮ ಪದವಿಯದಹುದು | ಶರಣರೆಲ್ಲರು ನೋಡಿ ಸುಖಿಸುವರು ಸುಖದ ಸಾಮ್ರಾಜ್ಯ ಪದವಿಯಾಗುವುದು
ಬರಿದೆ ಭ್ರಮೆಯಲ್ಲ, ಜರಿದವರಿಗೆ ನರಕ ತಪ್ಪದು | ಶರಣರು ಬೇಗನೇ ಬ೦ದಾರು ಬರಕೊಳ್ಳಿ. ಹೀಗೆಂದು ಹರಳಯ್ಯನ ಪಟ್ಟದ ರಾಣಿಯಾದ ಕಲ್ಯಾಣಮ್ಮನು ಕಾಲಜ್ನಾನದಲ್ಲಿ ನೋಡಿ ಹೇಳಿದಳು.. ಇದು ಸತ್ಯವು |
ಭವಿಷ್ಯದಲ್ಲಿ ಸಂಭವಿಸಹುದಾದ ಕೆಲವು ಮುಖ್ಯ ಘಟನೆಗಳನ್ನು ಸಾರುವ ನುಡಿಗಳೇ ಕಾಲಜ್ಞಾನದ ಪದಗಳು ದಿಟ ಕನ್ನಡ ಸಾಹಿತ್ಯದ ಕೃತಿಗಳಲ್ಲಿ (ವಚನ) ಇವು ಅಧಿಕವಾಗಿ ಕಂಡುಬರುತ್ತದೆ. ಮಾನವನು ತನ್ನ ಅರಿವಿನಿಂದ ಭವಿಷ್ಯವನ್ನು ತಿಳಿದು ಮುಂದಾಗಬಹುದಾದ ಅನಾಹುಗಳನ್ನೂ ಅವುಗಳ ನಿವಾರಣೋಪಾಯಗಳನ್ನೂ ಹೇಳುತ್ತಿದ್ದರೆಂದು ನಂಬಿಕೆ .
–ಎಸ್ ಎಮ್ ಕಮಲಾಪೂರ